ರಾಜ್ಯದಲ್ಲಿ ಕೊರೊನಾದಿಂದ ಅನಾಥರಾದ 18 ಮಕ್ಕಳು

ಬೆಂಗಳೂರು : ಕೊರೊನಾ ಸೋಂಕಿನಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ18 ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಯಚೂರು ಹಾಗೂ ಬಾಗಲಕೋಟೆಯಲ್ಲಿ ತಲಾ ಮೂರು ಮಕ್ಕಳು, ಬೆಂಗಳೂರು, ಬೆಳಗಾವಿ, ಬೀದರ್,ಮೈಸೂರುಗಳಲ್ಲಿ ತಲಾ ಎರಡು ಹಾಗೂ ಚಾಮರಾಜನಗರ, ಕೋಲಾರ, ದಾವಣಗೆರೆ ಹಾಗೂ ಮಂಡ್ಯದಲ್ಲಿ ತಲಾ ಒಂದೊಂದು ಮಕ್ಕಳು ತಂದೆ ತಾಯಂದಿರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಅನಾಥ ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಸಡಿಲಗೊಳಿಸಿದೆ. ಇದರ ಜತೆಗೆ ಅವರ ಯೋಗಕ್ಷೇಮ ಮತ್ತುವಿದ್ಯಾಭ್ಯಾಸಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿ ತನ್ನ ಜವಬ್ದಾರಿಯಿಂದ ಕೈ ಚೆಲ್ಲಿ ಕುಳಿತಿದೆ. ಆ ಮಕ್ಕಳ ಜವಬ್ದಾರಿಯನ್ನು ರಾಜ್ಯ ಸರಕಾರ ತೆಗೆದುಕೊಳ್ಳಬೇಕು. ಪ್ರತಿ ತಿಂಗಳು ಅವರ ಶಿಕ್ಷಣಕ್ಕೆ ಸಹಾಯ ಮಾಡಬೇಕು ಅದು ರಾಜ್ಯ ಸರಕಾರದ ಜವಬ್ದಾರಿ  ಮತ್ತು ಕರ್ತವ್ಯ ಎಂದು ಸಾರ್ವಜನಿಕ ಅಭಿಪ್ರಯಾಗಳು ಕೇಳಿ ಬರುತ್ತಿವೆ.

ಅನಾಥ ಮಕ್ಕಳ ಜವಬ್ದಾರಿ ವಹಿಸಿಕೊಂಡ ಕೇರಳ ಎಡರಂಗ ಸರಕಾರ : ಕೇರಳ ರಾಜ್ಯದಲ್ಲಿ ಕೊವಿಡ್​ 19 ಸೋಂಕಿನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಒಂದು ಬಾರಿಗೆ 3 ಲಕ್ಷ ರೂ.ಪರಿಹಾರ ನೀಡಲಾಗುವುದು. ಹಾಗೇ 18ವರ್ಷ ತುಂಬುವವರೆಗೆ ಪ್ರತಿ ತಿಂಗಳೂ 2000 ರೂ. ಕೊಡಲಾಗುವುದು. ಹಾಗೇ ಅವರ ಪದವಿಯವರೆಗಿನ ಶಿಕ್ಷಣದ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಇದನ್ನೂ ಓದಿ : ಊರ ಜನರಿಗೆ ಸಂಕಷ್ಟ : ಇದ್ದ 2 ಎಕರೆ ಜಮೀನನ್ನು ಅಡ ಇಟ್ಟ ಬಡ ರೈತ

ಮೂಗಿಗೆ ತುಪ್ಪ ಸವರಿದ ಪಿಎಂ ಕೇರ್ಸ್‌ : ದೇಶದಲ್ಲಿ ಸರಿಸುಮಾರು 2021 ರ ಏಪ್ರಿಲ್​ 1ರಿಂದ ಇಲ್ಲಿಯವರೆಗೆ 577 ಮಕ್ಕಳು ಅನಾಥರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮಾಹಿತಿ ನೀಡಿದ್ದಾರೆ. ಅನಾಥ ಮಕ್ಕಳಿಗೆ ಎಇಎಂ ಕೇರ್ಸ್‌ ಸಹಾಯವನ್ನು ಘೋಷಿಸಿದ್ದು, ಕೊವಿಡ್‌ನಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳು ಹಣ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಪಿಎಂ ಕೇರ್ ಫಂಡ್‌ನಿಂದ ಹಣ ನೀಡಲು ಕೇಂದ್ರ ನಿರ್ಧಾರ ನಿರ್ಧರಿಸಿದ್ದು, ಕೊವಿಡ್​ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸಲು ಸಹ ಕೇಂದ್ರ ಸರ್ಕಾರ ನಿರ್ಧರಿಸಿದೆ. ಪಿಎಂ ಕೇರ್ಸ್ ಫಂಡ್​ನಿಂದ ಮಕ್ಕಳು 18 ವರ್ಷ ತುಂಬಿದ ನಂತರ ಮಾಸಿಕ ಸ್ಟೈಫಂಡ್ ನೀಡಲು ಸರ್ಕಾರ ನಿರ್ಧರಿಸಿದ್ದು,  23 ನೇ ವರ್ಷಕ್ಕೆ ಕಾಲಿಟ್ಟಾಗ 10 ಲಕ್ಷ ರೂ ವಿಮೆ ಒದಗಿಸುವುದಾಗಿ ಪ್ರಧಾನಿ ಮಂತ್ರಿ ಕಾರ್ಯಾಲಯದಿಂದ ಘೋಷಿಸಲಾಗಿದೆ. ಇದು ದೀರ್ಘವದಿ ಸಮಯ ತೆಗೆದುಕೊಳ್ಳುತ್ತದೆ, ತಕ್ಷಣದ ಕ್ರಮಗಳೇನು ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಪಿಎಂ ಕೇರ್ಸ್‌ ಹಣವನ್ನು ಮೂಗಿಗೆ ತುಪ್ಪ ಸವರುವ ಬದಲು ಅನಾಥ ಮಕ್ಕಳ ಶಿಕ್ಷಣ ಪೊರೈಸುವವರೆಗೂ ಮಾಸಿಕವಾಗಿ 3000 ರೂ ನೀಡಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸುತ್ತಿವೆ.

ಮಕ್ಕಳಿಗೆ ಉಚಿತ ಶಿಕ್ಷಣ ಸುತ್ತೂರ ಮಠ ಘೋಷಣೆ : ಕೊರೊನಾಗೆ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಮಕ್ಕಳು ಅನಾಥರಾಗುತ್ತಿರುವ ಕರುಣಾಜನಕ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ಅರಿತ ಮೈಸೂರಿನ ಸುತ್ತೂರು ಶ್ರೀಮಠ ಸಹಾಯದ ಹಸ್ತ ಚಾಚಿದೆ. ಕೇವಲ ಕ್ಷಣಿಕ ಸಹಾಯವಾಗದೆ, ದೂರದೃಷ್ಟಿಯ ಚಿಂತನೆಯಿಂದ ತನ್ನ ಸೇವಾಮನೋಭಾವನೆ ಪ್ರದರ್ಶಿಸಿದೆ.  ಕೊರೊನಾದಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಜೀವನಪರ್ಯಂತ ಉಚಿತ ಶಿಕ್ಷಣ ನೀಡುವ ಜವಬ್ದಾರಿಯನ್ನು ಸುತ್ತೂರು ಮಠ ಹೊತ್ತಿದೆ. ರಾಜ್ಯದ ಯಾವುದೇ ಭಾಗದ ಯಾವುದೇ ತರಗತಿಯ ಮಕ್ಕಳನ್ನು ಶಾಲೆಗೆ ದಾಖಲು ಮಾಡಬಹುದು. ಇದು ರಾಜ್ಯದಲ್ಲಿರುವ ಎಲ್ಲಾ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗಲಿದೆ ಎಂದು ಸುತ್ತೂರು ಶ್ರೀಗಳು ಘೋಷಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *