ಸೆಹ್ವಾಗ್-ಸಚಿನ್ ಬಿಂದಾಸ್ ಬ್ಯಾಟಿಂಗ್; ಬಾಂಗ್ಲಾ ವಿರುದ್ಧ ಭಾರತ ಲೆಜೆಂಡ್ಸ್ ಗೆ ಭರ್ಜರಿ ಗೆಲುವು.

ಛತ್ತೀಸ್ಗಢ : ಹಲವು ವರ್ಷಗಳು ಕ್ರಿಕೆಟ್ ಜಗತ್ತಿನ್ನು ರಂಜಿಸಿದ್ದ ಆಟಗಾರರು ಮತ್ತೊಮ್ಮೆ ಇಂದಿನಿಂದ ಕ್ರಿಕೆಟ್ ಮೈದಾನಕ್ಕೆ ಇಳಿದಿದ್ದಾರೆ. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ರಂತಹ ದಂತಕಥೆಗಳ ಕ್ರಿಕೆಟ್ ಆಟವನ್ನು ಅಭಿಮಾನಿಗಳು ಹಲವು ವರ್ಷಗಳ ಬಳಿಕ ಕಣ್ತುಂಬಿಕೊಂಡಿದ್ದಾರೆ. ಅದರಲ್ಲೂ ದಶಕಗಳ ಕಾಲ ಭಾರತದ ಓಪನರ್ ಜೋಡಿಗಳಾಗಿ ಮಿಂಚಿದ್ದ ಸಚಿನ್-ಸೆಹ್ವಾಗ್ ರ ಜೋಡಿಯ ಅಬ್ಬರದ ಶತಕದ ಜೊತೆಯಾಟ ಮತ್ತೊಮ್ಮೆ ಎಲ್ಲರ ಮನಗೆದ್ದಿದೆ. ಬಾಂಗ್ಲಾ ಲೆಜೆಂಡ್ಸ್ ತಂಡವನ್ನು ಭಾರತ ಲೆಜೆಂಡ್ಸ್ ತಂಡ 10 ವಿಕೆಟ್ ಗಳ ಅಂತರದಲ್ಲಿ ಸೋಲಿಸಿದೆ. ವೀರೇಂದ್ರ ಸೆಹ್ವಾಗ್ ರ ಬ್ಯಾಟ್ ನಿಂದ ಬೌಂಡರಿ-ಸಿಕ್ಸರ್ ಗಳ ಸುರಿಮಳೆಗೈದರು.

ಛತ್ತೀಸ್‌ಗಢದ ರಾಯ್‌ಪುರದ ವೀರನಾರಾಯಣ್ ಕ್ರೀಡಾಂಗಣದಲ್ಲಿ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ನ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾ ತಂಡ ಹೀನಾಯವಾಗಿ ಸೋಲನ್ನಪ್ಪಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಭಾರತದ ಬೌಲರ್ ಗಳ ಬೊಂಬಾಟ್ ಬೌಲಿಂಗ್ ಗೆ 19.4 ಓವರ್ ನಲ್ಲಿ ಕೇವಲ 110 ರನ್ ಗೆ ಆಲೌಟ್ ಆದರು. ಇನ್ನು ಕಡಿಮೆ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ಸೆಹ್ವಾಗ್-ಸಚಿನ್ ಜೋಡಿ ಭರ್ಜರಿಯಾಗಿಯೇ ಆರಂಭಿಸಿತು.

ತಮ್ಮ ಎಂದಿನ ಶೈಲಿಯಂತೆ ಮೊದಲ ಬಾಲ್ ಅನ್ನೇ ಸೆಹ್ವಾಗ್ ಬೌಂಡರಿಗೆ ಅಟ್ಟಿದರು. ಆನಂತರ ಒಂದರ ಹಿಂದೊಂದರಂತೆ ಫೋರ್-ಸಿಕ್ಸರ್ ಗಳನ್ನ ಸೆಹ್ವಾಗ್ ಬಾರಿಸಿದರು. ಮೊದಲ ಓವರ್ ನಲ್ಲೇ 19 ರನ್ ಕಲೆ ಹಾಕಿದ ಸೆಹ್ವಾಗ್, ಎರಡನೇ ಓವರ್ ನಲ್ಲಿ ಮತ್ತೆ ಹತ್ತು ರನ್ ಬಾರಿಸಿದರು. ಸೆಹ್ವಾಗ್ ಗೆ ಸಚಿನ ಕೂಡ ಅದ್ಭುತವಾಗಿ ಸಾಥ್ ನೀಡಿದರು. ಸೆಹ್ವಾಗ್‌ ಕೇವಲ‌ 20 ಎಸೆತಗಳಲ್ಲಿ ಅರ್ಧ ಶಕತ ಬಾರಿಸಿ ಸಂಭ್ರಮಿಸಿದರು. ಕೇವಲ 10.1 ಒವರ್ ಗಳಲ್ಲಿ ಭಾರತ ಯಾವುದೇ ವಿಕೆಟೆ ನಷ್ಟವಿಲ್ಲದೇ 114 ರನ್ ಗಳಿಸಿತು. ವೀರೇಂದ್ರ ಸೆಹ್ವಾಗ್ ಕೇವಲ 35 ಎಸೆತಗಳಲ್ಲಿ 80 ರನ್(10 ಬೌಂಡರಿ, 5 ಸಿಕ್ಸರ್) ಗಳಿಸಿದರೆ, ಸಚಿನ್ ತೆಂಡೂಲ್ಕರ್ 26 ಎಸೆತಗಳಲ್ಲಿ 33 ರನ್(5 ಬೌಂಡರಿ) ಗಳನ್ನು ಗಳಿಸಿದರು. ಯುವರಾಜ್ ಸಿಂಗ್, ಪ್ರಗ್ಯಾನ್ ಓಜಾ, ವಿನಯ್ ಕುಮಾರ್ ತಲಾ ಎರಡು ವಿಕೆಟ್ ಪಡೆದರು. ಪ್ರತಿವರ್ಷದಂತೆ ಈ ವರ್ಷವೂ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ನಡೆಯುತ್ತಿದೆ. ಕಳೆದ ವರ್ಷ ಕೊರೋನಾ ಕಾರಣದಿಂದಾಗಿ ಈ ಪಂದ್ಯಾವಳಿಯನ್ನು ಅರ್ಧಕ್ಕೆ ಮೊಟಕು ಗೊಳಿಸಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *