ಕೋಲಾರ : ವಿಸ್ಟ್ರಾನ್ ಕಾರ್ಖಾನೆಯ ಮಾಲೀಕರು ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯದಿಂದ ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮಾಡಿ ಈ ಘಟನೆ ಸಂಬಂಧಿಸಿದ್ದು ಇದರ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಿ ನೈಜ ಸತ್ಯಾಂಶ ಹೊರಬರಬೇಕಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ವತಿಯಿಂದ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಘಟನೆಯ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಮಿಕರನ್ನು 12 ಗಂಟೆಗಳ ಕಾಲ ದುಡಿಸಿಕೊಂಡರು ಯಾಕೆ ನಾಲ್ಕು ತಿಂಗಳಿಂದ ಸಂಬಳ ನೀಡಿಲ್ಲ, ಇದರ ಬಗ್ಗೆ ಕಾರ್ಮಿಕ ಇಲಾಖೆ ಗಮನಹರಿಸದೇ ಕಾನೂನು ಕಾಯಿದೆ ಉಲ್ಲಂಘನೆಯಾಗಿದ್ದರೂ ಮೌನ ವಹಿಸಿದ್ದು ಯಾಕೆ ರಾಜ್ಯ ಸರಕಾರವೇ ಬಂಡವಾಳಗಾರರ ಗುಲಾಮರಂತೆ ಕೆಲಸ ಮಾಡುತ್ತಾ ಇದ್ದು ಈ ಘಟನೆಯು ಸಂಪೂರ್ಣ ಹೊಣೆ ರಾಜ್ಯ ಸರಕಾರದ ಜಿಲ್ಲಾಡಳಿತ ವೈಫಲ್ಯ ಎದ್ದು ಕಾಣುತ್ತದೆ ಎಂದು ಆರೋಪಿಸಿದರು.
ಯಾವುದೇ ಒಂದು ಕಾರ್ಖಾನೆ ಪ್ರಾರಂಭಸಿದ್ದ ಸಂದರ್ಭದಲ್ಲಿ ಕಾರ್ಮಿಕರು ಮಾಲೀಕರ ಆಧಾರ ಸ್ತಂಭವಾಗಿರುತ್ತಾರೆ ಮಾಲೀಕರು ಕಾರ್ಮಿಕರನ್ನು ಖಾಯಂ ಮಾಡಿದ್ದರಾ ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರಾ ದೇಶದ ಕಾರ್ಮಿಕ ಕಾಯಿದೆಗಳು ಕಾರ್ಖಾನೆಗಳಲ್ಲಿ ಸಮರ್ಪಕವಾಗಿ ಜಾರಿಯಾಗಿದ್ದಾವಾ ಕಾರ್ಮಿಕರಿಗೆ ರಕ್ಷಣೆ ಇದೀಯಾ ಕಾರ್ಖಾನೆಯಲ್ಲಿ ಇಂತಹ ಪರಿಸ್ಥಿತಿ ಬರಲು ಬಂಡವಾಳ ಹೂಡಿದವರ ತಪ್ಪು ಇದ್ದೀಯಾ ಎಂಬುದರ ಬಗ್ಗೆ ತನಿಖೆಯಾದಾಗ ಮಾತ್ರ ಘಟನೆಯ ನೈಜ ಅಂಶಗಳು ಹೊರಬರಲು ಸಾಧ್ಯ ಇದರ ಬಗ್ಗೆ ಪೋಲಿಸ್ ಇಲಾಖೆ ಒತ್ತಡಕ್ಕೆ ಮಣಿದು ಅಮಾಯಕರನ್ನು ಬಂಧಿಸದ ರೀತಿಯಲ್ಲಿ ಗಮನ ಹರಿಸಬೇಕು ಎಂದರು
ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಮಾತನಾಡಿ, ಬಂಡವಾಳ ಹೂಡಿಕೆಗೆ ಭೂಮಿ ಕಳೆದುಕೊಂಡವರನ್ನು ಖಾಯಂ ಮಾಡಿದ್ದರಾ ಮಾಲೀಕರು ಈ ನೆಲದ ಬಗ್ಗೆ ಅಗೌರವ ತರಲು ಹೊರಟಿದ್ದಾರೆ ವಿಸ್ಟ್ರಾನ್ ಕಂಪನಿಯ ಕಾರ್ಮಿಕರ ಪರವಾಗಿ ಜೆಸಿಟಿಯು ನಿಲ್ಲಲಿದೆ ಸರಕಾರದ ಮೇಲೆ ಸಂಸದರು ಒತ್ತಡ ತಂದು ತನಿಖೆಯನ್ನು ದಿಕ್ಕು ತಪ್ಪಸುತ್ತಾ ಇದ್ದಾರೆ ಕಾರ್ಮಿಕರು ತಪ್ಪು ಮಾಡುದ್ರು ಎಂದು ಕ್ರಿಮಿನಲ್ ರೀತಿಯಲ್ಲಿ ಅವರನ್ನು ನೋಡುವುದು ತಪ್ಪುನಿಷ್ಪಕ್ಷಪಾತವಾಗಿ ತನಿಖೆಯಾಗಿ ಜನತೆಯ ಮುಂದೆ ಬಹಿರಂಗ ಪಡಿಸಬೇಕು ಏಕ ಪಕ್ಷಕೀಯಾವಾಗಿ ಹೇಳಿಕೆ ನೀಡುವುದು ತಪ್ಪು ಎಂದರು
ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮೀ ಮಾತನಾಡಿ, ಸಂಸದರು ಹೇಳುವ ಪ್ರಕಾರ ಪ್ರಗತಿ ನನ್ನ ಕೈಲಿ ಇದೆ ಎಂದು ತನಿಖೆಯನ್ನು ಏಕಮುಖದಲ್ಲಿ ನೋಡುವುದು ಬಿಟ್ಟು ಕಾರ್ಮಿಕರು ದುಡಿದರೆ ಮಾತ್ರ ಅಭಿವೃದ್ಧಿ ಕಾರ್ಖಾನೆಗಳ ವಿಚಾರವಾಗಿ ಇನ್ನೊಂದು ಮುಖವಾಗಿ ನೋಡಬೇಕು ಕಂಪನಿಯಲ್ಲಿ ಹತ್ತು ಸಾವಿರ ಕಾರ್ಮಿಕರನ್ನು ಕೆಲಸಕ್ಕೆ ದುಡಿಸಿಕೊಳ್ಳಕ್ಕೆ ಅನುಮತಿ ನೀಡಿದವರು ಯಾರು ಗುತ್ತಿಗೆದಾರನಿಗೆ ಹಣ ಎಷ್ಟು ಬಿಡುಗಡೆಯಾಗಿದೆ ಅದರಲ್ಲಿ ಕಾರ್ಮಿಕರಿಗೆ ಎಷ್ಟು ಪ್ರಮಾಣದಲ್ಲಿ ಸೇರಿದೆ ಎಂಬುದು ತನಿಖೆಯಾಗಬೇಕು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ರಾಜ್ಯ ಸರ್ಕಾರ ಬಾಯಿಗೆ ಬಂದಂತೆ ಘಟನೆ ಬಗ್ಗೆ ಹೇಳುತ್ತಿವುದು ಸರಿಯಲ್ಲ ಎಂದರು
ಪತ್ರಿಕಾಗೋಷ್ಠಿಯಲ್ಲಿ ಜೆಸಿಟಿಯು ಮುಖಂಡರಾದ ಶ್ಯಾಮಣ್ಣರೆಡ್ಡಿ, ಕೆ.ವಿ ಭಟ್, ಜಿ.ಆರ್ ಶಿವಶಂಕರ್, ಅಪ್ಪಣ್ಣ, ನಾಗನಾಥ್, ಕಾಳಪ್ಪ, ಷಣ್ಮುಖ, ಸತ್ಯಾನಂದ್, ಗಾಂಧಿನಗರ ನಾರಾಯಣಸ್ವಾಮಿ, ಯಲ್ಲಪ್ಪ, ಇದ್ದರು