ವಿಜಯಪುರ | ಕರ್ನಾಟಕ ಬಾಲವಿಕಾಸ ಅಕಾಡೆಮಿ ಪ್ರಶಸ್ತಿಗೆ ಜಿಲ್ಲೆಯ ಅನುಪ್ರಿಯಾ ರಾಘವೇಂದ್ರ ಕುಲಕರ್ಣಿ ಆಯ್ಕೆ

ವಿಜಯಪುರ:  2023-24ನೇ ಬಾಲ ಗೌರವ ಪ್ರಶಸ್ತಿಗೆ  ಕರ್ನಾಟಕ ಬಾಲವಿಕಾಸ ಅಕಾಡೆಮಿ ಪ್ರಶಸ್ತಿಗೆ ಜಿಲ್ಲೆಯ ವಿದ್ಯಾರ್ಥಿನಿ ಅನುಪ್ರಿಯಾ ರಾಘವೇಂದ್ರ ಕುಲಕರ್ಣಿ ಆಯ್ಕೆ ಆಗಿದ್ದಾರೆ.

ಅಕಾಡೆಮಿಯ ಬಹುಮುಖ ಪ್ರತಿಭೆ ವಿಭಾಗದ ಅಡಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಆಯ್ಕೆ ಆಗಿರುವ ವಿದ್ಯಾರ್ಥಿನಿ ನಗರದ ಪ್ರತಿಷ್ಠಿತ ಬಿಎಲ್‌ಡಿಇ ಸಂಸ್ಥೆಯ ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾರೆ.

ಇದನ್ನೂ ಓದಿ : ದೆಹಲಿ | VB-GRAMG ಮಸೂದೆ ಗ್ರಾಮೀಣ ಬಡವರಿಗೆ ಕೊಡುವ ಕೆಲಸದ ಸೀಮಿತ ಉದ್ಯೋಗ ಹಕ್ಕು ನಿರಾಕರಿಸುವ ಹುನ್ನಾರ

ಡಿ.16ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ಕಾರ್ಯಕರ್ಮದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ವಿದ್ಯಾರ್ಥಿನಿ ಅನುಪ್ರಿಯಾ ರಾಘವೇಂದ್ರ ಕುಲಕರ್ಣಿ ಶೈಕ್ಷಣಿಕ, ವಿಜ್ಞಾನ, ಸಂಶೋಧನೆ, ಕ್ರೀಡೆ ಮತ್ತು ರಸಪ್ರಶ್ನೆಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ. ಅವಳು ಯಾವಾಗಲೂ ತರಗತಿಯ ಟಾಪರ್ ಆಗಿದ್ದು, ಚೆಸ್, ಕಲೆ, ಪ್ರಬಂಧ, ಸಾಹಿತ್ಯ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾಳೆ.

ವಿದ್ಯಾರ್ಥಿನಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಶಾಲೆಯ ಪ್ರಾಚಾರ್ಯ ಡಾ.ಶೈಜು ಕೆ.ಆರ್.ನಾಯರ, ಹಿರಿಯ ಸಂಯೋಜಕಿ ದೀಪಾ ಜಂಬುರೆ, ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
https://www.youtube.com/watch?v=tha1hbeK8XA
Donate Janashakthi Media

Leave a Reply

Your email address will not be published. Required fields are marked *