ಜಿ.ಎನ್.ಮೋಹನ್
ಸಂಪುಟ – 06, ಸಂಚಿಕೆ 39, ಸೆಪ್ಟೆಂಬರ್ 23, 2012
ಪ್ರೀತಿಯ ಮಾಸ್ಟ್ರ
ಕಾಂ. ಪಿ. ರಾಮಚಂದ್ರರಾವ್ ನಮ್ಮನ್ನಗಲಿ ಸೆಪ್ಟೆಂಬರ್ 18, 2012ಕ್ಕೆ 14 ವರ್ಷಗಳಾಗುತ್ತವೆ. ಸಿಪಿಐ(ಎಂ)ನ ರಾಜ್ಯ ಕಾರ್ಯದಶರ್ಿಗಳು, ಕನರ್ಾಟಕ ಪ್ರಾಂತ ರೈತ ಸಂಘದ ರಾಜ್ಯಅಧ್ಯಕ್ಷರು, ಉಲ್ಲಾಳ ಕ್ಷೇತ್ರದ ಶಾಸಕರೂ ಆಗಿ ಹಾಗೂ ಕನರ್ಾಟಕ ರಾಜ್ಯದ ಕಮ್ಯೂನಿಸ್ಟ್ ಚಳುವಳಿಯ ಪ್ರಮುಖ ಮುಖಂಡರಾಗಿ ಕಾಂ. ಪಿ.ಆರ್. ವಹಿಸಿದ ಮಹತ್ವದ ಪಾತ್ರವನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳೋಣ.
ಮಾತನಾಡುವುದು ಮುಗಿದಿತ್ತು ಎಂದು ಹೇಳಿದವರು ಯಾರು?
ಎಲ್ಲರೂ ಹೇಳಿದರು
ಸಮುದ್ರ ಯಾರಿಗೂ ಕಾಯುವುದಿಲ್ಲ
ಬರುವವರನ್ನು ಒಟ್ಟಿಗೇ ಕರೆದೊಯ್ಯುತ್ತದೆ
ಒಲ್ಲೆ ಎಂದವರನ್ನು ದಡಕ್ಕೆ ಎಸೆಯುತ್ತದೆ
ಆದರೆ ನೀವು ಕಾಮ್ರೇಡ್,
ಸಾಗರಕ್ಕಿದ್ದ ಅರ್ಥವನ್ನು ಬದಲಿಸಿದಿರಿ
ಒಲ್ಲೆ ಎಂದವರಿಗೂ ಕಾದು
ಜೊತೆ ಜೊತೆಗೇ
ಸಮುದ್ರ ನಡೆದ ಉದ್ದಕ್ಕೂ ಕರೆದೊಯ್ದಿರಿ
ಎಷ್ಟು ಜನ ಕಣ್ಣೀರು ಒರೆಸಿಕೊಂಡರು
ಕಾಮ್ರೇಡ್ ನೀವು ಹೆಗಲ ಮೇಲೆ
ಕೈ ಹಾಕಿದಾಗ
ಎಷ್ಟು ಜನ ಬಿಕ್ಕಿದರು
ಇಷ್ಟು ದಿನ ಯಾರಿಗೂ ಹೇಳಲಾಗದೆ
ಉಳಿಸಿಕೊಂಡ ಮಾತುಗಳನ್ನು
ನಿಮ್ಮ ಮುಂದೆ ಸುರಿದು
ಪ್ರತಿಯೊಬ್ಬರ ಎದೆಗೂ ಒಂದು
ಕದವಿರುತ್ತದೆ ಎಂದು ಹೇಗೆ ಕಂಡುಕೊಂಡಿರಿ
ನೀವು
ಯಾರಿಗೂ ಹೇಳದೆ ಬಂದುಬಿಟ್ಟಿರಿ
ಬಾಗಿಲಿಗೆ
ಒಮ್ಮೆ ಬಂದ ನಿಮಗೆ ಮತ್ತೆ
ಯಾರಾದರೂ ಬಾಗಿಲು ಮುಚ್ಚಿದರೇ ಹೇಳಿ?
ಎಲ್ಲರೊಳಗೂ ಒಂದು ಹಾರುವ ರೆಕ್ಕೆಯಿದೆ
ಎಂದು ನಿಮಗೆ ತಿಳಿಸಿದವರು ಯಾರು?
ನಿಮ್ಮ ಒಂದು ನಗೆ
ಆ ರೆಕ್ಕೆಗಳಿಗೆ ಹಾರುವ ತಾಕತ್ತು ಕೊಡುತ್ತದೆ
ಎಂದು ಹೇಳಿದ್ದು ಯಾರು ?
ಎಷ್ಟೊಂದು ಹಕ್ಕಿಗಳು ಹಾರುತ್ತಿವೆ
ನೋಡಿ ಮುಗಿಲಿನಲ್ಲಿ
ಯಾರು ಹೇಳಿದರು ಕಾಮ್ರೇಡ್
ನಿಮ್ಮೊಡನೆ ಮಾತನಾಡುವುದು
ಮುಗಿದಿತ್ತು ಎಂದು ?
ಯಾಕಿಷ್ಟು ಅವಸರ ಮಾಡಿದಿರಿ
ಎದೆಯ ಬಾಗಿಲು ಕಂಡವರು ನೀವು
ಕಾದು ಕುಳಿತಿದ್ದವರನ್ನು ಮರೆತಿರೇಕೆ?
ಹೌದು ಕಾಮ್ರೇಡ್,
ಇಗೋ ಇಲ್ಲಿ ನೋಡಿ
ಕುಡುಗೋಲು ಸುತ್ತಿಗೆಯ ಕೆಳಗೆ
ಎಷ್ಟೊಂದು ಜೀವಗಳು
ನಿಮಗಾಗಿ ಕಾದಿದ್ದಾವೆ
ಕಣ್ಣಲ್ಲಿ ಬೆಳಕು ಹೊತ್ತು
ಪ್ರತೀ ದಿನವೂ ಕಣ್ಣೀರು ತೊಡೆದವರು ನೀವು
ಯಾಕೆ ಹೊರಟು ಬಿಟ್ಟಿರಿ ಹೀಗೆ
ಎಲ್ಲರ ಕಣ್ಣೊಳಗೆ ನೀರು ತುಂಬಿ
0