ಹತ್ರಾಸ್ ಘಟನೆ ಖಂಡಿಸಿ ಪ್ರತಿಭಟನೆ

ಬೆಂಗಳೂರು : ದಲಿತರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಮೇಲೆ ನಡೆಯುತ್ತಿರುವ ಧಾಳಿಯನ್ನು ಖಂಡಿಸಿ CITU, AIAWU, KPRS ಸಂಘಟನೆಗಳು ಕರೆಕೊಟ್ಟಿದ್ದು, ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತಿವಾಗಿದೆ.

ಉಡುಪಿಯಲ್ಲಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಿ ಕೇಂದ್ರ ,ರಾಜ್ಯ ಸರಕಾರವನ್ನು ಒತ್ತಾಯಿಸಿದರೆ, ದೊಡ್ಡ ಬಳ್ಳಾಪುರದಲ್ಲಿ ಮೆರವಣಿಗೆ ಮೂಲಕ ಭಹಿರಂಗ ಸಭೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರವನ್ನು ನೀಡಿದ್ದಾರೆ. ಈ ಪ್ರತಿಭಟನೆಯಲ್ಲಿ ಅಧ್ಯಕ್ಷ ರಾದ ಕೆ.ಶಂಕರ್, ಕಾರ್ಯ ದರ್ಶಿ ಸುರೇಶ್ ಕಲ್ಲಾಗಾರ,ಖಜಾಂಚಿ ಶಶಿಧರ್ ಗೊಲ್ಲ, CITU ಉಡುಪಿ ತಾಲೂಕು ಅಧ್ಯಕ್ಷ ರಾದ ರಾಮ ಕಾರ್ಕಡ, ಕಾರ್ಯ ದರ್ಶಿ ಕವಿರಾಜ್ ಎಸ್. ಸಿಐಟಿಯು ಜಿಲ್ಲಾ ಮುಖಂಡರಾದ ರಾಜು ಪಡುಕೋಣೆ, ನಾಗರತ್ನ,ನಳಿನಿ,ಸದಾಶಿವ ಪೂಜಾರಿ , ಮೋಹನ್, ವಿದ್ಯಾರಾಜ್, ರೊನಾಲ್ಡ್, ವೆಂಕಟೇಶ್ ಕೋಣಿ, ಬಲ್ಕೀಸ್ ಬಾನು,ಶೇಖರ್ ಬಂಗೇರ, ಶಕುಂತಲಾ ಭಾಗವಹಿಸಿದ್ದರು.

ಇನ್ನೂ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನಾ ಮೆರವಣಿ ಮೂಲಕ ಬಹಿರಂಗ ಸಭೆ ನಡೆಸಿ ಕೆಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ವಿಮಲಾ.ಕೆ.ಎಸ್, ಚಂದ್ರುತೇಜಸ್ವಿ, ರುದ್ರಾರಾಧ್ಯ, ರೇಣುಕಾರಾಧ್ಯ, ದಲಿತ ಸಂಘಟನೆ ಮುಖಂಡ ರಾಜು ಸಣ್ಣಕ್ಕಿ, DHS ಮುಖಂಡ ಮಂಜುನಾಥ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ನ್ಯಾಯಾಲಯದ ಸುಪರ್ದಿಯಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.

ಮಂಡ್ಯದಲ್ಲಿಯೂ ಹತ್ರಾಸ್ ಮತ್ತು ರಾಮನಗರದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ತೀವ್ರವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವುದನ್ನು ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು, ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಭದ್ರತೆ ಹಾಗೂ ಪರಿಹಾರ ನೀಡುವಂತೆ ಮತ್ತು ಈ ರೀತಿ ಪ್ರಕರಣಗಳು ದೇಶಾದ್ಯಂತ ಮರುಕಳಿಸದಂತೆ ಎಚ್ಚರ ವಹಿಸುವಂತೆ ಒತ್ತಾಯಿಸಿ CITU, KPRS, AIAWU ಮತ್ತು DHS ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು

 

ಉತ್ತರ ಕನ್ನಡದ ಅಂಕೋಲಾ, ಮುಂಡಗೋಡ, ಶಿರಸಿ, ಹೊನ್ನಾವರ ದಲ್ಲೂ ಪ್ರತಿಭಟನೆ ನಡೆದಿದೆ. ಅಂಕೋಲಾದಲ್ಲಿ KPRS ಮುಖಂಡ ಶಾಂತಾರಾಂ ನಾಯಕ್ ಶಿರಸಿ ಯಲ್ಲಿ CITU ಮುಖಂಡರಾದ ಯಮುನಾ ಗಾಂವ್ಕರ್ ಸೇರಿದಂತೆ CITU, KPRS, ಮುಖಂಡರಿದ್ದರು

ಉತ್ತರ ಪ್ರದೇಶದ ಹತ್ರಾಸ್ ಹಾಗೂ ರಾಮನಗರದ  ಘಟನೆ   ಖಂಡಿಸಿ ಬೆಂಗಳೂರಿನ ವಿವಿಧ ಪ್ರದೇಶಗಳಾದ ತ್ಯಾಗರಾಜ್ ನಗರ, ದಾಸರಹಳ್ಳಿ.ದೊಡ್ಡ ಬಳ್ಳಾಪುರದಲ್ಲಿ ಪ್ರತಿಭಟನೆಗಳನ್ನು ನಡೆಸಲಾಯಿತು.   ಮಹಿಳೆಯರಿಗೆ ರಕ್ಷಣೆ ನಿಡದೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬೇಟಿ ಬಚಾವೊ ಎಂದು ಪುಕ್ಕಟೆ ಪ್ರಚಾರ ತೆಗೆದುಕೊಳ್ಳುವಲ್ಲಿ ನಿರತವಾಗಿವೆ ಹೊರತು ಬೇಟಿಯನ್ನು  ರಕ್ಷಿಸಲು ಮುಂದಾಗುತ್ತಿಲ್ಲ  ಎಂದು ಪ್ರತಿಭಟನೆಕಾರರು ಒತ್ತಾಯಿಸಿದ್ದಾರೆ.       

Donate Janashakthi Media

Leave a Reply

Your email address will not be published. Required fields are marked *