ಸಂಘ ಪರಿವಾರದ ಕೈಗೆ ಸಿಕ್ಕು ತತ್ತರಿಸುತ್ತಿದೆ ಶಿಕ್ಷಣ ಕ್ಷೇತ್ರ

ಅನಂತನಾಯಕ್

ಸಂಪುಟ – 06, ಸಂಚಿಕೆ 04, ಜನವರಿ, 22, 2012

2

ರಾಜ್ಯದ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಬಿ.ಜೆ.ಪಿ. ಅಧಿಕಾರಕ್ಕೆ ಬಂದಾಗಿನಿಂದ ಸಂಘ ಪರಿವಾರದ ಕಪಿಮುಷ್ಠಿಗೆ ಒಪ್ಪಿಸುತ್ತಾ ಶಿಕ್ಷಣದ ಕೇಸರೀಕರಣಕ್ಕೆ ಮುಂದಾಗುತ್ತಿದೆ. ರಾಜ್ಯದ ಶಿಕ್ಷಣ ಕ್ಷೇತ್ರ ಸಂಪೂರ್ಣವಾಗಿ ಸಂಘ ಪರಿವಾರದ ದಾಳಿಗೆ ತತ್ತರಿಸುತ್ತಿದೆ. ಇಡೀ ಕ್ಷೇತ್ರದ ಆಯಕಟ್ಟಿನ ಹುದ್ದೆಗಳಲ್ಲಿ ಸಂಘ ಪರಿವಾರದವರನ್ನು ತುರುಕುವ ಮೂಲಕ ಶಿಕ್ಷಣವನ್ನು ಕೇಸರೀಕರಣ ಮಾಡಲು ಸಕರ್ಾರಿ ಯಂತ್ರವನ್ನು ರಾಜ್ಯ ಸಕರ್ಾರ ಮುಂದಾಗುತ್ತಿದೆ. ಪ್ರಗತಿಪರ, ವೈಚಾರಿಕ ವಿಚಾರಧಾರೆಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ.

ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ……

ರಾಜ್ಯ ಸಕರ್ಾರ 5, 6, 7ನೇ ತರಗತಿಯ ಪಠ್ಯಪುಸ್ತಕಗಳ ಪರಿಷ್ಕರಣೆಯ ಹೆಸರಿನಲ್ಲಿ ಶಿಕ್ಷಣದ ಕೇಸರೀಕರಣಕ್ಕೆ ಮುಂದಾಗುತ್ತಿದೆ. ಪರಿಷ್ಕರಣೆಗೆ ಚಿಂತಕರ ಸಮಿತಿಯನ್ನು ರಚಿಸುವ ಕುರಿತು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಬದಲಾಗಿ ಸಂಘ ಪರಿವಾರದ ಮೂಡಂಬಡಿತ್ತಾಯ, ರಾಮ ಜೋಯಿಸ್, ಪಿ.ವಿ.ಕೃಷ್ಣ ಭಟ್ ಮುಂತಾದವರಿಗೆ ಈ ಜವಾಬ್ದಾರಿ ನೀಡಲಾಗಿದೆ ಎನ್ನಲಾಗುತ್ತಿದ್ದು ತೆರೆಮರೆಯಲ್ಲಿ ಈ ಕಾರ್ಯ ವೇಗವಾಗಿ ಸಾಗುತ್ತಿದೆ. ಮನುಧರ್ಮ ಶಾಸ್ತ್ರದ ಚಾತುವರ್ಣ ಹೇರಿಕೆ ಮತ್ತು ಪ್ರಗತಿ ವಿರೋಧಿ, ಅಂಧಕಾರವನ್ನು ಹೇರುವ ಸಾಹಿತ್ಯವನ್ನು ಧರ್ಮ-ಸಂಸ್ಕೃತಿಯ ಹೆಸರಿನಲ್ಲಿ ಪಠ್ಯದೊಳಗೆ ತುರುಕುವ ಕಾರ್ಯ ಯಥೇಚ್ಚವಾಗಿ ಪ್ರಾರಂಭವಾಗಿದೆ. ಇದನ್ನು ತಡೆಯಲು ಅಧಿಕಾರಿಗಳಿಗೆ ಸಾಧ್ಯವಾಗದೆ ಬಿ.ಜೆ.ಪಿ.ಯ ಆಣತಿಯಂತೆ ಕುಣಿಯುತ್ತಿದ್ದಾರೆ.ಶಿರಸಿಯ ಸ್ವರ್ಣವಲ್ಲಿ ಮಠಕ್ಕೆ ಭಗವದ್ಗೀತೆ ಅಭಿಯಾನದ ಹೆಸರಿನಲ್ಲಿ ರೂ. 15 ಕೋಟಿ, ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ತಿಗೆ ಪುಸ್ತಕ ಮಾರಾಟಕ್ಕಾಗಿ ರೂ. 17 ಕೋಟಿ ಹಣ ಸೇರಿದಂತೆ ಸಂಘ ಪರಿವಾರದ ಎಲ್ಲ ಸಂಘಟನೆಗಳಿಗೆ ಭೂಮಿಯನ್ನು ಸಕರ್ಾರ ಎಗ್ಗಿಲ್ಲದೆ ನೀಡುತ್ತಿದೆ.

ಆದರೆ, ಸುಮಾರು ಶೇ.76 ರಷ್ಟು ವಿದ್ಯಾಥರ್ಿಗಳು ಅಭ್ಯಸಿಸುತ್ತಿರುವ ಸಕರ್ಾರಿ ಶಿಕ್ಷಣ ಸಂಸ್ಥೆಗಳಿಗೆ ಮೂಲಭೂತ ಸೌಲಭ್ಯ ನೀಡಲು ಹಣವಿಲ್ಲವೆಂದು ಸಕರ್ಾರ ಬೊಬ್ಬೆ ಹೊಡೆಯುತ್ತಿದೆ. ಅಷ್ಟೇ ಅಲ್ಲದೆ, 3,174 ಸಕರ್ಾರಿ ಶಾಲೆಗಳನ್ನು ಮುಚ್ಚಲು ಮುಂದಾಗುತ್ತಿದೆ. ಶಾಲಾ ಶಿಕ್ಷಣ ಬಲಪಡಿಸಲು ಅಗತ್ಯ ಶಿಕ್ಷಕರ ನೇಮಕಕ್ಕೆ ಮುಂದಾಗದೆ ಯೋಗ-ಧ್ಯಾನದಂತಹ ಆಧ್ಯಾತ್ಮಿಕ ವಿಚಾರಗಳ ಪ್ರಚಾರಕ್ಕಾಗಿ ಯೋಗ ಗುರುಗಳ ನೇಮಕಕ್ಕೆ ಮುಂದಾಗುತ್ತಿದೆ. ಆದರೆ, ಅಗತ್ಯ ದೈಹಿಕ ಶಿಕ್ಷಕರ ನೇಮಕ ಮಾಡಿಕೊಳ್ಳುತ್ತಿಲ್ಲ.

ವಿ.ವಿ.ಗಳಿಗೆ ಪರಿವಾರಿಗಳ ಲಗ್ಗೆ:
ಬಿ.ಜೆ.ಪಿ. ಇಡೀ ಉನ್ನತ ಶಿಕ್ಷಣ ಕ್ಷೇತ್ರವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿದ್ದು ಅದಕ್ಕಾಗಿ ಕನರ್ಾಟಕ ಜ್ಞಾನ ಆಯೋಗ, ಉನ್ನತ ಶಿಕ್ಷಣ ಪರಿಷತ್ತುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಅಲ್ಲದೆ, ಎಲ್ಲ ವಿ.ವಿ.ಗಳಿಗೆ ಸಂಘ ಪರಿವಾರದ ಹಿನ್ನೆಲೆಯ ಕುಲಪತಿ, ಕುಲಸಚಿವರು ಇತರರನ್ನು ನೇಮಕ ಮಾಡಿಕೊಳ್ಳುವಲ್ಲಿ ತೊಡಗಿದೆ. ರಾಜ್ಯದ ವಿವಿಧ ವಿ.ವಿ.ಗಳ ಸಿಂಡಿಕೇಟ್ಗೆ ಸಂಘ ಪರಿವಾರದವರನ್ನು ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳ ಲಾಗುತ್ತಿದೆ. ವಿ.ವಿ.ಗಳು ಮೂಲ ಸ್ವರೂಪವನ್ನು ಕಳೆದುಕೊಂಡು ಆರ್.ಎಸ್.ಎಸ್.ನ ಶಾಖೆಗಳಂತಾಗುತ್ತಿವೆ. ಈಗಾಗಲೇ ಬೆಂಗಳೂರು, ಬಿಜಾಪುರ, ತುಮಕೂರು ಹಾಗೂ ಇತರೇ ವಿ.ವಿ.ಗಳು ಸಮಸ್ಯೆಯ ಸುಳಿಯಲ್ಲಿ ಸಿಲುಕಿವೆ.

ಬಯಲಾಗುತ್ತಿರುವ ಭ್ರಷ್ಟಾಚಾರ:
ರಾಜ್ಯದ ವಿವಿದ ವಿ.ವಿ.ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಅಂಕಪಟ್ಟಿ, ಪ್ರಶ್ನೆ-ಉತ್ತರ ಪತ್ರಿಕೆ, ಇನ್ನಿತರ ಅಗತ್ಯಗಳನ್ನು ಮುದ್ರಿಸಲು ಸಂಡಿಕೇಟ್ ಸದಸ್ಯರ ಸಹಭಾಗಿತ್ವದ ಖಾಸಗಿ ಕಂಪನಿಗಳಿಗೆ ನಿಡಲಾಗುತ್ತಿದೆ. ರಾಜ್ಯದ ವಿ.ವಿ.ಗಳಿಗೆ ಬೇಕಾಗಿರುವ ಪುಸ್ತಕಗಳು, ಪ್ರಶ್ನೆಪತ್ರಿಕೆ, ಇನ್ನಿತರೆ ಸಾಮಗ್ರಿಗಳನ್ನು ಬೆಂಗಳೂರು, ಮೈಸೂರಿನಲ್ಲಿರುವ ಸಂಘ ಪರಿವಾರದ ಶಾರದ ವಿಕಾಸ ಟ್ರಸ್ಟ್, ರಾಷ್ಟ್ರೋತ್ಥಾನ, ಪುಂಗವ ಪ್ರಕಾಶನದಲ್ಲಿ ಮುದ್ರಿಸಲಾಗುತ್ತಿದ್ದು, ಕೋಟಿ-ಕೋಟಿ ಅವ್ಯವಹಾರ ನಡೆಯುತ್ತಿದೆ. ದಾವಣಗೆರೆ, ಶಿವಮೊಗ್ಗ, ತುಮಕೂರು, ಬೆಂಗಳೂರು ವಿ.ವಿ.ಗಳಲ್ಲಿ ನೂರಾರು ಕೋಟಿ ರೂ.ಗಳ ಭ್ರಷ್ಟಾಚಾರ ನಡೆದು ತನಿಖಾ ವರದಿಗಳು ಬಹಿರಂಗಗೊಂಡಿದ್ದರೂ ತಪ್ಪಿತಸ್ಥರ ಮೇಲೆ ರಾಜ್ಯ ಸಕರ್ಾರ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಈ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಂಘ ಪರಿವಾರದವರ ಕೈವಾಡವಿದೆ.

ಸಂಘ ಪರಿವಾರಿಗಳು ಗೂಂಡಾಗಿರಿಗೆ ಮುಂದಾಗಿದ್ದಾರೆ:
ಬೌದ್ಧಿಕ ವಲಯ ಶಿಕ್ಷಣ ಕ್ಷೇತ್ರವನ್ನು ತನ್ನ ಕಪಿಮುಷ್ಠಿಯಲ್ಲಿ ತೆಗೆದುಕೊಳ್ಳಲು ಮುಂದಾಗಿರುವ ಸಂಘ ಪರಿವಾರ, ಅದಕ್ಕೆ ಗೂಂಡಾಗಿರಿಯಂತಹ ಹೀನಕೃತ್ಯಕ್ಕೂ ಇಳಿಯುತ್ತಿದೆ. ಹಿಂದೆ ವಿಜಾಪುರ ಮಹಿಳಾ ವಿ.ವಿ.ಯ ಕುಲಪತಿ ಡಾ.ಸೈಯದ್ ಅಕ್ತರ್ ಮೇಲೆ ಎಬಿವಿಪಿ ಯವರು ಹಲ್ಲೆ ಪ್ರಕರಣ ನಡೆದಿದೆ. ಇತ್ತೀಚಿಗೆ ಬೆಂಗಳೂರು ವಿ.ವಿ.ಕುಲಪತಿ ಡಾ. ಪ್ರಭುದೇವ್ ಅವರ ಮೇಲೆ ಎಬಿವಿಪಿ ಕಾರ್ಯಕರ್ತರು ದೈಹಿಕ ಹಲ್ಲೆಗೆ ಮುಂದಾಗಿದ್ದಾರೆ. ಕುಲಪತಿಯವರು ನಾನು ಪೊಲೀಸ್ ರಕ್ಷಣೆ ಇಲ್ಲದೆ ವಿ.ವಿ.ಗೆ ಹೋಗಲಾರೆ ಎನ್ನುತ್ತಿದ್ದಾರೆ. ಇನ್ನೊಂದೆಡೆ, ಬೆಂಗಳೂರು ವಿ.ವಿ.ಯ ದೂರ ಶಿಕ್ಷಣ ವಿಭಾಗದ ನಿದರ್ೇಶಕ ಡಾ.ನಿರಂಜನ ರವರ ಮೇಲೆ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಮತ್ತಿತರರು ಹಲ್ಲೆ ಮಾಡಿ ಜೈಲಿಗೆ ಹೊಗಿ ಬಂದಿದ್ದಾರೆ. ಹೀಗೆ ದೈಹಿಕ ಹಲ್ಲೆಗೆ ಮುಂದಾಗುವ ಮೂಲಕ ಸಂಘ ಪರಿವಾರವು ವಿ.ವಿ.ಗಳ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡಿ ಏಕಪಕ್ಷೀಯವಾಗಿ ತನ್ನ ಅಜೆಂಡಾವನ್ನು ತುರುಕಲು ಮುಂದಾಗುತ್ತಿದೆ. ವಿ.ವಿ.ಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಗಳು ಕುಸಿಯುತ್ತಿವೆ. ಜಾತಿಯ ಹೆಸರಿನಲ್ಲಿ ವಿದ್ಯಾಥರ್ಿಗಳನ್ನು ಎತ್ತಿಕಟ್ಟುವ ವ್ಯವಸ್ಥಿತ ಹುನ್ನಾರ ನಡೆದಿದೆ. ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಹೋರಾಟದ ಬದಲಾಗಿ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಮೇಲೆ ದೈಹಿಕ ಹಲ್ಲೆಗೆ ಮುಂದಾಗುತ್ತಿರುವ ಎಬಿವಿಪಿ ಯ ಗೂಂಡಾಗಿರಿಗೆ ಸಕರ್ಾರವೇ ಬೆನ್ನೆಲುಬಾಗಿ ನಿಂತಂತಿದೆ.

ಚಿಂತಕ ಡಾ. ಟಿ.ಆರ್. ಚಂದ್ರಶೇಖರ ಅಮಾನತು:
ನಾಡಿನ ಪ್ರಗತಿಪರ ಚಿಂತಕ, ಹಂಪಿ ವಿ.ವಿ.ಯ ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಟಿ.ಆರ್. ಚಂದ್ರಶೇಖರ್ ರವರನ್ನು ವಿನಾಃಕಾರಣ ಅಮಾನತ್ತುಗೊಳಿಸಲಾಗಿದೆ. ರಾಯಚೂರು ಜಿಲ್ಲಾ ಪಂಚಾಯತ್ ಮತ್ತು ಯುನಿಸೆಫ್ ಸಂಸ್ಥೆಯ ಜೊತೆ ಜವಾಬ್ದಾರಿ ನಿರ್ವಹಿಸುವಲ್ಲಿನ ತಾಂತ್ರಿಕ ದೋಷವನ್ನೇ ದೊಡ್ಡದು ಮಾಡಿ, ಯಾವುದೇ ನೋಟಿಸ್ ನೀಡದೆ ಏಕಾಏಕಿ ಅಮಾನತುಗೊಳಿಸಿ ಆದೇಶ ನೀಡಿರುವುದು ಸಂಘ ಪರಿವಾರದ ಅಣತಿಯಂತೆ ಕುಣಿಯುತ್ತಿರುವ ಹಂಪಿ ವಿ.ವಿ.ಸಿಂಡಿಕೇಟ್ನ ದುರಹಂಕಾರಕ್ಕೆ ಹಿಡಿದ ಕನ್ನಡಿಯಾಗಿದೆ. ಡಾ.ಟಿ.ಆರ್.ಸಿ. ಯವರು ರಾಜ್ಯ ಸಕರ್ಾರದ ಜನವಿರೋಧಿ ನೀತಿಗಳನ್ನು ನಿರಂತರವಾಗಿ ವಿರೋಧಿಸುತ್ತಾ ಜನ ಚಳುವಳಿಗಳಲ್ಲಿ ಭಾಗವಹಿಸುವ ಮೂಲಕ, ದಿನಪತಿಕೆಗಳಲ್ಲಿ ಲೇಖನಗಳನ್ನು ಬರೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಾ ಬರುವ ರಾಜ್ಯದ ಬುದ್ಧಿಜೀವಿಗಳಲ್ಲಿ ಪ್ರಮುಖರಾಗಿದ್ದಾರೆ. ಹಿಂದೆ ರಾಜ್ಯಸಕರ್ಾರ ಹಂಪಿ ವಿ.ವಿ.ಯ 80 ಎಕರೆ ಭೂಮಿಯನ್ನು ಥೀಮ್ ಪಾಕರ್್ ಹೆಸರಿನಲ್ಲಿ ಸಂಘ ಪರಿವಾರಕ್ಕೆ ನೀಡಲು ಮುಂದಾಗಿದ್ದರ ವಿರುದ್ಧ ಎಸ್.ಎಫ್.ಐ. ಸೇರಿದಂತೆ ಪ್ರಗತಿಪರರ ನಡೆಸಿದ ಹೋರಾಟದ ಮುಂಚೂಣಿಯಲ್ಲಿದ್ದವರು ಟಿ.ಆರ್.ಸಿ. ಅಷ್ಟೇ ಅಲ್ಲದೆ, ಜಾತಿ-ಅಸ್ಪೃಶ್ಯತೆಯ ವಿರುದ್ಧ, ಕೋಮುವಾದದ ವಿರುದ್ಧ, ವಿಶ್ವ ಶಾಂತಿಗಾಗಿ, ಪ್ರಭುತ್ವದ ಧಮನಕಾರಿ ನೀತಿಗಳ ವಿರುದ್ಧ ಹೋರಾಟದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡವರು.

ಇವರನ್ನು ವ್ಯವಸ್ಥಿತ ಸಂಚಿನ ಮೂಲಕ ತುಳಿಯಲು ಹವಣಿಸುತ್ತಿದ್ದ ಸಂಘ ಪರಿವಾರ ಕುಂಟು ನೆಪ ಮಾಡಿಕೊಂಡು ಹಂಪಿ ವಿ.ವಿ.ಯ ಸಿಂಡಿಕೇಟ್ ಸಭೆಯಲ್ಲಿ ಚಚರ್ಿಸಿ ಸೇವೆಯಿಂದ ವಜಾಗೊಳಿಸಲಾಗಿದೆ. ವಿ.ವಿ.ಯಲ್ಲಿ ಎಬಿವಿಪಿ, ಆರ್ಎಸ್ಎಸ್ನ ಹಿನ್ನೆಲೆಯ ಸಿಂಡಿಕೇಟ್ ಸದಸ್ಯರೇ ಹೆಚ್ಚಾಗಿರುವುದು ಇವರ ಅಮಾನತ್ತಿಗೆ ಮೂಲ ಕಾರಣ. ಪ್ರಗತಿಪರ ಚಿಂತನೆಯ ಪ್ರಾಧ್ಯಾಪಕರಿಗೆ ವಿನಾಃಕಾರಣ ಕಿರುಕುಳ ನೀಡುತ್ತಿರುವುದು ನಡೆಯುತ್ತಿದೆ. ಇದಕ್ಕೆ ರಾಜ್ಯ ಸಕರ್ಾರದ ಅಧಿಕೃತ ಬೆಂಬಲವಿದೆ.

ರಾಜ್ಯದ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಬಿ.ಜೆ.ಪಿ. ಅಧಿಕಾರಕ್ಕೆ ಬಂದಾಗಿನಿಂದ ಸಂಘ ಪರಿವಾರದ ಕಪಿಮುಷ್ಠಿಗೆ ಒಪ್ಪಿಸುತ್ತಾ ಶಿಕ್ಷಣದ ಕೇಸರೀಕರಣಕ್ಕೆ ಮುಂದಾಗುತ್ತಿದೆ. ಅದಕ್ಕಾಗಿ ಆರ್.ಎಸ್.ಎಸ್. ಹಿನ್ನೆಲೆಯ ಶಿಕ್ಷಣ ಸಚಿವರು, ಅಧಿಕಾರಿಗಳನ್ನು ನೇಮಿಸಿದೆ. ಯಥೇಚ್ಚವಾಗಿ ಸಕರ್ಾರಿ ಯಂತ್ರ-ಹಣದ ದುರ್ಬಳಕೆಯಾಗುತ್ತಿದೆ. ವೈಜ್ಞಾನಿ, ವೈಚಾರಿಕ ಪ್ರಗತಿಪರ ಶಿಕ್ಷಣ ಮತ್ತು ಸೌಹಾರ್ಧಯುತ ಶೈಕ್ಷಣಿಕ ವಾತಾವರಣಕ್ಕಾಗಿ ಬಲಿಷ್ಠ ಚಳುವಳಿಯ ಅಗತ್ಯವಿದೆ.

