- ಮಂಗಳೂರಿನ ‘ಸೌಹಾರ್ದ ಸಮ್ಮಿಲನ’ದಲ್ಲಿ ಸಸಿಕಾಂತ್ ಮಾತುಗಳು
- ಅನ್ಯಾದ ವಿರುದ್ಧ ಬಾಯಿ ಮುಚ್ಚಿ ಸುಮ್ಮನಿರುವುದೇ ನಿಜವಾದ ದೇಶದ್ರೋಹ
ನಮ್ಮ ಮಕ್ಕಳಿಗೆ ಮುಂದಿನ ದಿನಮಾನಗಳಲ್ಲಿ ಒಳ್ಳೆಯ ಭವಿಷ್ಯದ ವಾತವರಣ ದೊರಕಬೇಕಾದರೆ ನಾವು ಭಾರತೀಯ ಬಹುತ್ವದ ಬಗ್ಗೆ ಮಾತನಾಡಬೇಕು ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ಸಾಮರಸ್ಯ ಮಂಗಳೂರು ವತಿಯಿಂದ ಭಾನುವಾರ ನಡೆದ ‘ಸೌಹಾರ್ದ ಸಮ್ಮಿಲನ’ ಉದ್ಘಾಟಿಸಿ ಮಾತನಾಡಿದ ಅವರು ನಾವು ನಮ್ಮ ಮಕ್ಕಳು , ಮೊಮ್ಮಕ್ಕಳಿಗೆ ಉತ್ತಮ ಶಿಕ್ಷಣ, ಆಸ್ತಿ ಸಂಪಾದಿಸಿಕೊಟ್ಟರೆ ಸಾಲದು, ನಾವುಗಳು ನ್ಯಾಯದ ಪರ ನಿಲ್ಲುವವರಾಗಬೇಕು , ಮತ್ತು ಅನ್ಯಾಯದ ವಿರುದ್ಧ ಹೋರಾಡಬೇಕು, ಅವರವರ ಸಾಮರ್ಥ್ಯದಿಂದ ಏನುಮಾಡಲು ಸಾಧ್ಯವೋ ಅದನ್ನ ಮಾಡುವ ಮನೋಭಾವ ಬೆಳಿಸಿಕೊಳ್ಳಬೇಕು , ಹಾಗಾಗಿ ನಮ್ಮ ಮಕ್ಕಳ ಮುಂದಿನ ಒಳ್ಳೆಯ ಭವಿಷ್ಯಕ್ಕಾದರು ನಮ್ಮ ದೇಶದ ಬಹುತ್ವದ ಬಗ್ಗೆ ಮಾತನಾಡಬೇಕು , 10 % ವಿಭಜನೆಯ ಮನಸ್ಥಿತಿ ಹೊಂದಿದ ಜನರ ನಡುವೆ ಜಗಳವಾಡುವುದನ್ನ ಬಿಟ್ಟು ಜನರಪರ ಕೆಲಸ ಮಾಡಬೇಕಿದೆ ಎಂದು ಸೆಂಥಿಲ್ ಹೇಳಿದರು.
ಮಂಗಳೂರು ಕೋಮುವಾದಿಗಳ ಕೇಂದ್ರ ಎಂಬ ಭಾವನೆ ಕೆಲವರಲ್ಲಿದೆ, ಸುಮಾರು ಎರಡೂವರೆ ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗ ಇಲ್ಲಿನ ಸ್ಥಿತಿಗತಿಗಳನ್ನು ತುಂಬಾ ಹತ್ತಿರದಿಂದ ನಾನು ಗಮನಿಸಿದ್ದೇನೆ, ನನಗೆ ಯಾವತ್ತು ಇದು ಕೋಮುವಾ್ದಿಗಳ ಕೇಂದ್ರವೆಂದೆನಿಸಿಲ್ಲ,ಇಲ್ಲಿನ ಶೇಕಡ % 10 ರಷ್ಟು ಮಂದಿ ಮಾತ್ರ ಕೋಮು ಸಾಮರಸ್ಯವನ್ನು ಹಾಳುಗೆಡವುತ್ತಿದ್ದಾರೆ, ಉಳಿದಂತೆ ಶೇ 90% ಜನರು ಕೋಮು ಸಾಮರಸ್ಯಕ್ಕೆ ಹಾತೊರೆಯುತ್ತಿದ್ದಾರೆ,ಹಾಗಾಗಿ ಮಂಗಳೂರು ಕೋಮುವಾದಿಗಳ ಕೇಂದ್ರವಲ್ಲ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು, ಜೊತೆಗೆ ಅನ್ಯಾದ ವಿರುದ್ಧ ಬಾಯಿ ಮುಚ್ಚಿ ಸುಮ್ಮನಿರುವುದೇ ನಿಜವಾದ ದೇಶದ್ರೋಹ ಎಂದು ಸಿಂಥಿಲ್ ಹೇಳಿದರು.
ಭಾರತೀಯ ವಿಭಿನ್ನತೆಯನ್ನು ನಾವು ಮರೆತಿದ್ದೇವೆ, ಅದನ್ನ ನಾವು ಮತ್ತೆ ಆಚರಣೆ ಮಾಡಬೇಕಾಗಿದೆ, ಹಾಗಾಗಿ ನೀವು ಹಿಂದು ಪರ, ಮುಸ್ಲಿಂ ಪರ ಅನ್ನುವುದನ್ನು ಬಿಡಿ, ನೀವು ಭಾರತದ ಪರವಾಗಿ ಇದ್ದೀರಾ ಎಂದು ಕೇಳುವ ಮೂಲಕ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡೋಣ ಎಂದರು.