ಬೆಂಗಳೂರು |ದಾಳಿಂಬೆ ಬೆಳೆ ಬೆಳೆಯುವ ಮೂಲಕ ಯುವ ರೈತ ಹಲವರಿಗೆ ಮಾದರಿ

ಬೆಂಗಳೂರು: ಹೊರವಲಯದ ರಾಜಾನುಕುಂಟೆ  ಸುತ್ತಮುತ್ತ ತಮ್ಮ ಭೂಮಿಯ ಜತೆಗೆ ಮತ್ತಷ್ಟು ಭೂಮಿಯನ್ನು ಗುತ್ತಿಗೆಗೆ ಪಡೆದು ಅತ್ಯಂತ ಲಾಭದಾಯಕವಾದ ದಾಳಿಂಬೆ ಬೆಳೆ ಬೆಳೆಯುವ ಮೂಲಕ ಯುವ ರೈತರು ಹಲವರಿಗೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ: ತೆಲಂಗಾಣ |ನೌಕಾಪಡೆ-ಸೇನೆ ಪರೀಕ್ಷೆಗೆ ಸಿದ್ದತೆ ಮಾಡುತ್ತಿರುವ ಯುವಕರಿಗೆ ಸ್ವಯಂ ಕ್ರೀಡಾ ತರಬೇತಿ ನೀಡುತ್ತಿರುವ ದೈಹಿಕ ಶಿಕ್ಷಕ

ರಿಯಲ್‌ ಎಸ್ಟೇಟ್‌ ದಂಧೆಯ ನಡುವೆ ಜಮೀನು ಉಳಿಸಿಕೊಳ್ಳುವುದೇ ಸವಾಲಾಗಿದೆ. ಅಧಿಕ ವೆಚ್ಚ, ಹೆಚ್ಚಿನ ಶ್ರಮ ವಹಿಸಿ ದ್ರಾಕ್ಷಿ ಬೆಳೆದರೂ ಹೆಚ್ಚಿನ ಆದಾಯ ಕಾಣದ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನೂರಾರು ರೈತರು, ಉತ್ತಮ ಆದಾಯ ತಂದುಕೊಡಬಲ್ಲ ದಾಳಿಂಬೆಯತ್ತ ಹೊರಳಿದ್ದಾರೆ. ಆ ಮೂಲಕ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆದು ಉತ್ತಮ ಲಾಭ ಗಳಿಸುತ್ತಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ನಾಗದಾಸಹಳ್ಳಿಯ ಎನ್‌.ಆರ್‌. ಚಂದ್ರ ಅಂತಹ ರೈತರಲ್ಲೊಬ್ಬರಾಗಿದ್ದಾರೆ. 32 ವಯಸ್ಸಿನ ಚಂದ್ರ ಅವರು ಬೆಂಗಳೂರು ಬ್ಲೂ ದ್ರಾಕ್ಷಿಯ ಜತೆಗೆ ವೈಜ್ಞಾನಿಕ ರೀತಿಯಲ್ಲಿ ದಾಳಿಂಬೆ ಬೆಳೆಯನ್ನೂ ಬೆಳೆದು ಯಶಸ್ಸು ಕಂಡಿದ್ದಾರೆ. ಹಲವರಿಗೆ ಉದ್ಯೋಗವನ್ನೂ ಕೊಟ್ಟಿದ್ದಾರೆ.

ಬಾಂಗ್ಲಾ, ಚೆನ್ನೈ, ಮುಂಬೈ ಮತ್ತಿತರ ಭಾಗಗಳಿಂದ ಅಲ್ಲಿನ ವ್ಯಾಪಾರಿಗಳೇ ಬಂದು ತೋಟದಲ್ಲಿಯೇ ಖರೀದಿಸಿ ಹೋಗುತ್ತಾರೆ. ಹೀಗಾಗಿ, ಚಂದ್ರು ಅವರಿಗೆ ಸಾಗಾಟದ ಸಮಸ್ಯೆಯೂ ಇಲ್ಲ. ದಾಳಿಂಬೆ ಬೆಳೆಗೆ ಮೂರು ಸಾಲು ಡ್ರಿಪ್‌ ಅಳವಡಿಸಲಾಗಿದೆ. ಒಂದು ಲೈನ್‌ ಸಸಿಗಳಿದ್ದರೆ, ಅದರ ಅಕ್ಕ ಪಕ್ಕದಲ್ಲಿಯೂ ತಲಾ ಒಂದೊಂದು ಸಾಲು ಹನಿ ನೀರಾವರಿ ಪೈಪ್‌ ಅಳವಡಿಸಲಾಗಿದೆ. ಏಕೆಂದರೆ ಗಿಡದ ಬೇರು ವರ್ಷ ಕಳೆದಂತೆ ವಿಸ್ತರಣೆಯಾಗಿರುತ್ತದೆ. ಹೀಗಾಗಿ, ವಿಸ್ತರಣೆಯಾದ ಬೇರುಗಳಿಗೂ ನೀರು ಬೇಕು. ಜತೆಗೆ, ಶೇ.80ರಷ್ಟು ರಸಗೊಬ್ಬರವನ್ನು ಹನಿ ನೀರಾವರಿ ಪೈಪ್‌ಗಳ ಮೂಲಕವೇ ನೀಡಲಾಗುತ್ತದೆ. ದಾಳಿಂಬೆಗೆ ಬೇಸಿಗೆಯಲ್ಲಿ ಕೀಟಬಾಧೆಗಳು ಹೆಚ್ಚು. ಮಳೆಗಾಲದಲ್ಲಿ ವೈರಸ್‌ ರೋಗಗಳು ಬಾಧಿಸುತ್ತವೆ.

ಇದನ್ನೂ ನೋಡಿ: ಸಾಂಸ್ಕೃತಿಕ ಲೋಕದ ಮುಖ್ಯ ಉಸಿರು ಸಮುದಾಯ ; ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *