ಹಾಸನದಲ್ಲಿ ಜಿಲೆಟಿನ್ ಸ್ಪೋಟ – ಇಬ್ಬರ ಕಾರ್ಮಿಕರ ಸಾವು

ಹಾಸನ: ಶಿವಮೊಗ್ಗ, ಚಿಕ್ಕಬಳ್ಳಾಪುರದಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣ ಇನ್ನೂ ಜನಮಾನಸದಲ್ಲಿ ಹಸಿರಾಗಿರುವಾಲೇ, ಹಾಸನದಲ್ಲಿ ಅಂಥಾದ್ದೇ ಒಂದು ದುರಂತ ಸಂಭವಿಸಿದೆ.

ಸ್ಪೋಟಕ ವಸ್ತುಗಳನ್ನು ಅನ್‌ಲೋಡ್ ಮಾಡುವ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ, ಓರ್ವ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿ ಬಳಿ ನಡೆದಿದೆ.

ಚಾಕೇನಹಳ್ಳಿ ಗ್ರಾಮದ ಸಮೀಪವಿರುವ ಸ್ಫೋಟಕಗಳನ್ನು ಸಂಗ್ರಹಿಟ್ಟಿದ್ದ ಗೋಡೌನ್‌ನಲ್ಲಿ ಸ್ಫೋಟ ಸಂಭವಿಸಿದ್ದು, ಅನ್‌ಲೋಡ್ ಮಾಡುವ ವೇಳೆ ಜಿಲೆಟಿನ್ ಕಡ್ಡಿ ಸ್ಪೋಟಗೊಂಡು ದುರ್ಘಟನೆ ಸಂಭವಿಸಿದೆ.ಇನ್ನು ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ, ಕೂಡಲೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಮತ್ತೊಂದು ಜಿಲಿಟೆನ್ ದುರಂತ: 6 ಜನ ಕಾರ್ಮಿಕರ ಸಾವು

ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿರುವ ಒಬ್ಬ ಕಾರ್ಮಿಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಸದ್ಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿರುವ ಹಾಸನ ಜಿಲ್ಲಾ ಎಸ್‌ಪಿ ನಂದಿನಿ, ಘಟನೆ ಬಗ್ಗೆ ವಿವರಣೆ ಪಡೆದಿದ್ದಾರೆ.

ಈ ಘಟನೆಯಲ್ಲಿ ಬೆಟ್ಟದಹಳ್ಳಿ ಗ್ರಾಮದ ಸಂಪತ್ (27) ನಟರಾಜ (35) ಮೃತರಾಗಿದ್ದಾರೆ. ಮತ್ತೋರ್ವ ಗಾಯಾಳು ರವಿಕುಮಾರ್ ಅವರನ್ನು ಬೆಂಗಳೂರಿಗೆ ರವಾನೆ ಮಾಡಲಾಗಿದೆ.

ಸ್ಫೋಟದ ರಭಸಕ್ಕೆ ಓರ್ವ ಕಾರ್ಮಿಕನ ದೇಹ ಸುಮಾರು 300 ಮೀಟರ್‌ ದೂರದವರೆಗೂ ಹಾರಿ ಹೋಗಿದ್ದು, ದುರ್ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನ ಸಂಬಂಧಿಕರ ರೋದನ ಮುಗಿಲು ಮುಟ್ಟಿದೆ.ಈ ಸ್ಫೋಟಕ ಸಂಗ್ರಹಾಗಾರಕ್ಕೆ ಲೈಸೆನ್ಸ್ ಇತ್ತು ಎಂದು ಹಾಸನ ಎಎಸ್ಪಿ ನಂದಿನಿ ಹೇಳಿಕೆ ನೀಡಿದ್ಧಾರೆ. ಆದ್ರೆ, ಇಲ್ಲಿ ಅಕ್ರಮವಾಗಿ ಸ್ಫೋಟಕ ಸಂಗ್ರಹಿಸಿದ್ದೇ ಘಟನೆ ಕಾರಣ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ನಿಗೂಢ ಸ್ಪೋಟ : 15 ಮಂದಿ ಸಾವು

ಈ ವಿಚಾರವಾಗಿ ಕಳೆದ ತಿಂಗಳೇ ಹಾಸನ ಡಿಸಿ ಗಮನಕ್ಕೆ ತಂದಿದ್ದೆ ಎಂದು ಮಂಜೇಗೌಡ ಹೇಳಿದ್ದಾರೆ. ಹೇಮಾವತಿ ಡ್ಯಾಂ ಸಮೀಪ‌ದಲ್ಲೇ ಇರುವ ಕಾರಣ ಈ ಗೋಡೌನ್ ದಾಸ್ತಾನು ಬೇಡ ಅಂತ ಡಿಸಿ ಗಮನಕ್ಕೆ ತಂದಿದ್ದೆ ಎಂದು ಬಾಗೂರು ಮಂಜೇಗೌಡ ತಿಳಿಸಿದ್ಧಾರೆ.

ಸ್ಫೋಟಕ ವಸ್ತುಗಳಿಂದಾಗಿ ರಾಜ್ಯದಲ್ಲಿ ಎಷ್ಟೆಲ್ಲ ಅನಾಹುತ ಸಂಭವಿಸಿದರೂ ಜನ, ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅಕ್ರಮ ಕಲ್ಲುಗಣಿಗಾರಿಕೆಗೆ ರಾಜ್ಯ ಸರಕಾರ ನಿಯಂತ್ರಣ ಹೇರದ ಕಾರಣ ಇಂತಹ ಘಟನೆಗಳು ಸಂಭವಿಸುತ್ತಿವೆ.

Donate Janashakthi Media

Leave a Reply

Your email address will not be published. Required fields are marked *