ಪ್ರಶ್ನಿಸಿದ್ದಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ

  • ಇನ್ನೂ ಜೀವಂತ ಇದೆ ಅನಿಷ್ಟ ಪದ್ದತಿ
  • ಬಹಿಷ್ಕಾರ ಮೀರಿದ್ದಕ್ಕೆ 25 ಸಾವಿರ ರೂ ದಂಡ
  • ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಕುಟುಂಬಗಳು

ಟಿ.ನರಸೀಪುರ : ಖಾಸಗಿ ಜಾಗದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಗ್ರಾಮ ಪಂಚಾಯಿತಿ ಸದಸ್ಯೆ ಸೇರಿದಂತೆ 12 ಕುಟುಂಬಗಳಿಗೆ ಸಾಂಸ್ಕೃತಿಕ ನಗರಿ ಮೈಸೂರಿನ ಟಿ.ನರಸೀಪುರದಲ್ಲಿ ಬಹಿಷ್ಕಾರ ಹಾಕಲಾಗಿದೆ.

ಬಹಿಷ್ಕಾರಕ್ಕೆ ಒಳಾಗಿರುವ ಕುಟುಂಬ ಸದಸ್ಯರನ್ನು ಯಾರೂ ಮಾತನಾಡಿಸುವಂತಿಲ್ಲ. ಶುಭ ಸಮಾರಂಭಗಳಿಗೆ ಆಹ್ವಾನಿಸುವಂತಿಲ್ಲ, ನೆರವು ನೀಡುವಂತಿಲ್ಲ ಎಂದು ನಿಯಮ ಮಾಡಲಾಗಿದೆಯಂತೆ. ಬಹಿಷ್ಕಾರಕ್ಕೊಳಗಾದವರು ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ.

ಘಟನೆ ನಡೆದು ಎರಡು ವಾರಗಳ ನಂತರ ಪ್ರಕರಣ ಬಯಲಿಗೆ ಬಂದಿದೆ. ಪ್ರಶ್ನಿಸುವುದು ಅವರು ಹಕ್ಕು. ನ್ಯಾಯಯುತವಾಗಿ ಭವನ ನಿರ್ಮಾಣ ಮಾಡುತ್ತಿದ್ದರೆ ಬಹಿಷ್ಕಾರ ಯಾಕೆ ಹಾಕಬೇಕು? ಇದು ರಾಜಕೀಯ ಪಿತೂರು ಎಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿವೆ.

ಬಹಿಷ್ಕಾರಕ್ಕೆ ಒಳಗಾದ ಕುಟುಂಬದವರು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದು, ತಮ್ಮ ಜಾಗದಲ್ಲಿ ವಾಲ್ಮೀಕಿ ಭವನ ಕಟ್ಟಲು ಮುಂದಾಗಿದ್ದಕ್ಕೆ ಬಹಿಷ್ಕಾರದ ಶಿಕ್ಷೆ ವಿಧಿಸಲಾಗಿದೆ. ಪ್ರಶ್ನೆ ಮಾಡಿದರೆ ಪರಿಹಾರ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದು ಇದೀಗ ಪರಿಹಾರವೂ ಇಲ್ಲ ಜಾಗವು ನಿಮ್ಮದಲ್ಲ ಎಂದು ವಾದ ಮಾಡುತ್ತಿದ್ದಾರೆ. ಅದಲ್ಲದೇ ಬಹಿಷ್ಕಾರ ಕೂಡ ವಿಧಿಸಿದ್ದಾರೆ,  ನಾವು ಕೂಡಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದೇವೆ, ನಾನು ಗ್ರಾಪಂ ಸದಸ್ಯೆ ಕೂಡಾ ಹೌದು. ನಮ್ಮನ್ನು ಹಿಂಸಿಸಲು, ರಾಜಕೀಯದಿಂದ ಹಿಂದೆ ಸರಿಯಲು ಈ ರೀತಿಯ ಕುತಂತ್ರಗಳನ್ನು ಹೆಣೆಯುತ್ತಿದ್ದಾರೆ. ಇವರಿಗೆ ಅಧಿಕಾರಿಗಳು ಮತ್ತು ರಾಜಕಾರಣಿಗಳ ಕುಮ್ಮಕ್ಕಿದೆ  ಎಂದು ಗ್ರಾ.ಪಂ ಸದಸ್ಯೆ ರತ್ನಮ್ಮ ಆರೋಪಿಸಿದ್ದಾರೆ.  ಹೇಳಿದ್ದಾರೆ.

ಈ ಪ್ರಕರಣದ ಕುರಿತಾಗಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಜಿಲ್ಲಾಧಿಕಾರಿಗಳು ತಪ್ಪಿತಸ್ತರ ಮೇಲೆ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

ರಾಜ್ಯಾದ್ಯಂತ ಇಂತಹ ಕೃತ್ಯಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಗು ದೇಗುಲ ಪ್ರವೇಶಿಸಿತು ಎಂದು ದಂಡ ಹಾಕಿದ್ದರು. ಬಿಜಾಪುರದಲ್ಲಿ ಬೈಕ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯನ್ನು ಥಳಿಸಲಾಗಿತ್ತು, ಮಳವಳ್ಳಿಯಲ್ಲಿ ಹಸು ಕದ್ದ ಎಂದು ಸುಳ್ಳು ಆರೋಪ ಮಾಡಿ ಕೈಗೆ ಹಗ್ಗ ಕಟ್ಟಿ ಮೆರವಣಿಗೆ ಮಾಡಲಾಗಿತ್ತು.  ಹೀಗೆ ದಿನ ನಿತ್ಯ ಅನಿಷ್ಟ ಪದ್ದತಿಗಳ ಮೂಲಕ ತಳ ಸಮುದಾಯವನ್ನು ಶೋಷಿಸುವ ಕೆಲಸ ನಡೆಯುತ್ತಿದೆ.  ಸರಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇನ್ನಾದರೂ ಇಂತಹ ಅಮಾನುಷಗಳನ್ನು ತಡೆಯಲು ಸರಕಾರ ಮುಂದಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *