“ಫ್ಲೈಯಿಂಗ್ ಸಿಖ್” ಖ್ಯಾತಿಯ ಮಿಲ್ಖಾಸಿಂಗ್ ನಿಧನ

ಚಂಡೀಗಢ : ಫ್ಲೈಯಿಂಗ್ ಸಿಖ್ ಎಂದೇ ಖ್ಯಾತಿ ಪಡೆದದ್ದ ಭಾರತ ಮಾಜಿ ಅಥ್ಲಿಟ್ ಮಿಲ್ಖಾ ಸಿಂಗ್ ಅವರು ಕಳೆದ ರಾತ್ರಿ ನಿಧನರಾದರು. ಕಳೆದ ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಒಳಗಾಗಿದ್ದ ಮಿಲ್ಖಾ ನಂತರ ಕೋವಿಡ್ ನಿಂದ ಗುಣಮುಖರಾಗಿದ್ದರು.

ಶುಕ್ರವಾರ ತಡರಾತ್ರಿ 11.30ರ ಸುಮಾರಿಗೆ ಮಿಲ್ಖಾ ಸಿಂಗ್ ನಿಧನರಾದರು ಎಂದು ಮಿಲ್ಖಾ ಕುಟುಂಭಿಕರು ತಿಳಿಸಿದ್ದಾರೆ. ಮಿಲ್ಖಾ ಅವರ ಪತ್ನಿ ನಿರ್ಮಲ್ ಅವರು ಐದು ದಿನದ ಹಿಂದೆಯಷ್ಟೇ ನಿಧನ ಹೊಂದಿದ್ದರು.

1960ರ ರೋಮ್​ ಒಲಿಂಪಿಕ್ಸ್​ನ 400 ಮೀಟರ್ಸ್​ ಓಟದಲ್ಲಿ ನಾಲ್ಕನೇ ಸ್ಥಾನ ಗಳಿದ್ದ ಮಿಲ್ಖಾಸಿಂಗ್​, 1956 ಮತ್ತು 1964ರ ಒಲಿಂಪಿಕ್ಸ್​ನಲ್ಲಿ ಭಾರತವನ್ನ ಪ್ರತಿನಿಧಿಸಿದ್ದರು. 1958ರ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಏಷ್ಯನ್​ ಗೇಮ್ಸ್​ನಲ್ಲಿ 4 ಬಾರಿ ಸ್ವರ್ಣ ಪದಕ ಗೆದ್ದ ಹೆಗ್ಗಳಿಕೆ ಅವರದ್ದು.

ಒಲಿಂಪಿಕ್ಸ್​ಗೆ ಅಥ್ಲೆಟಿಕ್ಸ್​ ಕಿರೀಟವಿದ್ದಂತೆ. ಎಲ್ಲ ದೇಶದ ಅಥ್ಲೀಟ್​ಗಳು ಸ್ಪರ್ಧಿಸುತ್ತಾರೆ. ಈ ವಿಭಾಗದಲ್ಲಿ ಭಾರತಕ್ಕೊಂದು ಪದಕ ಬರಲೇಬೇಕು ಎಂಬುದು ಮಿಲ್ಖಾ ಸಿಂಗ್​ರ ಕೊನೆಯ ಆಸೆ. ನಾನು ಸಾಯುವುದರೊಳಗೆ ಭಾರತದ ಅಥ್ಲೀಟ್​ ಒಲಿಂಪಿಕ್​ ಪದಕ ಗೆಲ್ಲುವುದನ್ನು ಕಣ್ತುಂಬಿಕೊಳ್ಳಬೇಕು.

ಇದೇ ನನ್ನ ಕೊನೆಯ ಆಸೆ ಎಂದು ಹಲವು ಸಂದರ್ಶನಗಳಲ್ಲಿ ಮಿಲ್ಖಾಸಿಂಗ್​ ಹೇಳಿದ್ದರು. 1960ರ ರೋಮ್​ ಒಲಿಂಪಿಕ್ಸ್​ನಲ್ಲಿ ಫೈನಲ್​ ತಲುಪಿದ್ದ ಮಿಲ್ಖಾಸಿಂಗ್​, ಕೊಂಚದರಲ್ಲಿ ಪದಕ ತಪ್ಪಿಸಿಕೊಂಡಿದ್ದರು. ಆದರೆ ