ನವಂಬರ್ 7-10: ದೇಶಾದ್ಯಂತ ಅಮೆರಿಕ–ವಿರೋಧಿ ಪ್ರತಿಭಟನೆಗೆ ಎಡಪಕ್ಷಗಳ ಕರೆ

“ಇಸ್ರೇಲಿಗಳಿಂದ ಪ್ಯಾಲೆಸ್ಟೀನಿಯರ ನರಮೇಧಕ್ಕೆ ಸಾಮ್ರಾಜ್ಯಶಾಹಿ ಬೆಂಬಲ ನಿಲ್ಲಬೇಕು”

ನವೆಂಬರ್ 7-10  ಅವಧಿಯಲ್ಲಿಅಮೆರಿಕನ್‍ ಸಾಮ್ರಾಜ್ಯಶಾಹಿಯ ವಿರುದ್ಧ ದೇಶಾದ್ಯಂತ ಪ್ರತಿಭಟನಾ ಕಾರ್ಯಾಚರಣೆ ನಡೆಸುವಂತೆ  ಎಡಪಕ್ಷಗಳು ಕರೆ ನೀಡಿವೆ. ತಕ್ಷಣ ಕದನ ವಿರಾಮ ಆಗುವಂತೆ ಮಾಡಬೇಕು ಮತ್ತು ಪ್ಯಾಲೆಸ್ಟೀನಿಯನ್ನರ ನರಮೇಧಕ್ಕೆ ಹಣಕಾಸು, ಶಸ್ತ್ರಾಸ್ತ್ರ ಮತ್ತು ಬೆಂಬಲವನ್ನು ನಿಲ್ಲಿಸಬೇಕು ಎಂದು ಈ ಪ್ರತಿಭಟನೆಗಳಲ್ಲಿ ಆಗ್ರಹಿಸಬೇಕು ಎಂದು ಅವು ಹೇಳಿವೆ. ನವಂಬರ್‍ 7-10 ರ ವರೆಗೆ ಯುಎಸ್  ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್‍ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಭಾರತೀಯ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರುಗಳೊಂದಿಗೆ 2+2 ಸಚಿವರ ಮಟ್ಟದ ಸಂವಾದದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ಮೋದಿ ಸರಕಾರ ಪ್ಯಾಲೆಸ್ಟೀನಿಯರ ಮೇಲೆ ಅಮೆರಿಕನ್-ಇಸ್ರೇಲಿ ನರಮೇಧವನ್ನು ಅನುಮೋದಿಸುವುದನ್ನು ನಿಲ್ಲಿಸಬೇಕು  ಮತ್ತು ತಕ್ಷಣದ ಕದನ ವಿರಾಮದ ಜಾಗತಿಕ ಕರೆಯ ಜತೆ ಸೇರಬೇಕು ಎಂದು ಎಡಪಕ್ಷಗಳು ಸರ್ಕಾರಕ್ಕೆ ಕರೆ ನೀಡಿವೆ.

ಎಡಪಕ್ಷಗಳ ರಾಜ್ಯ ಘಟಕಗಳು ಆಯಾ ರಾಜ್ಯಗಳಲ್ಲಿ ಈ ಪ್ರತಿಭಟನಾ ಕ್ರಮಗಳ ವಿಧಾನಗಳನ್ನು ನಿರ್ಧರಿಸುತ್ತವೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ, ಅಖಿಲ ಭಾರತ ಫಾರ್ವರ್ಡ್‍ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜಿ. ದೇವರಾಜನ್, ಸಿಪಿಐ(ಎಂಎಲ್)-ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಮತ್ತು ಆರ್‍.ಎಸ್‍.ಪಿ..ಯ ಪ್ರಧಾನ ಕಾರ್ಯದರ್ಶಿ ಮನೋಜ್ ಭಟ್ಟಾಚಾರ್ಯ ಈ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *