ಯುಪಿ: ಉನ್ನಾವೊದಲ್ಲಿನ 14 ಸರಕಾರಿ ವೈದ್ಯರು ರಾಜೀನಾಮೆ

ಲಕ್ನೋ: ಉತ್ತರ ಪ್ರದೇಶದ ಉನ್ನಾವೊದಲ್ಲಿ ಕೋವಿಡ್‌ ನಿವಾರಣಾ ಕಾರ್ಯದಲ್ಲಿ ಕಾರ್ಯನಿರತರಾಗಿದ್ದ ಹದಿನಾಲ್ಕು ಸರಕಾರಿ ವೈದ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ರಾಜಧಾನಿ ಲಕ್ನೋದಿಂದ ಕೇವಲ 40 ಕಿ.ಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಕೋವಿಡ್ ಸೋಂಕುಗಳ ಹೆಚ್ಚಳಕ್ಕೆ ತಮ್ಮನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂದು ವೈದ್ಯರು ದೂರಿದ್ದಾರೆ.

ಇದನ್ನು ಓದಿ: ಕೋವಿಡ್ ಕೇರ್ ಸೆಂಟರ್ : ಸಮರ್ಪಕ ನಿರ್ವಹಣೆಗೆ ಸೂಚನೆ

ಉನ್ನಾವೊದಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಹದಿನಾಲ್ಕು ಜನ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎರಡೂ ಸ್ಥಳಗಳು ಗ್ರಾಮೀಣ ಆಸ್ಪತ್ರೆಗಳಾಗಿವೆ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಇವುಗಳು ಹಳ್ಳಿ ಜನರ ಆರೋಗ್ಯ ರಕ್ಷಣೆಗೆ ಪ್ರಮುಖ ಪಾತ್ರವಹಿಸುತ್ತಿವೆ.

ಕೋವಿಡ್‌ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಶ್ರಮಸುತ್ತಿದ್ದರೂ ನಮ್ಮ ಮೇಲೆ ದಂಡನಾತ್ಮಕ ಕ್ರಮ ಹಾಗೂ  ಕೆಟ್ಟ ನಡವಳಿಕೆಗಳಿಂದ ಯಾವ ಆಧಾರವಿಲ್ಲದೆಯೂ ಆರೋಪಿಸಲಾಗುತ್ತಿದೆ ಎಂದು ವೈದ್ಯರು ಪತ್ರದಲ್ಲಿ ಬರೆದಿದ್ದಾರೆ.

ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ 14 ವೈದ್ಯರಲ್ಲಿ 11 ಮಂದಿ ನೆನ್ನೆ ಸಂಜೆ ಉನ್ನಾವೊ ಮುಖ್ಯ ವೈದ್ಯಾಧಿಕಾರಿ ಕಚೇರಿಗೆ ಭೇಟಿ ನೀಡಿ ಪತ್ರವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು. ಅಲ್ಲದೆ, ರಾಜೀನಾಮೆ ಪತ್ರಗಳ ಪ್ರತಿಗಳನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ), ಮಹಾನಿರ್ದೇಶಕರು (ಆರೋಗ್ಯ) ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ.

ಇದನ್ನು ಓದಿ: ಪ್ರಧಾನ ಮಂತ್ರಿಗಳಿಗೆ ಮತ್ತೊಮ್ಮೆ 12 ಪ್ರತಿಪಕ್ಷಗಳ ಮುಖಂಡರ ಜಂಟಿ ಪತ್ರ

“ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದೇವೆ. ತಂಡಗಳ ಮೂಲಕ ಕೆಲಸ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ, ಇತರ ಅಧಿಕಾರಿಗಳು, ಮತ್ತು ತಹಶೀಲ್ದಾರ್ ಕೂಡ ನಮ್ಮನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಪರಿಶೀಲನಾ ಸಭೆಗಳನ್ನು ನಡೆಸುತ್ತಿದ್ದಾರೆ. ನಮ್ಮ ತಂಡಗಳು ಮಧ್ಯಾಹ್ನ ಹೊರಟು, ಸಾರ್ವತ್ರಿಕವಾಗಿ ಎಲ್ಲರನ್ನು ಪರಿಶೀಲಿಸಲಾಗುತ್ತಿದೆ. ಕೋವಿಡ್‌ ಗುಣಲಕ್ಷ್ಣಗಳು ಏನಾದರೂ ಇದ್ದಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಜತೆಗೆ ಔಷಧಿಗಳನ್ನು ವಿತರಿಸಿ ಬಳಿಕ ನಾವು ಹಿಂತಿರುಗುತ್ತಿದ್ದೇವೆ.

ʻʻನಿತ್ಯ ನಡೆಯುವ ಎಸ್‌ಡಿಎಂನಿಂದ ಪರಿಶೀಲನಾ ಸಭೆಗಳಿಗೂ ಭಾಗವಹಿಸುತ್ತಿದ್ದೇವೆ. ಯಾರನ್ನಾದರೂ 30 ಕಿ.ಮೀ ದೂರದಲ್ಲಿ ಪೋಸ್ಟ್ ಮಾಡಿದರೂ, ಅವರು ಈ ಪರಿಶೀಲನಾ ಸಭೆಗಳಿಗಾಗಿ 30 ಕಿ.ಮೀ. ಪ್ರಯಾಣಿಸಲು ನಾವು ಬದ್ಧರಾಗಿದ್ದೇವೆ. ನಾವು ಕೆಲಸ ಮಾಡಿದ್ದೇವೆ ಎಂದು ಸಾಬೀತುಪಡಿಸಬೇಕು. ಆದರೂ ಸಹ ನಾವು ಕೆಲಸ ಮಾಡದ ಕಾರಣ ಕೋವಿಡ್ ಸೋಂಕು ಹರಡುತ್ತಿದೆ ಎಂದು ನಮ್ಮ ಮೇಲೆ ಆರೋಪಿಸಲಾಗುತ್ತಿದೆ” ಎಂದು ವೈದ್ಯರಲ್ಲಿ ಒಬ್ಬರಾದ ಡಾ.ಶರದ್ ವೈಶ್ಯ ಹೇಳಿದರು ಅವರು ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ್ದಾರೆ.

ಹಲವು ಸಂದರ್ಭಗಳಲ್ಲಿ ಸಂಬಳವನ್ನು ನೀಡದೆ ತಡೆಹಿಡಿಯಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಾವು ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. ನಮಗೆ ಸಹಕಾರ ನೀಡುವ ಬದಲಿಗೆ ಜಿಲ್ಲಾಧಿಕಾರಿ ಮತ್ತು ಮುಖ್ಯ ವೈದ್ಯಕೀಯ ಅಧಿಕಾರಿಗಳು ನಮ್ಮೊಂದಿಗೆ ದುರ್ವರ್ತನೆ ತೋರುತ್ತಿದ್ದಾರೆ;’ ಎಂದು ಡಾ.ಸಂಜೀವ್ ಎಂಬುವವರು ದೂರಿದರು.

ಈ ಕುರಿತು ಶೀಘ್ರದಲ್ಲಿಯೇ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ತಿಳಿಸಿದ್ದಾರೆ.ನಾವು ಸಮಸ್ಯೆಗೆ ಪರಿಹಾರಕ್ಕೆ ಕ್ರಮವಹಿಸುತ್ತೇವೆ. ಅವರು ನಮ್ಮ ತಂಡದ ಭಾಗ. ಅವರು ಅಪರಿಚಿತರೇನಲ್ಲ. ನಾವು ಇದನ್ನು ನಿವಾರಿಸುತ್ತೇವೆ. ಎಂದು ಹೇಳಿದರು. ಅವರು ವೈದ್ಯರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿಗಳ ಕಚೇರಿ ಸಹ ವೈದ್ಯರೊಂದಿಗೆ ಮಾತನಾಡಿದೆ ಎಂದು ಕುಮಾರ್ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *