ಕರ್ನಾಟಕ ಲಾಕ್​ಡೌನ್ : ಹೊಸಮಾರ್ಗಸೂಚಿಯಲ್ಲಿ ಏನಿದೆ? ಯಾವುದಕ್ಕೆಲ್ಲಾ ಅನುಮತಿ??

ಬೆಂಗಳೂರು : ಇಂದು ರಾತ್ರಿಯಿಂದ ( 27) 14 ದಿನಗಳವರೆಗೆ ರಾಜ್ಯಾಧ್ಯಂತ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. 14 ದಿನಗಳವರೆಗೆ ಕರ್ನಾಟಕದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತದೆ ಎಂದು ರಾಜ್ಯ ಸರಕಾರ ಆದೇಶಿಸಿದೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರವೇ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಈ ನಡುವೆ ಲಾಕ್ಡೌನ್ ಗಾಗಿ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ರಿಲೀಸ್‌ ಮಾಡಿದ್ದು ಅದರ ಬಗೆಗಿನ ಮಾಹಿತಿ ಇಲ್ಲಿದೆ.

ಲಭ್ಯವಿರುವ ಅಗತ್ಯ ಸೇವೆಗಳು

– ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯಸೇವೆಯ ಅಂಗಡಿಗಳು ತೆರೆಯಬಹುದು

– ದಿನಸಿ, ಹಣ್ಣು-ತರಕಾರಿ, ಮೀನು ಮಾಂಸ ಅಂಗಡಿ ತೆರೆಯಲು ಅವಕಾಶ‌

– ಮದ್ಯಂದಗಡಿಗಳು ಬೆಳಗ್ಗೆ 6ರಿಂದ 10ಗಂಟೆವರೆಗೆ ಮಾತ್ರ ಓಪನ್
ಬಾರ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ

– ಕೃಷಿ ಸಂಬಂಧಿಸಿದ ಚಟುವಟಿಕೆಗೆ ಯಾವುದೇ ನಿರ್ಬಂಧವಿಲ್ಲ

– ಬ್ಯಾಂಕ್, ಇ-ಕಾಮರ್ಸ್​ ಸೇವೆಗಳಿಗೆ ನಿರ್ಬಂಧ ಇರುವುದಿಲ್ಲ

ಸಾರಿಗೆಯಲ್ಲಿ ಏನೆಲ್ಲಾ ಲಭ್ಯವಿದೆ 

ಈ ಅವಧಿಯಲ್ಲಿ ನಿಗದಿಯಾಗಿರುವ ವಿಮಾನಗಳು ಮತ್ತು ರೈಲುಗಳು ಪ್ರಯಾಣ ಮುಂದುವರಿಸಬಹುದು.

– ಏರ್‌ಪೋರ್ಟ್‌ ಬಸ್‌, ಟ್ಯಾಕ್ಸಿಗಳಿಗೆ ಷರತ್ತುಬದ್ಧ ಅವಕಾಶ

– ಟ್ರಾವೆಲ್‌ ದಾಖಲಾತಿ, ಟಿಕೆಟ್ ತೋರಿಸುವುದು ಕಡ್ಡಾಯ

– ತುರ್ತು ಸೇವೆಗೆ ಮಾತ್ರ ಆಟೋ, ಟ್ಯಾಕ್ಸಿಗೆ ಅವಕಾಶ

– ಮೇ 12ರವರೆಗೆ ಮೆಟ್ರೋ ಸಂಚಾರ ಸಂಪೂರ್ಣ ಬಂದ್

– ಅಂತಾರಾಜ್ಯ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ

– ಅಂತರ್ ಜಿಲ್ಲಾ, ಅಂತರ್ ರಾಜ್ಯ ತುರ್ತು ಸೇವೆಗೆ ಮಾತ್ರ ಅವಕಾಶ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ ಸಂಚಾರ, ಗೂಡ್ಸ್‌, ಖಾಸಗಿ ವಾಹನಗಳ ಓಡಾಡಕ್ಕೆ ಬಂದ್‌ ಆದ್ರೆ ಅಂತರ್‌ ಜಿಲ್ಲೆಗಳ ಗೂಡ್ಸ್‌ ವಾಹನಗಳ ಓಡಾಡಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

– ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಚಾರಕ್ಕೆ ಅವಕಾಶವಿದೆ. ಅಡ್ಮಿಷನ್ ಟಿಕೆಟ್‌ ತೋರಿಸಿ ಸಂಚಾರಿಸಬಹುದು. ಆಟೋ, ಟ್ಯಾಕ್ಸಿಯಲ್ಲಿ ವಿದ್ಯಾರ್ಥಿಗಳು ಸಂಚರಿಸಲು ಅನುಮತಿಯಿದೆ.

ಇವೆಲ್ಲಾ ಬಂದ್

– ರಾಜ್ಯದಲ್ಲಿ ಎಲ್ಲ ಶಾಲಾ ಕಾಲೇಜುಗಳನ್ನು ಮುಚ್ಚಲು ಆದೇಶ

– ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಯೋಗ ಕೇಂದ್ರ

– ಸ್ಪಾ, ಮನರಂಜನಾ ಕೇಂದ್ರ, ಸಮುದಾಯ ಭವನಗಳನ್ನು ಬಂದ್​ ಮಾಡಲು ಆದೇಶ

– ಸ್ಟೇಡಿಯಂ, ಆಟದ ಮೈದಾನ, ಕ್ರೀಡಾ ಸಂಕೀರ್ಣ, ಜಿಮ್​ಗಳು ತೆರೆಯುವಂತಿಲ್ಲ.

ಇವುಗಳಿಗೆ ಕಡಿವಾಣ 

– ಸಾಮಾಜಿಕ, ಧಾರ್ಮಿಕ, ಕ್ರೀಡಾ, ಮನರಂಜನಾ, ಸಾಂಸ್ಕೃತಿಕ, ರಾಜಕೀಯ ಚಟುವಟಿಕೆಗೆ ಸಂಪೂರ್ಣ ನಿರ್ಬಂಧ.

– ಮಂದಿರ, ಮಸೀದಿ, ಚರ್ಚ್​ಗಳಿಗೆ ಜನರು ಪ್ರವೇಶಿಸುವಂತಿಲ್ಲ. ಪೂಜಾರಿಗಳು ಮಾತ್ರ ಸಂಪ್ರದಾಯದಂತೆ ಸರಳ ಪೂಜೆ ಮಾಡಬಹುದು.

– ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್, ದರ್ಶಿನಿಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ

ಇವುಗಳಿಗೆ ನಿರ್ಬಂಧವಿಲ್ಲ 

– ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಯಾವುದೇ ನಿರ್ಬಂಧವಿಲ್ಲ

– ಕೈಗಾರಿಕೆಗಳಲ್ಲಿ ಕೆಲಸಕ್ಕೆ ತೆರಳುವವರು, ರಾತ್ರಿ ಪಾಳಿ ಕೆಲಸಕ್ಕೆ ಹೋಗುವವರು ಐಡಿ ತೋರಿಸಬೇಕು

– ನ್ಯಾಯಬೆಲೆ ಅಂಗಡಿ, ಆಹಾರ, ದಿನಸಿ, ಹಣ್ಣು, ತರಕಾರಿ, ಡೇರಿ, ಹಾಲಿನ ಬೂತ್, ಮೀನು, ಮಾಂಸ ಮಾರಾಟ ಇರುತ್ತೆ

– ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ ಮಟ್ಟದ, ಅಗತ್ಯ ಪ್ರಮಾಣದ ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗಬೇಕು. ಉಳಿದವರಿಗೆ ಮನೆಯಿಂದಲೇ ಕೆಲಸಕ್ಕೆ ವ್ಯವಸ್ಥೆ ಮಾಡಬೇಕು

– ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಸಾಮಾನ್ಯ ಕೆಲಸಕ್ಕೆ, ಉಳಿದ 50ರಷ್ಟು ಸಿಬ್ಬಂದಿ ಕೊವಿಡ್​ ಡ್ಯೂಟಿಗೆ ಹಾಜರಾಗಬೇಕು

– ರಾಜ್ಯದ ಎಲ್ಲ ಕೋರ್ಟ್​ಗಳ ಬಗ್ಗೆ ಹೈಕೋರ್ಟ್​ನಿಂದ ನಿರ್ಧಾರ

– ಆರೋಗ್ಯ, ವೈದ್ಯಕೀಯ ಶಿಕ್ಷಣ, ಕಂದಾಯ, ಗೃಹ ಇಲಾಖೆ, ಅಗ್ನಿಶಾಮಕ ದಳ, ಕಾರಾಗೃಹ, ವಿಪತ್ತು ನಿರ್ವಹಣಾ ಸಿಬ್ಬಂದಿ, ಎಲ್ಲಾ ಡಿಸಿಗಳ ಕಚೇರಿ, ಬಿಬಿಎಂಪಿ ಸಿಬ್ಬಂದಿ, ಇತರೆ ಇಲಾಖೆಗಳ ಕೊವಿಡ್ ಸೇವಾ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗಲು ಅವಕಾಶ.

Donate Janashakthi Media

Leave a Reply

Your email address will not be published. Required fields are marked *