ಹೋಟೆಲ್ ತಿಂಡಿ ತಿನಿಸುಗಳ ಬೆಲೆ 10 ರಷ್ಟು ಹೆಚ್ಚಳ: ಆಗಸ್ಟ್‌ನಿಂದ ಜಾರಿ

ಬೆಂಗಳೂರು: ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘವು ವಿದ್ಯುತ್‌ ದರ ಸೇರಿ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು ಹೋಟೆಲ್‌ಗಳ ತಿಂಡಿ ತಿನಿಸುಗಳ ಬೆಲೆಯಲ್ಲಿ ಶೇ 10ರಷ್ಟು ಹೆಚ್ಚಿಸುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದೆ.

ಈಗಾಗಲೇ ತರಕಾರಿ  ಅಕ್ಕಿ ಸೇರಿ ದಿನನಿತ್ಯ ಬಳಸುವ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಹೋಟೆಲ್‌ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ತಿಂಡಿ ತಿನಿಸುಗಳ ದರದಲ್ಲಿ 5 ಹಾಗೂ ಊಟಕ್ಕೆ 10 ಹೆಚ್ಚಳವಾಗಲಿದೆ. ಒಂದು ಕೆಜಿ ಕಾಫಿ ಪುಡಿಗೆ 80ರಿಂದ 100 ಹೆಚ್ಚಳವಾಗಿದ್ದು ಇದರಿಂದ ಕಾಫಿ ಮತ್ತು ಚಹಾ ಬೆಲೆ 2 ರಿಂದ 3 ಹೆಚ್ಚಳವಾಗಲಿದೆ. ಈ ಬಗ್ಗೆ ಮಂಗಳವಾರ ನಡೆಯಲಿರುವ ಸಂಘದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದ ಎಂದು ಸಂಘದ ಗೌರವ ಕಾರ್ಯದರ್ಶಿ ವಿರೇಂದ್ರ ಕಾಮತ್‌ ಮಾಹಿತಿ ಕೊಟ್ಟರು.

ಇದನ್ನೂ ಓದಿ:ಬೆಂಗಳೂರು : ಹೋಟೆಲ್‌ ಊಟ, ತಿಂಡಿ-ತಿನಿಸುಗಳ ಬೆಲೆ ಸದ್ಯಕ್ಕೆ ಹೆಚ್ಚಿಸದಿರಲು ನಿರ್ಧಾರ

ಈಗಾಗಲೇ ಕೆಲ ಹೋಟೆಲ್‌ಗಳಲ್ಲಿ ದರಗಳನ್ನು ಹೆಚ್ಚಿಸಲಾಗಿದೆ. ಅಧಿಕೃತವಾಗಿ ಆಗಸ್ಟ್‌ 1 ರಂದು ಎಲ್ಲ ತಿಂಡಿ ತಿನಿಸುಗಳ ದರಗಳಲ್ಲಿ ಹೆಚ್ಚಳವಾಗಲಿದೆ ಎಂದು ಸಂಘದ ಅಧ್ಯಕ್ಷ ಪಿ.ಸಿ ರಾವ್‌ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *