ಸಿರಾ | ನಮ್ಮ ಮಣ್ಣಿನಮನೆ ಬೀಳುವಂತಿದೆ ನಮಗೆ ಮನೆ ನಿರ್ಮಿಸಿ ಕೊಡಿ

ಸಿರಾ :  ನಮ್ಮ ಮನೆಯು ಹಳೇಯ ಮನೆಯಾಗಿದ್ದು,‌ ಅದು ಮಣ್ಣಿನಿಂದ ನಿರ್ಮಿಸಲಾಗಿದೆ. ಯಾವಾಗ ಬೇಕಾದರೂ ಬಿದ್ದು ಹೋಗುವ ಸಾಧ್ಯತೆಯಿದೆ. ನಾವೆಲ್ಲರೂ ಅಂತಹ ಮನೆಯಲ್ಲೇ ವಾಸಿಸುತ್ತಿದ್ದೇವೆ. ಹಾಗಾಗಿ ಮಳೆಗಾಲ ಬರುವುದರೊಳಗೆ ನಮ್ಮ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿಕೊಡಬೇಕೆಂದು ಮಾಯಸಂದ್ರ ಗ್ರಾಮದ ವಿಧ್ಯಾರ್ಥಿನಿಯಾದ ಹೇಮಾ ರವರು ಸಿರಾ ತಾಲ್ಲೂಕಿನ  ತಾಳಗುಂದ ಗ್ರಾಮ ಪಂಚಾಯತಿಯು ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ಸಿರಾ

ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ತಾಳಗುಂದ ಗ್ರಾಮ : ಪಂಚಾಯಿತಿ ಮತ್ತು ನವ್ಯದಿಶ ಸಂಸ್ಥೆ ಇವರ ಸಹಯೋಗದಲ್ಲಿ ತಾಳಗುಂದದ ಸಿದ್ಧಾರ್ಥ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ಕೆ.ಟಿ ತಿಪ್ಪೇಸ್ವಾಮಿ ರವರು ಉದ್ಘಾಟಿಸಿ ಮಾತನಾಡಿದ ಅವರು ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲೆಯ  ಮಕ್ಕಳು ತಮ್ಮ ತಮ್ಮ  ಶಾಲೆಯ ಮತ್ತು ಗ್ರಾಮದ ಸಮಸ್ಯೆ-ಸವಾಲುಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಪರಿಹಾರ ಮಾಡಿಕೊಡಲು ಸೂಚಿಸಿದರು. ಸಿರಾ

ಸಭೆಯಲ್ಲಿ ಕಾಳಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳು ನಮ್ಮ ಶಾಲೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಶಾಲೆಯ ಮುಂದಿನ ರಸ್ತೆಯ ಪಕ್ಕದಲ್ಲಿ ಹಾಕುತ್ತಿದ್ದೇವೆ. ಜೊತೆಗೆ ಗ್ರಾಮದಲ್ಲಿನ ಜನರು ಅಂಗಡಿಯ ಮತ್ತು ಮನೆಯ ಕಸವನ್ನು ತಂದು ರಸ್ತೆ ಪಕ್ಕದಲ್ಲಿ ಹಾಕುತ್ತಿದ್ದಾರೆ. ಈ ಸಮಸ್ಯೆ ಬಹಳ ದಿನಗಳಿಂದ ಇದ್ದು, ಇದರಿಂದ ಗ್ರಾಮದ ಜನರಿಗೆ ರೋಗಗಳು ಬರುವ ಸಾಧ್ಯತೆಗಳಿವೆ. ಹಾಗಾಗಿ ಆದಷ್ಟು ಬೇಗ ಶಾಲೆಯ ಮತ್ತು ಗ್ರಾಮದ ಕಸವನ್ನು ಪ್ರತಿದಿನ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿಸಬೇಕೆಂದು ಅಧಿಕಾರಿಗಳಲ್ಲಿ ಮತ್ತು ಜನಪ್ರತಿನಿಧಿಗಳಲ್ಲಿ ಮನವಿಯನ್ನು ಮಾಡಿಕೊಂಡರು. ಸಿರಾ

