ಬೆಂಗಳೂರು: ರಾಜ್ಯಾಧ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯು ಸೆಪ್ಟೆಂಬರ್ 22ರಿಂದ ಆರಂಭವಾಗಿದೆ. ಶಿಕ್ಷಕರ ಜಾತಿ ಗಣತಿ ಸಮೀಕ್ಷೆಗೆ ಸರ್ವರ್ ಸಮಸ್ಯೆ ಎದುರಾಗಿತ್ತು. ಇದರ ನಡುವೆ ಜಾತಿಗಣತಿ ಸಾಗಿದ್ದು, ಈವರೆಗೆ ಬರೋಬ್ಬರಿ 13 ಲಕ್ಷ ಸಮೀಕ್ಷೆಯನ್ನು ಮಾಡಲಾಗಿದೆ.
ಈ ಕುರಿತಂತೆ ಸಿಎಂ ಕಚೇರಿಯಿಂದ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಸರ್ವರ್ ಸಮಸ್ಯೆ ನಡುವೆಯೂ ಹೆಣಗಾಡುತ್ತಲೇ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಯುತ್ತಿದೆ. ಸೆಪ್ಟೆಂಬರ್.22ರಿಂದ ಆರಂಭಗೊಂಡು, ಸೆಪ್ಟೆಂಬರ್.27ರ ಇಂದು ಸಂಜೆ 5.30ರವರೆಗೆ 12,87,087 ಮನೆಗಳ ಜಾತಿಗಣತಿ ಸಮೀಕ್ಷೆಯನ್ನು ನಡೆಸಲಾಗಿದೆ.
ಇದನ್ನೂ ಓದಿ: ಎಜಿ ಆರ್ ವೆಂಕಟರಮಣಿ ಅಧಿಕಾರಾವಧಿ 2 ವರ್ಷಗಳ ಕಾಲ ವಿಸ್ತರಣೆ
ಹೀಗಿದೆ ಜಿಲ್ಲಾವಾರ ಜಾತಿಗಣತಿ ಸಮೀಕ್ಷೆಯ ವಿವರ
- ಬಾಗಲಕೋಟೆ – 55,459
- ಬಳ್ಳಾರಿ – 27,799
- ಬೆಳಗಾವಿ -96,167
- ಬೆಂಗಳೂರು ಗ್ರಾಮಾಂತರ – 22,984
- ಬೆಂಗಳೂರು ಸೌತ್ – 32,610
- ಬೆಂಗಳೂರು ನಗರ – 9,586
- ಬೀದರ್ – 26,345
- ಚಾಮರಾಜನಗರ – 24,688
- ಚಿಕ್ಕಬಳ್ಳಾಪುರ – 28,845
- ಚಿಕ್ಕಮಗಳೂರು -41,634
- ಚಿತ್ರದುರ್ಗ -55,531
- ದಕ್ಷಿಣ ಕನ್ನಡ – 24,309
- ದಾವಣಗೆರೆ – 62,055
- ಧಾರವಾಡ – 49,599
- ಗದಗ- 44,213
- ಹಾಸನ- 50,713
- ಹಾವೇರಿ -74,477
- ಕಲಬುರ್ಗಿ-54,048
- ಕೊಡಗು-15,686
- ಕೋಲಾರ-40,348
- ಕೊಪ್ಪಳ-52,773
- ಮಂಡ್ಯ-63,488
- ಮೈಸೂರು-45,883
- ರಾಯಚೂರು-33,753
- ಶಿವಮೊಗ್ಗ-48,590
- ತುಮಕೂರು-61,238
- ಉಡುಪಿ-13,841
- ಉತ್ತರ ಕನ್ನಡ -42,159
- ವಿಜಯನಗರ-29,748
- ವಿಜಯಪುರ-33,619
- ಯಾದಗಿರಿ-24,899
ಒಟ್ಟಾರೆಯಾಗಿ ಬೆಂಗಳೂರು ನಗರದಲ್ಲಿ 9,586 ಅತೀ ಕಡಿಮೆ ಜಾತಿಗಣತಿ ಸಮೀಕ್ಷೆ ನಡೆದಿದ್ದರೇ, ಹಾವೇರಿಯಲ್ಲಿ 74,477 ಅತೀ ಹೆಚ್ಚು ಜಾತಿಗಣತಿ ಸಮೀಕ್ಷೆಯನ್ನು ಈವರೆಗೆ ನಡೆಸಲಾಗಿದೆ.
ಇದನ್ನೂ ನೋಡಿ: ಜಾತಿ ಗಣತಿ : ʼಧರ್ಮ, ಜಾತಿʼ ಗೊಂದಲದಲ್ಲಿ ಲಿಂಗಾಯತ -ವೀರಶೈವ ! | #KarnatakaCasteCensus | Janashakthi Media
