ಬೆಂಗಳೂರು : KCET ಇಂಜಿನಿಯರಿಂಗ್ ಸೀಟು ರದ್ದತಿಗೆ ಸಂಬಂಧಿಸಿದಂತೆ ಹಾಲಿ ಇರುವ ದಂಡದ ಶುಲ್ಕದ ಐದು ಪಟ್ಟು ಶುಲ್ಕ ಪಾವತಿಸುವ ಆದೇಶ ವಾಪಸ್ ಪಡೆಯಲು ಒತ್ತಾಯಿಸಿ ಕರ್ನಾಟಕ ಪರೀಕ್ಷಾ KEA ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಮಾತನಾಡಿದ ಎಸ್ ಎಫ್ ಐ ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ, ಪ್ರಸಕ್ತ ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಸುತ್ತುವರೆದಂತೆ ಎಲ್ಲಾ ಮಾಹಿತಿಗಳು ಸಮರ್ಪಕವಾಗಿ ಸಿಗದ ಕಾರಣ ಅನೇಕ ಗೊಂದಲಗಳು ಸೃಷ್ಟಿಯಾಗಿವೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ KLET ಕೌನ್ಸಿಂಗ್ ಸೀಟು ರದ್ದತಿ ದಂಡವನ್ನು 1:5 ಗೆ ಹೆಚ್ಚಿಸಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಈ ಅಪ್ರಜತಾಂತ್ರಿಕ 1:5 ಸೀಟು ರದ್ದತಿ ದಂಡವನ್ನು ಹಿಂಪಡೆಯಬೇಕು, ಮತ್ತೊಂದು ಸುತ್ತು ಕೌನ್ಸಿಲಿಂಗ್ ನಡೆಸಬೇಕು, ಪ್ರವೇಶಾತಿ ಕೊನೆಗೆ ದಿನಾಂಕ ವಿಸ್ತಿರಿಸಬೇಕೆಂದು ಆಗ್ರಹಿಸಿದ್ದಾರೆ.
ಇಲ್ಲಿಯವರೆಗೂ ಸೀಟು ರದ್ದತಿಯು KEA ಅಡಿ ವೃತ್ತಪರ ಕಾಲೇಜುಗಳಿಗೆ ಪ್ರವೇಶ ಪಡೆಯುವ ಪ್ರಜಾತಾಂತ್ರಿಕ ಹಕ್ಕಾಗಿತ್ತು. ಆದರೆ ಯಾವ ಮಾಹಿತಿಯೂ ಇಲ್ಲದೆ, ಈ ಹಕ್ಕನ್ನು ವಾಪಾಸ್ಸು ಪಡೆಯುತ್ತಿರುವುದು ಅತ್ಯಂತ ಅಪ್ರಜತಾಂತ್ರಿಕ. ಅಲ್ಲದೇ ಸರಿಯಾದ ಮಾಹಿತಿ ಇಲ್ಲದೇ ಇನ್ನೂಂದು ಸುತ್ತು ಕೌನ್ಸಿಲಿಂಗ್ ನಡೆಯುವ ಅಪೇಕ್ಷೆಯಲ್ಲಿರುವ ವಿದ್ಯಾರ್ಥಿ, ಪೋಷಕರಿಗೆ KEA ಸಮರ್ಪಕ ಪರಿಹಾರ ನೀಡಬೇಕು ಹಾಗೂ ಪ್ರವೇಶಾತಿ ಕೊನೆಯ ದಿನಾಂಕ ವಿಸ್ತರಿಸಬೇಕು ಎಂದು ವಿದ್ಯಾರ್ಥಿ-ಪೋಷಕರು ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿಯನ್ನು ನೀಡಿದ್ದಾರೆ.