ಇದನ್ನೂ ಓದಿ : ಶಿರಾ | ಯುವಜನ ಆಯೋಗ ರಚನೆಗಾಗಿ ಬೆಳಗಾವಿ ಚಲೋ – ಸಾಮಜಿಕ ಹೋರಾಟಗಾರರಾದ ಜನಾರ್ಧನ ಕೆಸರಗದ್ದೆ

ಮಕ್ಕಳು ತಮ್ಮ ಶಾಲೆಗಳಿಗೆ ಆಟದ ಸಾಮಗ್ರಿಗಳನ್ನು ನೀಡುವಂತೆ, ದೂರದ ಊರಿನಿಂದ ಬರಲು ಸೈಕಲ್ ನೀಡುವಂತೆ, ಹಳ್ಳಿಗಳಲ್ಲಿನ ಕಸವನ್ನು ಸ್ವಚ್ಚಗೊಳಿಸುವಂತೆ,  ಶಾಲೆಗಳಿಗೆ ಶಿಕ್ಷಕರನ್ನು ಒದಗಿಸುವಂತೆ, ರಸ್ತೆಗಳನ್ನು ಸರಿಪಡಿಸುವಂತೆ, ಶಾಲೆಗೆ ನೀರನ್ನು ಪೂರೈಸುವಂತೆ, ಶಾಲಾ ಕೊಠಡಿಗಳನ್ನು ದುರಸ್ಥಿಗೊಳಿಸುವಂತೆ, ಆಟದ ಮೈದಾನವನ್ನು ಒದಗಿಸುವಂತೆ, ಶಾಲೆಗೆ ಪೀಠೋಪಕರಣಗಳನ್ನು ನೀಡುವಂತೆ, ಶಾಲಾ ಆವರಣವನ್ನು ಸ್ವಚ್ಚಗೊಳಿಸುವಂತೆ ಹಾಗೂ ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿಕೊಂಡರು. ಸಭೆಯಲ್ಲಿ ಒಟ್ಟು 9 ಶಾಲೆಗಳಿಂದ 213 ಮಕ್ಕಳು, 9 ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿ, ಒಟ್ಟು 34 ಸಮಸ್ಯೆಗಳನ್ನು ಹೇಳಿಕೊಂಡರು. ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸುವುದಾಗಿ ತಿಳಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ಕೆ.ಟಿ ತಿಪ್ಪೇಸ್ವಾಮಿ ರವರು ಮಾತನಾಡಿ  ದೇಶದಲ್ಲಿ ಮಕ್ಕಳ ಸಂಖ್ಯೆ ಒಟ್ಟು ಜನಸಂಖ್ಯೆಯಲ್ಲಿ ಶೇ.40 ರಷ್ಟಿದ್ದಾರೆ. ರಾಜ್ಯದಲ್ಲಿ  ಪ್ರಸ್ತುತವಾಗಿ 26,416 ಬಾಲ ಗರ್ಭಿಣಿಯರಿದ್ದಾರೆ. ಅನೇಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳು ಸೂಕ್ತ ಸಮಯದಲ್ಲಿ ಸಿಗುತ್ತಿಲ್ಲವಾಗಿದೆ. ಆದ್ದರಿಂದ ಇಂತಹ ಸಮಸ್ಯೆಗಳನ್ನು ಚರ್ಚಿಸಲು ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮೊಟ್ಟಮೊದಲು 2006 ರಲ್ಲಿ  ಮಕ್ಕಳ ಗ್ರಾಮಸಭೆಯನ್ನು ಮಾಡುವುದಾಗಿ ಸುತ್ತೋಲೆಯನ್ನು ಹೊರಡಿಸಿತ್ತು. ಆಗಾಗಿ ಇಲಾಖೆಯು ಪ್ರತಿವರ್ಷವೂ ನವೆಂಬರ್ 14 ರಿಂದ ಜನವರಿ 24ರೊಳಗೆ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಕಡ್ಡಾಯವಾಗಿ ಆಯೋಜಿಸುವ ಸಲುವಾಗಿ ಸುತ್ತೋಲೆಯನ್ನು ಹೊರಡಿಸುತ್ತಿದೆ. ಇದರಿಂದ ಮಕ್ಕಳೂ ಸಹ ಸ್ಥಳೀಯ ಸರ್ಕಾರ, ಸ್ಥಳೀಯ ಸಂಸ್ಥೆಗಳೊಂದಿಗೆ ಭಾಗವಹಿಸಲು ಅವಕಾಶ ಒದಗಿತು.  ಆದ್ದರಿಂದ ಮಕ್ಕಳೂ ಸಹ ತಮ್ಮ ಹಳ್ಳಿಯ ಮತ್ತು ಶಾಲೆಯ ಸಮಸ್ಯೆಗಳನ್ನು ಚರ್ಚಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸಿ, ಆಡಳಿತ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅಭಿಪ್ರಾಯಪಟ್ಟರು.

ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಸರೋಜಮ್ಮ ವಹಿಸಿಕೊಂಡಿದ್ದರು. ರಂಗಕರ್ಮಿ ಶಿವಕುಮಾರ್ ಶಿರಾದಡು ರವರು ಮಕ್ಕಳ‌ ಹಕ್ಕುಗಳ ಗ್ರಾಮಸಭೆಯ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನವ್ಯದಿಶ ಸಂಸ್ಥೆಯ ಜನಾರ್ಧನ್ ರವರು ಯುವಚಾವಡಿಯ ಟೀನ್ ಕ್ಲಬ್ ಮತ್ತು ಯೂಥ್ ಕ್ಲಬ್ ಗಳ ಕಾರ್ಯವೈಖರಿಯ ಬಗ್ಗೆ ಮಾತನಾಡಿದರು. ಸಭೆಯಲ್ಲಿ ಮುಖ್ಯಶಿಕ್ಷಕಿ‌ಯಾದ ರೂಪ ರವರು ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಕವಿತಾ ರವರು ಹಿಂದಿನ ವರ್ಷದ ಮಕ್ಕಳ ಗ್ರಾಮ ಸಭೆಯ ಅನುಪಾಲನಾ ವರದಿಯನ್ನು ಮಂಡಿಸಿದರು. ಸಭೆಯಲ್ಲಿ ನವ್ಯದಿಶ ಸಂಸ್ಥೆಯ ಯೂಥ್ ಮೆಂಟರ್ ಮಂಜುನಾಥ್ ಅಮಲಗೊಂದಿ ರವರು ಪ್ರಶ್ನೋತ್ತರ ಅವಧಿಯನ್ನು ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಲಕ್ಷ್ಮೀದೇವಮಮ್ಮ, ಸರೋಜಮ್ಮ ರಂಗನಾಥ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಹರೀಶ್ ರವರು, ಪಿಡಿಒ ಕಾಂತರಾಜು ರವರು, ಸಿಡಿಪಿಓ ಹರಿಪ್ರಸಾದ್ರವರು, ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಪಿಎಸ್ಐ ಭೈರೇಗೌಡರವರು, ಶಿಕ್ಷಣ ಇಲಾಖೆಯ ನಾಗಭೂಷಣ್, ರಂಗಪ್ಪ, ಪ್ರದೀಪ್ ಕುಮಾರ್ ರವರು, ಆರೋಗ್ಯ ಇಲಾಖೆಯ ಗೋಪಾಲ್, ಆಯುಷ್ ಇಲಾಖೆಯ ಡಾ.ಜಯಶ್ರೀ ರವರು, ಸಿದ್ಧಾರ್ಥ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಅಶೋಕ್ ರವರು ಹಾಗೂ ಎಲ್ಲಾ ಶಾಲೆಯ ಶಿಕಕ್ಷರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿ ಮತ್ತು ಮಕ್ಕಳು ಹಾಜರಿದ್ದರು.

ಇದನ್ನೂ ನೋಡಿ : ಕನಿಷ್ಠ ವೇತನ ನೀಡಿ, ನಮ್ಮನ್ನು ಖಾಯಂ ಮಾಡಿ | ಅಂಗನವಾಡಿ,ಆಶಾ, ಬಿಸಿಯೂಟ ನೌಕರರ ಪ್ರತಿಭಟನೆ | Janashakthi Media

 

Donate Janashakthi Media

Leave a Reply

Your email address will not be published. Required fields are marked *