ಹಾಸನ ಲೋಕಸಭಾ ಕ್ಷೇತ್ರ : ಹಿನ್ನೆಲೆ ಸಮಸ್ಯೆ ಸವಾಲುಗಳು

 

ಸದ್ಯ ರಾಜಕಾರಣದಲ್ಲಿ ಹೊಸ ಸಂಚಲನವನ್ನೇ ಮೂಡಿಸಿ ರಾಜಕಡರಣದ ನೈತಿಕತೆಗೆ ಪ್ರಶ್ನೆಯಾಗಿ ಕುಕ್ಕುತ್ತಿರುವ ನೀಚ ರಾಜಕಾರಣಕ್ಕಾಗಿ ಚುನಾವಣೆಯ ಮೊದಲ ಹಂತದ ಮತದಾನ ಇರುವ ಕೆಲವೇ ದಿನಗಳ ಹಿಂದಷ್ಟೇ ಸುದ್ದಿಗೆ ಸದ್ದಾಗಿದ್ದು ಪೆನ್‌ಡ್ರೈವ್ನ ಹಾಸನ ಲೋಕಸಭಾ ಕ್ಷೇತ್ರ.ಹಳೇಮೈಸೂರು ಭಾಗದತ್ತ ರಾಜ್ಯ ರಾಜಕಾರಣದ ಚಿತ್ತ ಕೇಂದ್ರೀಕೃತವಾಗಿದೆ. ಹಾಸನದಲ್ಲಿ ವೀರಶೈವ ಲಿಂಗಾಯತರು ಹಾಗೂ ದಾಸ ಒಕ್ಕಗಲಿರು ಹೆಚ್ಚಾಗಿದ್ದು ಇವರ ಮತ ನಿರ್ಣಾಯಕ ಮತಗಳಿರುವ ಲೋಕಸಭಾ ಕ್ಷೇತ್ರ ಇದಾಗಿದ್ದು, .

ಈ ಕ್ಷೇತ್ರವು ಹಾಸನ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕನ್ನು ಒಳಗೊಂಡಿದೆ. ಕರ್ನಾಟಕವು ಏಕೀಕರಣ ಆಗುವುದಕ್ಕೂ ಮುಂಚೆ ಹಾಸನ ಕ್ಷೇತ್ರ ಹಳೇ ಮೈಸೂರಿನ ಭಾಗವೇ ಆಗಿತ್ತು. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಹಾಸನ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಎಂಬ ಹೆಸರಿತ್ತು. 2008ರಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಾದ ನಂತರ, ಚಿಕ್ಕಮಗಳೂರು ಪ್ರತ್ಯೇಕ ಲೋಕಸಭಾ ಕ್ಷೇತ್ರದ ಸ್ಥಾನಮಾನ ಗಳಿಸಿದ್ದರಿಂದ ಈ ಕ್ಷೇತ್ರವು ಹಾಸನ ಲೋಕಸಭಾ ಕ್ಷೇತ್ರವಾಗಿಯೇ ಉಳಿಯಿತು. ಆರಂಭದಿಂದ ನೋಡಿದಾಗ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನದ್ದೇ ಪಾರುಪತ್ಯ. 1991ರ ನಂತರ ಈ ಕ್ಷೇತ್ರದಲ್ಲಿ ದೇವೇಗೌಡರು ಚುನಾವಣೆಗೆ ನಿಲ್ಲಲಾರಂಭಿಸಿದಾಗಿನಿಂದ ಇದು ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರವಾಗಿ ಮಾರ್ಪಟ್ಟಿದೆ.

ಇನ್ನು ಈ ಕ್ಷೇತ್ರವನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು 1991 ರಿಂದ 1994, 1998 ರಿಂದ 1999 ಮತ್ತು ಮತ್ತೆ 2004 ಮತ್ತು 2014 ರಿಂದ ಪ್ರತಿನಿಧಿಸಿದ್ದರು.ಹಾಸನದ ಗೌಡರು ಎಂದೇ ಇವರನ್ನುಕರೆಯಲಾಗುತ್ತಿದ್ದು, ಜೆಡಿಎಸ್‌ನ ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿಯ ಮೂಲ ಜಿಲ್ಲೆ ಈ ಹಾಸನ. 1999 ರಲ್ಲಿ ದೇವೇಗೌಡರನ್ನು ಸೋಲಿಸಿದ್ದ ಪಕ್ಷದ ಮಾಜಿ ಸಂಸದ ದಿವಂಗತ ಜಿ ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಎಂ ಪಟೇಲ್ ಅವರನ್ನು ಕಾಂಗ್ರೆಸ್ ನಾಮನಿರ್ದೇಶನ ಮಾಡುವ ಮೂಲಕ ದಶಕಗಳಷ್ಟು ಹಳೆಯ ರಾಜಕೀಯ ಹೋರಾಟವು ಮರಳಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ : ಇಂದೇ ವಿಚಾರಣೆ ಸಾಧ್ಯತೆ?

ದೇಶಕ್ಕೆ ಸ್ವಾತಂತ್ರ ಸಿಕ್ಕ ಬಳಿಕ ಈ ಕ್ಷೇತ್ರಕ್ಕೆ 1951ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತು. ಆರಂಭದಲ್ಲಿ ಇದಕ್ಕೆ ಹಾಸನ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಎಂಬ ಹೆಸರನ್ನು ಹೊಂದಿತ್ತು. ಇನ್ನು ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರದ ಇತಿಹಾಸವನ್ನು ನೋಡಿದಾಗ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಸುಮಾರು 20 ವರ್ಷಗಳಿಂದ ಮಾತ್ರವೇ ಇದು ಜೆಡಿಎಸ್ ನ ಭದ್ರಕೋಟೆ ಎನಿಸಿದೆ. ವಿಶೇಷವೆಂದರೆ, ಇಲ್ಲಿ ಬಿಜೆಪಿ ಯಾವುದೇ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿಲ್ಲ.

ಈ ಲೋಕಸಭಾ ಕ್ಷೇತ್ರ ಕಡೂರು, ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಹಾಸನ ಲೋಕಸಭಾ ಕ್ಷೇತ್ರದ ಒಟ್ಟು ಜನಸಂಖ್ಯೆಯು ಸುಮಾರು 2016000. ಸರಾಸರಿ ಸಾಕ್ಷರತೆಯ ಪ್ರಮಾಣವು 2011 ರ ಜನಗಣತಿಯ ಪ್ರಕಾರ 69.34% ರಷ್ಟಿದೆ. SC ಮತದಾರರು ಸಂಸತ್ತಿನ ಸ್ಥಾನವು ಸುಮಾರು 19.5% ರಷ್ಟಿದ್ದರೆ, ST ಮತದಾರರು ಸುಮಾರು 1.8% ರಷ್ಟಿದ್ದಾರೆ. ಸುಮಾರು 1294690 ಗ್ರಾಮೀಣ ಮತದಾರರು 78.4% ಮತದಾರರಿದ್ದಾರೆ.

1967ರರಿಂದ 2008ರವರೆಗೆ ಹಾಸನ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವೆಂದು ಕರೆಯಲ್ಪಡುತ್ತಿದ್ದ ಈ ಕ್ಷೇತ್ರ 2008ರಲ್ಲಿ ಆದ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ನಂತರ ಚಿಕ್ಕಮಗಳೂರು ಕ್ಷೇತ್ರದ ಹಲವಾರು ತಾಲೂಕುಗಳು ಉಡುಪಿ ಜಿಲ್ಲೆಗೆ ಸೇರಿಸಕೊಂಡವು. ಚಿಕ್ಕಮಗಳೂರಿನ ಕಡೂರು ತಾಲೂಕು ಈಗ ಹಾಸನ ಕ್ಷೇತ್ರದಲ್ಲಿ ಸೇರಿಕೊಂಡಿದೆ. 1951ರಲ್ಲಿ ನಡೆದಿದ್ದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಹಾಗೂ 1957 ರಲ್ಲಿಯೂ ಕಾಂಗ್ರೆಸ್ ನ ಎಚ್. ಸಿದ್ದನಂಜಪ್ಪ ಜಯಗಳಿಸಿದ್ದರು. 1967ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಭಾರಿಸಿದ್ದರು. ಆಗ ಪಕ್ಷಾಂತ ನಿಷೇಧ ಕಾಯಿದೆ ಇಲ್ಲದೇ ಇದ್ದಿದ್ದರಿಂದ ಎನ್. ಶಿವಪ್ಪ ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಯಾದರೂ ಸಹ ತಮ್ಮ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಂಡರು.

ಆನಂತರ, 1974ರಲ್ಲಿ ಕಾಂಗ್ರೆಸ್ಸಿನಿಂದ ಈ ಕ್ಷೇತ್ರದಲ್ಲಿ ಎಚ್.ಆರ್. ಲಕ್ಷ್ಮಣ್ ಅವರು ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ, 1975ರಿಂದ 1977ರವರೆಗೆ ಭಾರತದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿದ್ದರಿಂದ ಅವರ ಲೋಕಸಭಾ ಸದಸ್ಯತ್ವವನ್ನು ಪೂರ್ಣಗೊಳಿಸಲು ಆಗಲಿಲ್ಲ. 1977ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ದೇಶಾದ್ಯಂತ ಇಂದಿರಾಗಾಂಧಿ ವಿರೋಧಿ ಅಲೆ ಇದ್ದಿದ್ದರಿಂದ ಆ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಎಸ್. ನಂಜೇಗೌಡರು ಜಯಗಳಿಸಿದ್ದರು. ಆನಂತರ, 1980, 1984ರಲ್ಲಿ ಕಾಂಗ್ರೆಸ್ ನ ಎಚ್.ಎನ್. ನಂಜೇಗೌಡರು, 1989ರಲ್ಲಿ ಕಾಂಗ್ರೆಸ್ಸಿನ ಎಚ್.ಸಿ. ಶ್ರೀಕಂಠಯ್ಯನವರು ಇಲ್ಲಿ ಸಂಸದರಾಗಿದ್ದರು.

ಜೆಡಿಎಸ್‌ ಇಲ್ಲಿ ಲಗ್ಗೆ ಇಟ್ಟಿದ್ದು ಕೂಡ ಇತಿಯಾಸವೇ ಆಗಿದೆ. 1991ರಲ್ಲಿ ಹಾಸನದಿಂದ ಹೆಚ್.ಡಿ.ದೇವೇಗೌಡ ಸಂಸದರಾಗಿ ಆಯ್ಕೆಯಾಗಿದ್ದರು. ಆನಂತರ ಇಲ್ಲಿ ಸತತ ಮೂರು ಬಾರಿ ಇಲ್ಲಿ ಜೆಡಿಎಸ್ ನಲ್ಲೇ ಪ್ರಾಬಲ್ಯವಿತ್ತು. 1996ರಲ್ಲಿ ರುದ್ರೇಶ್ ಗೌಡ ಹಾಗೂ 1998ರಲ್ಲಿ ಪುನಃ ದೇವೇಗೌಡರು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

1999ರಲ್ಲಿ ಪುನಃ ಇಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತು. ಆಗ, ಜಿ. ಪುಟ್ಟಸ್ವಾಮಿ ಗೌಡ ಅವರು ಜಯಶಾಲಿಯಾಗಿದ್ದರು. ಆದರೆ, 2004, 2009 ಹಾಗೂ 2014ರವರೆಗೆ ಇಲ್ಲಿ ದೇವೇಗೌಡರೇ ಸತತವಾಗಿ ಮೂರು ಬಾರಿ ಗೆದ್ದು ಕ್ಷೇತ್ರವನ್ನು ಜೆಡಿಎಸ್ ಭದ್ರಕೋಟೆಯನ್ನಾಗಿಸಿದರು. 2019ರಲ್ಲಿ ಇಲ್ಲಿ ದೇವೇಗೌಡರ ಮೊಮ್ಮಗ ಪ್ರಜ್ವಲ್ರೇವಣ್ಣಗೆ ಬಿಟ್ಟುಕೊಟ್ಟು ದೇವೇಗೌಡರು ರಾಜ್ಯಸಭಾ ಸದಸ್ಯರಾದರು. ಹಾಲಿ ಪ್ರಜ್ವಲ್‌ರೇವಣ್ಣ ಇಲ್ಲಿನ ಸಂಸದರಾಗಿದ್ದಾರೆ.

ಹಾಸನ.. ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ಕರ್ಮಭೂಮಿ. ಈ ಕ್ಷೇತ್ರದಿಂದಲೇ ಗೆದ್ದು ಅವರು ಸಂಸತ್ ಪ್ರವೇಶಿಸಿದ್ದಾರೆ. ಆದರೆ ದೇವೇಗೌಡರಿಗೂ ಈ ಕ್ಷೇತ್ರದಲ್ಲಿ ಒಮ್ಮೆ ಸೋಲು ಎದುರಾಗಿತ್ತು. 1999 ಲೋಕಸಭಾ ಚುನಾವಣೆಯಲ್ಲಿ ಎಚ್‌.ಡಿ.ದೇವೇಗೌಡ ಈ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟ ಸ್ವಾಮಿ ಗೌಡ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಎಚ್‌ಡಿ ದೇವೇಗೌಡರಿಗೆ ನಿರಾಸೆ ಕಾದಿತ್ತು. ಅಂದು ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟ ಸ್ವಾಮಿ ಗೌಡ್ 398344 ಮತಗಳನ್ನು ಪಡೆದು ಜಯದ ಮಾಲೆಯನ್ನು ಧರಿಸಿದ್ದರು. ಎಚ್‌ಡಿಡಿ 1.41 ಲಕ್ಷ ಮತಗಳ ಅಂತರದಿಂದ ಸೋಲು ಕಂಡಿದ್ದರು. ಅಂದು ಅಜ್ಜಂದರ ಕದನಕ್ಕೆ ವೇದಿಕೆಯಾಗಿದ್ದ ಈಗ ಮೊಮ್ಮಕ್ಕಳ ಕದನಕ್ಕೆ ವೇದಿಕೆಯಾಗಿದೆ.

ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಎಂ. ಶ್ರೇಯಸ್ ಪಟೇಲ್ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಹಾಸನ ಜೆಡಿಎಸ್‌ಗೆ ಸಿಗಲಿದ್ದು, ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅಭ್ಯರ್ಥಿಯಾಗುವುದು ಬಹುತೇಕ ಖಚಿವಾಗಿದೆ. ಆದರೆ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಬಿಜೆಪಿ ಅಪಸ್ವರ ಎತ್ತಿದೆ.

2024ರ ಚುನಾವಣೆಯಲ್ಲಿ ಸನ್ನಿವೇಶಗಳು ಬದಲಾಗಿವೆ. ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಪ್ರಜ್ವಲ್‌ ಎರಡನೇ ಬಾರಿಗೆ ಲೋಕಸಭೆಯನ್ನು ಪ್ರವೇಶಿಸುವ ಕನಸಿನಲ್ಲಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರಜ್ವಲ್‌ ತಂದೆ ಎಚ್‌ಡಿ ರೇವಣ್ಣ ಅವರ ವಿರುದ್ಧ ಸ್ಪರ್ಧಿಸಿದ್ದ ಶ್ರೇಯಾಂಕ್ ಸೋಲು ಕಂಡಿದ್ದರು. ಈ ಬಾರಿ ಅವರು ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಪ್ರಜ್ವಲ್‌ ರೇವಣ್ಣ ಗ್ರಾಮಂತರ ಪ್ರದೇಶಗಳಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸುವುದಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಲ್ಲದೆ ಕಳೆದ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಬಂದಿದ್ದು ಬಿಟ್ಟರು ಮತ್ತೆ ನಮ್ಮ ಊರಿನತ್ತ ಗಮನ ಹರಿಸಿಲ್ಲ ಎಂಬ ಆರೋಪವನ್ನು ಮತದಾರರ ಮಾಡುತ್ತಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮತದಾರ ಯಾರ ಕೈ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಹಿಂದಿನ ಮೂರು ಚುನಾವಣೆಗಳ ಫಲಿತಾಂಶ ಗಳನ್ನು ನೋಡುವುದಾದರೆ,

ʼ2009ರಲ್ಲಿ ಜೆಡಿಎಸ್‌ನ ಎಚ್. ಡಿ. ದೇವೇಗೌಡ 496,429 ಮತಗಳನ್ನು ಪಡೆದು ಗೆಲುವು. ಬಿಜೆಪಿಯ ಕೆ. ಎಚ್. ಹನುಮೇಗೌಡ 205,316 ಮತಗಳನ್ನು ಪಡೆದು ಸೋಲು, ಕಾಂಗ್ರೆಸ್‌ನ ಬಿ. ಶಿವರಾಮು 201,147 ಮತಗಳನ್ನು ಪಡೆದು 3ನೇ ಸ್ಥಾನ. * 2014ರ ಚುನಾವಣೆಯಲ್ಲಿ ಜೆಡಿಎಸ್‌ನ ಎಚ್. ಡಿ. ದೇವೇಗೌಡ 509,841 ಮತಗಳನ್ನು ಪಡೆದು ಗೆಲುವು. ಕಾಂಗ್ರೆಸ್‌ನ ಎ. ಮಂಜು 409,379 ಮತಗಳನ್ನು ಪಡೆದು ಸೋಲು. ಬಿಜೆಪಿಯ ಸಿ. ಎಚ್. ವಿಜಯಶಂಕರ್ 165,688 ಮತಗಳನ್ನು ಪಡೆದು ಸೋಲು. * 2019ರ ಚುನಾವಣೆಯಲ್ಲಿ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ 676,606 ಮತಗಳನ್ನು ಪಡೆದು ಗೆಲುವು. ಬಿಜೆಪಿಯ ಎ. ಮಂಜು 535,282 ಮತಗಳನ್ನು ಪಡೆದು ಸೋಲು. ಬಿಎಸ್‌ಪಿಯ ವಿನೋದ್ ರಾಜ್ ಹೆಚ್. 38,761 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ಇಳಿದರು.

ಅಗತ್ಯವಿದ್ದಲ್ಲಿ ಅಂಕಿಅಂಶಗಳ ಹಳೆಯ ಮತದಾನದ ವಿವರವನ್ನು ಲಗತ್ತಿಸುವುದು.

ಇದನ್ನೂ ನೋಡಿ: ಕೇಳಿರಣ್ಣ, ಕೇಳಿರಕ್ಕ ಕಥೆಯ ಹೇಳುವೆ, ಸುಳ್ಳಿನ ಸರಮಾಲೆಯ ವ್ಯಥೆಯ ಹೇಳುವೆ – ಹಾಡಿದವರು : ಲವಿತ್ರ ಮತ್ತು ಮೇಘ

Donate Janashakthi Media

Leave a Reply

Your email address will not be published. Required fields are marked *