ರಾಷ್ಟ್ರಪತಿ ಚುನಾವಣೆ : ಮಹಾತ್ಮ ಗಾಂಧಿ ಮೊಮ್ಮಗ ಅಭ್ಯರ್ಥಿ?

ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಮೈತ್ರಿಯ ವಿರುದ್ಧ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಹಲವು ವಿರೋಧ ಪಕ್ಷಗಳ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಹ್ವಾನಿಸಿದ್ದ ರಾಜಕೀಯ ಪಕ್ಷಗಳ ಜಂಟಿ ಸಮಾವೇಶದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ರಾಷ್ಟ್ರ ರಾಜಧಾನಿಯ ಕಾನ್ ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಈ ಸಭೆ ನಡೆಯಿತು. ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳು ಮತ್ತೊಮ್ಮೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಹೆಸರನ್ನು ಪ್ರಸ್ತಾಪಿಸಿದವು, ಆದರೆ ಹಿರಿಯ ನಾಯಕ ಈ ಪ್ರಸ್ತಾಪವನ್ನು ನಿರಾಕರಿಸಿದರು ಎಂದು ವರದಿಯಾಗಿದೆ. ಆದರೆ ಅವರ ಆರೋಗ್ಯದ ಕಾರಣದಿಂದಾಗಿ ನನಗೆ ಸಾಧ್ಯವಗೋದಿಲ್ಲ ಅಂತ ಹೇಳಿದ್ದಾರೆ ಎನ್ನಲಾಗಿದೆ. ಇದೇ ವೇಳೆ ತಮ್ಮ ನಿರ್ಧಾರದ ಬಗ್ಗೆ ಮರುಪರಿಶೀಲಿಸುವಂತೆ ಎಲ್ಲಾ ಪಕ್ಷಗಳು ಅವರನ್ನು ವಿನಂತಿಸಿದವು” ಆದರೆ ಅದನ್ನು ಶರದ್‌ ಪವಾರ್‌ ನಿರಾಕರಿಸಿದ್ದಾರೆ.

ಈ ನಡುವೆ ಫಾರೂಕ್ ಅಬ್ದುಲ್ಲಾ, ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನು ಮಮತಾ ಬ್ಯಾನರ್ಜಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.  ಬಹುತೇಕರು ಗೋಪಾಲಕೃಷ್ಣ ಗಾಂಧಿಯವರ ಹೆಸರಿಗೆ ಒಪ್ಪಿಗೆ ಸೂಚಿಸಿದ್ದರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.

ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಸಮಾಜವಾದಿ ಪಕ್ಷ, ಎನ್‌ಸಿಪಿ, ಡಿಎಂಕೆ, ಆರ್‌ಜೆಡಿ ಮತ್ತು ಎಡಪಕ್ಷಗಳ ನಾಯಕರು ಟಿಎಂಸಿ ವರಿಷ್ಠರು ಕರೆದ ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಎಎಪಿ, ಎಸ್‌ಎಡಿ, ಎಐಎಂಐಎಂ, ಟಿಆರ್‌ಎಸ್ ಮತ್ತು ಒಡಿಶಾದ ಆಡಳಿತಾರೂಢ ಬಿಜೆಡಿ ಈ ಸಭೆಗೆ ಹಾಜರಾಗಲಿಲ್ಲ. ರಾಷ್ಟ್ರಪತಿ ಚುನಾವಣೆ ಜುಲೈ 18 ರಂದು ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *