ಬೆಂಗಳೂರು: ರಾಜ್ಯ ಸರ್ಕಾರವು ಸಿನಿಮಾ, ಸಾಂಸ್ಕೃತಿಕ ಕಲಾವಿದರ ಅನುಕೂಲಕ್ಕಾಗಿ ಸಿನಿಮಾ ಟಿಕೆಟ್‌ಗಳ ಮೇಲೆ ಮತ್ತು OTT ಸಬ್‌ಸ್ಕ್ರಿಪ್ಶನ್ ಶುಲ್ಕದ ಮೇಲೆ ಶೇ. ಒಂದರಿಂದ ಎರಡರಷ್ಟು ಹೊಸ ಸೆಸ್ ವಿಧಿಸಲು ಯೋಜಿಸಿದೆ.
ಜುಲೈ 19ರಂದು ವಿಧಾನಸಭೆಯಲ್ಲಿ ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ 2024 ಮಂಡಿಸಲಾಯಿತು. ಸಿನಿಮಾ ಟಿಕೆಟ್ & ಒಟಿಟಿ ವೇದಿಕೆಗಳ ಸಬ್‌ಸ್ಕ್ರಿಪ್ಷನ್ ಶುಲ್ಕಗಳ ಮೇಲೆ ಶೇಕಡಾ 2ರಷ್ಟು ಸೆಸ್ ವಿಧಿಸಲು ಯೋಜಿಸಿದೆ. ಇದರಿಂದ ಸಿನಿಮಾ, ಸಾಂಸ್ಕೃತಿಕ ಕಲಾವಿದರಿಗೆ ಅನುಕೂಲವಾಗುವ ರೀತಿ ತೆರಿಗೆ ಸಂಗ್ರಹ ನಡೆಯಲಿದೆ.
ಕಲಾವಿದರಿಗೆ ಒಳಿತು ಮಾಡುವುದೇ ಈ ಮಸೂದೆಯ ಉದ್ದೇಶವಾಗಿದೆ. ಕಲಾವಿದ, ತಂತ್ರಜ್ಞ, ನಿರ್ಮಾಪಕ ಹೀಗೆ ನಾನಾ ವಿಭಾಗಗಳಲ್ಲಿ ಕೆಲಸ ಮಾಡುವವರು ಈ ನಿಧಿಯ ಭಾಗವಾಗಿರಲಿದ್ದಾರೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ರಂಗಭೂಮಿಯಲ್ಲಿದ್ದವರಿಗೂ ಕೂಡ ಈ ಪ್ರಯೋಜನ ಸಿಗುವಂತೆ ಮಾಡುವ ಆಶಯ ಹೊಂದಿದೆ. ಸರ್ಕಾರವು ರಾಜ್ಯದಲ್ಲಿನ ಸಿನಿಮಾ, ಸಾಂಸ್ಕೃತಿಕ ಕಾರ್ಯಕರ್ತರಿಗೆ ಅನುಕೂಲವಾಗುವ ರೀತಿಯಲ್ಲಿ ‘ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ & ಕಲ್ಯಾಣ ನಿಧಿ’ ಎಂಬ ನಿಧಿ ಸ್ಥಾಪಿಸಲು ಮಸೂದೆಯನ್ನು ಪ್ರಸ್ತಾಪಿಸಿತ್ತು.
ಈ ಮಸೂದೆಯ ಪ್ರಕಾರ ರಾಜ್ಯದಲ್ಲಿ ಸಿನಿಮಾ ಟಿಕೆಟ್‌ಗಳು, ಚಂದಾದಾರಿಕೆ ಶುಲ್ಕಗಳು ಆದಾಯದ ಮೇಲೆ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಸೆಸ್ ವಿಧಿಸಲಾಗುಸರ್ಕಾರವು ಸೂಚಿಸಿದಂತೆ ಸೆಸ್ 1 ರಿಂದ 2 ಪರ್ಸೆಂಟ್ ಸೆಸ್ ಇರಲಿದೆ. ಜೊತೆಗೆ ಮೂರು ವರ್ಷಗಳಿಗೊಮ್ಮೆ ದರ ಪರಿಷ್ಕರಣೆ ಮಾಡಲಾಗುವುದು.
ಏಳು ಸದಸ್ಯರ ಈ ಮಂಡಳಿಯಲ್ಲಿ ಉಸ್ತುವಾರಿ ಸಚಿವರು, ಸರ್ಕಾರದಿಂದ ಅನುಮೋದಿತ ಕರ್ನಾಟಕ ಜಾನಪದ ಅಕಾಡೆಮಿ,ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕರ್ನಾಟಕ ಬಯಲಾಟ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿಗಳಿಂದ ಗುರುತಿಸಲ್ಪಟ್ಟ ಸಿನಿ & ಸಾಂಸ್ಕೃತಿಕ ಕಾರ್ಯಕರ್ತರು ಈ ಮಸೂದೆಗೆ ಒಳಪಪಟ್ಟಿರುತ್ತಾರೆ.
ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್ ಮಾತನಾಡಿ, ರಾಜ್ಯದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳಿಗೂ ಸೆಸ್ ಅನ್ನು ವಿಸ್ತರಿಸಲು ಯೋಜಿಸಲಾಗಿದೆ. ಈ ಸೆಸ್‌ನಿಂದ ಬರುವ ಹಣವನ್ನು ಚಲನಚಿತ್ರ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಬಳಸಿಕೊಳ್ಳಲಾಗುವುಗು.
ಸರ್ಕಾರವು ರಾಜ್ಯದಲ್ಲಿನ ಸಿನಿಮಾ, ಸಾಂಸ್ಕೃತಿಕ ಕಾರ್ಯಕರ್ತರಿಗೆ ಅನುಕೂಲವಾಗುವ ರೀತಿಯಲ್ಲಿ ‘ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ & ಕಲ್ಯಾಣ ನಿಧಿ’ ಎಂಬ ನಿಧಿ ಸ್ಥಾಪಿಸಲು ಮಸೂದೆಯಲ್ಲಿ ಪ್ರಸ್ತಾಪಲಾಗಿದೆ ಎಂದು ಅವರು ಹೇಳಿದ್ದಾರೆ.