ರಾಜ್ಯದಲ್ಲಿ 23 ಸಾವಿರ ದಾಟಿದ ಡೆಂಘೀ ಪ್ರಕರಣ, ಬೆಂಗಳೂರಿನಲ್ಲಿ ಗರಿಷ್ಠ!

ಬೆಂಗಳೂರಿನಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ 10 ಸಾವಿರ ಗಡಿ ದಾಟಿದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಸೋಂಕಿತರ ಸಂಖ್ಯೆ 10,511 ಜಿಗಿತ ಕಂಡಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 199 ಡೆಂಘೀ ಪ್ರಕರಣಗಳು ಪತ್ತೆ ಆಗಿದ್ದು, ರಾಜ್ಯದಲ್ಲಿ ಡೆಂಘೀ ಸೋಂಕಿತರ ಪ್ರಕರಣಗಳ 23,163 ಏರಿಕೆ ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1182 ಆಗಿದೆ.

ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಬಿಬಿಎಂಪಿ ಅಧಿಕಾರಿಗಳಿಗೆ 2 ವಾರಗಳ ವಿಶೇಷ ಟಾಸ್ಕ್ ನೀಡಿದ್ದು, ಎರಡು ವಾರದಲ್ಲಿ ಡೆಂಘೀ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಬೇಕು ಎಂದು ಸೂಚಿಸಿದ್ದರು. ಆದರೆ ಗಡುವು ಮುಗಿದರೂ ನಗರದಲ್ಲಿ ಡೆಂಘೀ ಕಂಟ್ರೋಲ್​ಗೆ ತರುವಲ್ಲಿ ಅಧಿಕಾರಿಗಳು ಫೇಲ್ಯುವರ್​ ಆ ಅನ್ನೋವ ಪ್ರಶ್ನೆ ಎದುರಾಗಿದೆ.

ದಿನನಿತ್ಯ ನಗರದಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಮಹದವೇಪುರದಲ್ಲಿ ಅತಿ ಹೆಚ್ಚು ಡೆಂಘೀ ಪ್ರಕರಣಗಳು ದಾಖಲಾಗಿದ್ದು, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್​ ಸೇರಿದಂತೆ ನಗರ ಹೆಚ್ಚು ಹಾಟ್​ಸ್ಪಾಟ್​ಗಳಾಗಿವೆ.

ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ ಐವರಲ್ಲಿ ಝೀಕಾ ವೈರಸ್ ​​​ಸೋಂಕು ಪತ್ತೆಯಾಗಿದೆ. ಝೀಕಾ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಜಿಗಣಿ ಪ್ರದೇಶವನ್ನು ಕಂಟೋನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *