ರೈತರ ಹಕ್ಕುಗಳನ್ನು ಬೆಂಬಲಿಸಿದ ಸಂಶೋಧಕಿಯನ್ನು ತನಿಖೆಗೆ ಗುರಿಪಡಿಸಿದ ಇ.ಡಿ.: ವಿಶ್ವಾದ್ಯಂತ ತೀವ್ರ ಖಂಡನೆ-ಪ್ರತಿಭಟನೆ

ಸಂಶೋಧಕಿ, ಲೇಖಕಿ ಮತ್ತು ಸಕ್ರಿಯ ಕಾರ್ಯಕರ್ತೆ ಮತ್ತು ಪ್ರಧಾನ ಮಂತ್ರಿಗಳನ್ನು ಮಣಿಸಿದ ರೈತರ ಐತಿಹಾಸಿಕ ಹೋರಾಟವನ್ನು ಸಕ್ರಿಯವಾಗಿ ಬೆಂಬಲಿಸಿದ ಡಾ. ನವಶರಣ್ ಸಿಂಗ್ ಅವರನ್ನು ಮೇ 10ರಂದು ಏಳು ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ (ಇ.ಡಿ.) ಪಿಎಂಎಲ್‌ಎ(ಕಪ್ಪು ಹಣವನ್ನು ಬಿಳುಪು ಮಾಡುವುದನ್ನು ತಡೆಯುವ) ಕಾಯ್ದೆಯ ಅಡಿಯಲ್ಲಿ ವಿಚಾರಣೆಗೆ ಗುರಿಪಡಿಸಿರುವುದಕ್ಕೆ ದೇಶ-ವಿದೇಶಗಳಲ್ಲಿ ವ್ಯಾಪಕ ಖಂಡನೆ ಮತ್ತು ಪ್ರತಿಭಟನೆಗಳು ವ್ಯಕ್ತವಾಗಿವೆ.

ರೈತ ಹೋರಾಟಕ್ಕೆ ನೇತೃತ್ವ ನೀಡಿರುವ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಒಂದು ಹೇಳಿಕೆಯನ್ನು ನೀಡಿ, ಡಾ. ನವಶರಣ ಅವರು ದಿಲ್ಲಿ ಗಡಿಗಳಲ್ಲಿ ಐತಿಹಾಸಿಕ ರೈತ ಚಳವಳಿಯ ಪ್ರಮುಖ ಬೆಂಬಲಿಗರಲ್ಲಿ ಒಬ್ಬರು, ರೈತರ ಹೋರಾಟದ ಸಂದೇಶವನ್ನು ಅಂತಾರಾಷ್ಟ್ರೀಯ ವೇಧಿಕೆಗಳಿಗೆ ಕೊಂಡೊಯ್ದರು. ಇದಕ್ಕಾಗಿಯೇ ಮೋದಿ ಸರ್ಕಾರ ಆಕೆಯ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ ಎನ್ನುತ್ತ ,ನ್ಯಾಯಕ್ಕಾಗಿ ಆಕೆಯ ಅನ್ವೇಷಣೆಯಲ್ಲಿ ಎಸ್‌ಕೆಎಂ ಅವರಿಗೆ ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದೆ.

ಇದು ಡಾ.ನವಶರಣ್ ಸಿಂಗ್ ಅವರಿಗೆ ಕಿರುಕುಳ ನೀಡುವ ಮತ್ತು ಬೆದರಿಸುವ ಬಿಜೆಪಿ ಸರ್ಕಾರದ ದುಷ್ಟ ಪ್ರಯತ್ನ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ತೀವ್ರವಾಗಿ ಖಂಡಿಸಿದೆ. ಪಿಎಂಎಲ್‌ಎ ಅಡಿಯಲ್ಲಿ ಅವರನ್ನು ಪ್ರಶ್ನಿಸುವ ಜಾರಿ ನಿರ್ದೇಶನಾಲದ ಕ್ರಮ ಭಿನ್ನಾಭಿಪ್ರಾಯದ ದನಿಗಳನ್ನು ಅಡಗಿಸುವ ಇನ್ನೊಂದು ಪ್ರಯತ್ನವಾಗಿದೆ. ಪ್ರಜಾಸತ್ತಾತ್ಮಕ ಹಕ್ಕುಗಳ ಪ್ರತಿಪಾದಕರಾಗಿ, ಸಾರ್ವಜನಿಕ ಚಿಂತಕರಾಗಿ ಮಹತ್ವದ ಪಾತ್ರ ವಹಿಸುತ್ತಿರುವ ಅವರು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ರೈತ-ವಿರೋಧಿ ಮತ್ತು ಜನವಿರೋಧಿ ನೀತಿಗಳಿಗೆ ತಮ್ಮ ವಿರೋಧವನ್ನು ನಿರಂತರವಾಗಿ ವ್ಯಕ್ತಪಡಿಸುತ್ತ ಬಂದಿರುವವರು.

ಖ್ಯಾತ ನಾಟಕಕಾರ ದಿವಂಗತ ಗುರುಶರಣ್ ಸಿಂಗ್ ಅವರ ಪುತ್ರಿಯಾಗಿರುವ ಅವರು ರೈತ ಚಳವಳಿಗಳ ಕಟ್ಟಾ ಬೆಂಬಲಿಗರಾಗಿ ಬಿಜೆಪಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು ಎಂದು ಎಐಕೆಎಸ್ ಕೂಡ ನೆನಪಿಸಿದೆ. ಖ್ಯಾತ ಹಕ್ಕು ಕಾರ್ಯಕರ್ತ ಹರ್ಷ್ ಮಂದರ್ ನೇತೃತ್ವದ ಟ್ರಸ್ಟ್ ‘ಅಮನ್ ಬಿರಾದಾರಿ’ ಮಂಡಳಿಯ ಸದಸ್ಯರಾಗಿರುವ ಅವರನ್ನು ಈ ಟ್ರಸ್ಟ್£ ಕೆಲವು ಹಣಕಾಸಿನ ವಹಿವಾಟುಗಳು ಮತ್ತು ಹರ್ಷಮಂದರ್ ಅವರೊಂದಿಗಿನ ಸಂಬAಧದ ಬಗ್ಗೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ. ಜನರ ಹಕ್ಕುಗಳನ್ನು ಮತ್ತು ಕೋಮು ಸೌಹಾರ್ದವನ್ನು ಪ್ರತಿಪಾದಿಸುತ್ತ, ಈ ಹಕ್ಕುಗಳ ಮತ್ತು ಸೌಹಾರ್ದದ ಉಲ್ಲಂಘನೆಯ ವಿರುದ್ಧ ದೇಶವಿಡೀ ಸಂಚರಿಸುತ್ತಿರುವ ಮಾಜಿ ಉನ್ನತ ಸರಕಾರೀ ಅಧಿಕಾರಿ ಹರ್ಷ ಮಂದರ್ ಅವರ ದನಿಯನ್ನು ಅಡಗಿಸಲು ಆರಂಭಿಸಿರುವ ಈ ತನಿಖೆಯಲ್ಲಿ ಈಗ ನವಶರಣ್ ಸಿಂಗ್‌ರವರನ್ನು ಕೂಡ ಸೇರಿಸಿರುವುದು ದೇಶದಾದ್ಯಂತ ಬುದ್ಧಿಜೀವಿಗಳು ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಕಾರ್ಯಕರ್ತರನ್ನು ಗುರಿಯಾಗಿಸುವ ಮೋದಿ ಸರ್ಕಾರದ ವಿಶಾಲ ಮಾದರಿಯ ಭಾಗವಾಗಿದೆ ಎಂದಿರುವ ಎಐಕೆಎಸ್ ಪ್ರಗತಿಪರ ಮತ್ತು ಪ್ರಜಾಪ್ರಭುತ್ವವಾದಿ ದನಿಗಳ ಮೇಲೆ ಬಿಜೆಪಿ ಸರ್ಕಾರದ ಫ್ಯಾಸಿಸ್ಟ್ ದಾಳಿಗಳ ವಿರುದ್ಧ ದನಿ ಎತ್ತುವಂತೆ ಜನಾಂದೋಲನದ ಎಲ್ಲಾ ವಿಭಾಗಗಳಿಗೆ ಮನವಿ ಮಾಡಿದೆ.

ಅಖಿಲ ಭಾರತ ಅರಣ್ಯ ದುಡಿಯುವ ಜನರ ಸಂಘ ಮತ್ತು ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್ ಕೂಡ ಇದು ಭಿನ್ನಾಭಿಪ್ರಾಯದ ದನಿಗಳನ್ನು ತೊಡೆದುಹಾಕಲು ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸುವ ನಿಂದನೀಯ ಕೃತ್ಯ ಎಂದು ಖಂಡಿಸಿವೆ.

ಡಾ.ನವಶರಣ್ ಸಿಂಗ್ ಕೆನಡಾದ ಕಾರ್ಲೆಟನ್ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಅಲ್ಲಿಯೂ ಬೌದ್ಧಿಕ ವಲಯದಲ್ಲಿ ಖ್ಯಾತರಾಗಿರುವ ಅವರನ್ನು ಬೆಂಬಲಿಸಿ ಕೆನಡಾದ 20 ಕ್ಕೂ ಹೆಚ್ಚು ಸಂಸ್ಥೆಗಳು ಜಂಟಿ ಹೇಳಿಕೆಯನ್ನು ನೀಡಿದ್ದು, ಇ.ಡಿ. ಯ ಈ ಕ್ರಮವನ್ನು ಪ್ರಗತಿಪರ ಧ್ವನಿಗಳನ್ನು ಗುರಿಯಾಗಿಸಿಕೊಂಡಿರುವ ಮೋದಿ ಸರ್ಕಾರದ ಬಂಧನಗಳೋAದಿಗೆ ತಳುಕು ಹಾಕುತ್ತ “ದಕ್ಷಿಣ ಏಷ್ಯಾದ ಒಬ್ಬ ಸಾಧಕಿ, ವಿದ್ವಾಂಸೆ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಡಾ. ಸಿಂಗ್ ಅವರು ತಳಮಟ್ಟದ ಕೆಲಸದ ಸುದೀರ್ಘ ಇತಿಹಾಸವನ್ನು ಹೊಂದಿದ್ದಾರೆ ಮತ್ತು ಅವರ ದಿವಂಗತ ತಂದೆಯಿAದ ಪಡೆದ ಪರಂಪರೆಯನ್ನು ಮುಂದಕ್ಕೊಯ್ಯುತ್ತಿದ್ದಾರೆ ಗ್ರಾಮೀಣ ಪಂಜಾಬ್ ಮತ್ತು ಇತರೆಡೆಗಳಲ್ಲಿ ಬಡವರು ಮತ್ತು ವಂಚಿತರನ್ನು ತಲುಪುವ ಮೂಲಕ, ಅವರ ಬೆಂಬಲ ಮತ್ತು ವಕಾಲತ್ತು ಅವರಿಗೆ ಜನಸಾಮಾನ್ಯರ ಪ್ರೀತಿ ಮತ್ತು ಗೌರವವನ್ನು ಗಳಿಸಿ ಕೊಟ್ಟಿದೆ. ಇದು ಅವರು ಮೋದಿಯ ಕಠೋರ ಕಾನೂನುಗಳ ವಿರುದ್ಧ ಭಾರತೀಯ ರೈತರ ಹೋರಾಟವನ್ನು ಧೈರ್ಯದಿಂದ ಬೆಂಬಲಿಸಿದಾಗ ಸ್ಪಷ್ಟವಾಗಿದೆ. …ಡಾ. ನವಶರಣ್ ಸಿಂಗ್ ಮತ್ತು ಅವರ ತಳಮಟ್ಟದ ಮತ್ತು ಶೈಕ್ಷಣಿಕ ಕೆಲಸಗಳ ಬಗ್ಗೆ ತಿಳಿದಿರುವ ಅಥವಾ ಪರಿಚಿತರಾಗಿರುವ ನಮಗೆ, ಆಡಳಿತದ ತನಿಖಾ ಸಂಸ್ಥೆಗಳಿAದ ಆಕೆಯ ಕಿರುಕುಳವು ಆಕ್ರೋಶ ಉಂಟು ಮಾಡಿದೆ, ಇದನ್ನು ಒಪ್ಪಲು ಸಾಧ್ಯವಿಲ್ಲ , ಅದನ್ನು ದೃಢವಾಗಿ ವಿರೋಧಿಸಬೇಕು” ಎಂದಿವೆ.

Donate Janashakthi Media

Leave a Reply

Your email address will not be published. Required fields are marked *