ಸಂಘ ಸಂತತಿಯ ಅನೈತಿಕ ತೇಪೆ
ರಾಜ್ಯದ ಬಿಜೆಪಿಯಲ್ಲಿ ಅಧಿಕಾರ ಸ್ಥಾನಕ್ಕಾಗಿ ಕಾದಾಡುತ್ತಿರುವ ಯಡಿಯೂರಪ್ಪ – ಅನಂತಕುಮಾರರ ಈ ಎರಡು ಬಣಗಳು ಕದನ ವಿರಾಮ ಘೋಷಿಸಿರುವುದು ಕೇವಲ ತಾತ್ಕಾಲಿಕವಷ್ಟೇ. ಮತ್ತೇ ತಮ್ಮನ್ನು ಮುಖ್ಯಮಂತ್ರಿಯನ್ನಾಗಿಸಬೇಕು ಎಂಬ ಬೇಡಿಕೆ ಈಡೇರದೇ ಹೋದಲ್ಲಿ ಬಹುಸಂಖ್ಯೆಯಲ್ಲಿ ಶಾಸಕರನ್ನು ಹೊರಗೊಯ್ದು ಪ್ರತ್ಯೇಕ ಪಕ್ಷವನ್ನು ಸಂಘಟಿಸಿ ಸಕರ್ಾರವನ್ನೇ ಬೀಳಿಸುವ ಬೆದರಿಕೆ ಒಡ್ಡಿದ ಯಡ್ಡಿಯೂರಪ್ಪನವರು ಆರ್.ಎಸ್.ಎಸ್.ನ ಉಪದೇಶಕ್ಕೆ ಮನಃ ಪರಿವರ್ತನೆ ಮಾಡಿಕೊಂಡಿದ್ದಾರೆಂದು ಭಾವಿಲಾದೀತೆ?, ಈ ಗುಂಪುನ್ನು ಮೂಲೆಗುಂಪು ಮಾಡಿ ಮೇಲುಗೈ ಸಾಧಿಸಿಯೇ ಸಿದ್ದವೆಂದು ಹಲವು ತಂತ್ರ – ಕುತಂತ್ರಗಳನ್ನು ಹೊಸೆಯುತ್ತಲೇ ಬಂದ ಅನಂತಕುಮಾರ್ ಈಶ್ವರಪ್ಪನವರ ಬಣವೂ ಕೂಡ ಒಂದಾಗಿ ಹೋಗುವರೆಂಬ ಮಾತು ನಂಬಲಸಾಧ್ಯ. ಇಡೀರಾಜ್ಯದಾದ್ಯಂತ ತಮ್ಮ ಬಲ ಕ್ರೋಡೀಕರಿಸಲು ತಮ್ಮದೇ ಹಲವಾರು ಸಂಘಟನಾ ಕಾರ್ಯಕ್ರಮ ರೂಪಿಸಿ ಇಳಿಯಲಿದ್ದ ಯಡಿಯೂರಪ್ಪನನ್ನು ತಡೆಯುವುದೇ ಈಗ ನಡೆಸಿದ ಆರ್.ಎಸ್.ಎಸ್. ಸಂಧಾನ ಫಲ. ಹೀಗೆ ಯಡಿಯೂರಪ್ಪನವರ ಬಣದ ತಂತ್ರಗಳನ್ನು ಅವರಂದು ಕೊಂಡಂತೆ ಜಾರಿಯಾಗದೇ ವಿಳಂಬವಾದಲ್ಲಿ ಕ್ರಮೇಣ ಯಡಿಯೂರಪ್ಪನವರ ಬಣ ದುರ್ಬಲವಾಗುವುದು ಎಂಬುದು ಹಲವರ ಲೆಕ್ಕಾಚಾರ.

ಇಲ್ಲಿ ಪ್ರಮುಖ ಪ್ರಶ್ನೆಯೆಂದರೆ ಬಿಜೆಪಿಯಲ್ಲಿನ ವಿವಿಧ ಬಣಗಳ ಕಿತ್ತಾಟಗಳಿಂದ ಪತನಗೊಳ್ಳುವ ಬಿಜೆಪಿ ಸಕರ್ಾರವನ್ನು ರಕ್ಷಿಸಲು ಆರೆಸ್ಸಸ್ ಧಾವಿಸಿದೆ. ತಾನು ಸಾಂಸ್ಕೃತಿಕ ಸಂಘಟನೆಯೆಂದ ರಾಜಕೀಯಕ್ಕೆ ತಮಗೂ ಸಂಬಂಧವಿಲ್ಲವೆಂದೂ ಹೇಳುತ್ತಿರುವ ಆರ್.ಎಸ್.ಎಸ್.ಗೆ ಆ ಅಸಹ್ಯಕರ ಪ್ರಸಂಗದಲ್ಲಿ ಖಳನಾಯಕನ ಪಾತ್ರದ ಅಗತ್ಯವಾದರೂ ಏನಿದೆ?. ಮೇಲಾಗಿ ಅಲ್ಲಿ ಯಾವ ಜನ ಹಿತವಿದೆ. .ಬಿಜೆಪಿಯೊಳಗೆ ನಡೆಯುತ್ತಿರುವ ಗುದ್ದಾಟದಲ್ಲಿ ಜನತೆಯ, ನಾಡಿನ ಯಾವುದೇ ಪ್ರಶ್ನೆಗಳಿಲ್ಲ. ಇಲ್ಲಿರುವುದು ಅಧಿಕಾರ ದಾಹ, ಮನಸೋ ಇಚ್ಛೆ ದೇಶದ ಪ್ರಾಕೃತಿಕ ಸಂಪನ್ಮೂಲಗಳನ್ನೂ, ಸಾರ್ವಜನಿಕ ಹಣವನ್ನು ಮತ್ತಷ್ಟೂ ಲೂಟಿ ಹೊಡೆಯುವ ದಾಹ , ಹಲವಾರು ಅಕ್ರಮ, ಹಗರಣಗಳಲ್ಲಿ ಸಿಕಿ ್ಕಬಿದ್ದು, ಅಕ್ರಮ ಮಾರ್ಗಗಳಿಂದ ಪಾರಾಗಲು ಹವಣಿಸುತ್ತಿರುವ ಅತ್ಯಂತ ನೀಚತನದ ಜನದ್ರೋಹಿ ಹಿತಾಸಕ್ತಿಗಳೇ ಇಲ್ಲಿ ಪ್ರಧಾನವಾಗಿರುವಾಗ ಈ ಬಗ್ಗೆ ಏನೊಂದೂ ಚಕಾರವೆತ್ತದೇ ಕೂಡಿಹೋಗಿ ಎಂದು ಬುದ್ದಿವಾದವನ್ನು ಸಂಘ ಕೇಂದ್ರ ಹೇಳಿದೆಯೆಂದರೆ ಅದರ ನೈತಿಕ, ಸಾಂಸ್ಕೃತಿಕ ಬದ್ದತೆಯಾದರೂ ಏನು?.

ಬಿಜೆಪಿ ಅಧಿಕಾರಕ್ಕೆ ಬಂದ ಆರಂಭದಿಂದಲೇ ಇಲ್ಲಿಯವರೆಗೂ ಸಕರ್ಾರದ ಅಧಿಕಾರ, ಸಂಪನ್ಮೂಲಗಳು ಮತ್ತು ಲೂಟಿಯಲ್ಲಿ ಪ್ರಧಾನ ಪಾಲು ಪಡೆಯುತ್ತ ಬಂದ ಸ್ವಯಂ ಸೇವೆಯ ಸಂಘಕ್ಕೇ ಅಂತಹ ನೈತಿಕತೆ ಬರುವುದಾದರೂ ಹೇಗೆ?. ಭ್ರಷ್ಟಾಚಾರದ ಹೊಲಸು ಪ್ರಕರಣಗಳು ಒಂದೊಂದಾಗಿ ಹೊರಬಂದು ತೀವ್ರ ವಿವಾದಗಳೆದ್ದಾಗ ತನಗೂ ಬಿಜೆಪಿಗೂ ಸಂಬಂಧವೇ ಇಲ್ಲ ಎಂದೆಲ್ಲಾ ಹೇಳಿಕೊಳ್ಳುತ್ತಿದ್ದ ಆರೆಸ್ಸೆಸ್ ಇದೀಗ ಇವರಿಗೆಲ್ಲಾ ಬೆದರಿಕೆ ಹಾಕಿ ಒಟ್ಟುಗೂಡಿಸಲು ಪ್ರಯತ್ನಿಸಿದ್ದಾದರೂ ಯಾವುದಕ್ಕೆ?. ಇವುಗಳಿಗೆ ಪ್ರಾಮಾಣಿಕವಾಗಿ ಉತ್ತರ ಅವರಲ್ಲಿ ಇಲ್ಲ ಎಂಬುದು ಗೊತ್ತಿರುವ ಸಂಗತಿಯೇ ಆಗಿದೆ. ಆದರೆ ಒಂದಂತೂ ನಿಜ, ಆರೆಸ್ಸೆಸ್ ಆರಂಭದಿಂದಲೂ ಇಡೀ ಸಕರ್ಾರವನ್ನೇ ನಿಯಂತ್ರಿಸುತ್ತಾ ಬಂದಿದೆ. ಸಕರ್ಾರದ ಪ್ರತಿ ವ್ಯವಹಾರದಲ್ಲಿಯೂ ಯಾವುದೇ ಸಂವಿಧಾನಿಕ ಬದ್ಧತೆ, ಉತ್ತರದಾಯಿತ್ವ ಇಲ್ಲದೇ, ಜನ ಚುನಾಯಿಸಿದ ಸರಕಾರದ ಹೆಗಲ ಮೇಲೆ ಕುಳಿತು ಅಧಿಕಾರ ಚಲಾಯಿಸುತ್ತಿರುವುದು ಪ್ರಜಾತಂತ್ರಕ್ಕೆ ಮಾರಕವಾಗಿದೆ. ಇದು ಫ್ಯಾಶಿಸ್ಟ್ ವರ್ತನೆಯಾಗಿದೆ.

ಹಲವಾರು ಕೋಮು ಗಲಭೆಗಳಲ್ಲಿ ಪ್ರಮುಖ ಪಾತ್ರ, ಪಾಕಿಸ್ತಾನದ ಧ್ವಜ ಹಾರಿಸಿ ದಂಗೆ ಎಬ್ಬಿಸುವ ದೇಶದ್ರೋಹಿ ಪ್ರಯತ್ನಗಳಂತ ಆರೋಪಗಳನ್ನು ಎದುರಿಸುತ್ತಿರುವ ಸಂಘಪರಿವಾರವೇ ಈ ಸಕರ್ಾರವನ್ನು ನಿಯಂತ್ರಿಸುವುದು, ರಾಜಕೀಯ ಪಕ್ಷದೊಳಗೆ ಕೈಹಾಕುವುದು ಮತ್ತು ಅದರಂತೆ ವಿದೇಯವಾಗಿ ಬಿಜೆಪಿ ನಡೆದುಕೊಳ್ಳುವುದು ಜಾತ್ಯಾತೀತತೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ, ಸಂವಿಧಾನಕ್ಕೆ ಒಡ್ಡಿದ ಬೆದರಿಕೆಯೇ ಆಗಿದೆ.

ಈಗ ನಡೆದಿರುವ ಕಿತ್ತಾಟಗಳಲ್ಲಿ ಭೂ ಹಾಗೂ ಗಣಿ ಮಾಫಿಯಾಗಳದ್ದೇ ಪ್ರಧಾನ ಪಾತ್ರವಿದೆ. ಬಿಜೆಪಿಯೆಂದರೆ ಹಲವು ಪಕ್ಷಗಳಿವೆ, ಮುಖ್ಯವಾಗಿ ಪಕ್ಷದೊಳಗೆ ಮೂರು ಪಕ್ಷ.ಗಳು. ಇವು ಮೇಲುಗೈ ಸಾಧಿಸಲು ಸದಾ ಪ್ರಯತ್ನಿಸುತ್ತಲೇ ಬಂದಿವೆ. ಈ ಗುಂಪುಗಳು ನಡೆಸಿದ ಅಕ್ರಮಗಳನ್ನು ಮುಚ್ಚಿಕೊಳ್ಳಲು ಲೂಟಿ ಮುಂದುವರೆಸಲು ಅವುಗಳು ಅಧಿಕಾರಕ್ಕಾಗಿ ಹಂಬಲಿಸುತ್ತಲೇ ಬಂದಿವೆ. ಹೀಗಾಗಿ ಅವರೆಷ್ಟೇ ಒಂದಾಗಿದ್ದೇವೆಂದೂ, ಜಗಳವಾಡಿದ್ದಕ್ಕೆ ಕ್ಷಮಿಸಬೇಕೆಂದು ಸಾರ್ವಜನಿಕರಲ್ಲಿ ಯಾಚಿಸಿದರೂ ಅದು ಕಪಟ ನಾಟಕ ಎಂಬುದರಲ್ಲಿ ಅನುಮಾನವೇ ಇಲ್ಲ. ಈ ತಾತ್ಕಾಲಿಕ ತೇಪೆಗಳಿಂದ ರಾಜ್ಯದ ಜನತೆಗೆ ಚಿಕ್ಕಾಸಿನ ಪ್ರಯೋಜನವೂ ಇಲ್ಲ. ಅಧಿಕಾರದಲ್ಲುಳಿಯುವ ಹಕ್ಕನ್ನೇ ಕಳೆದುಕೊಂಡಿರುವ ಇವರು ದುಷ್ಟ ಉದ್ದೇಶಗಳನ್ನಿಟ್ಟುಕೊಂಡು ಅಧಿಕಾರ ಮುಂದುವರಿಯುವುದು ಅಕ್ಷಮ್ಯ ಅಪರಾಧ.
0

Donate Janashakthi Media

Leave a Reply

Your email address will not be published. Required fields are marked *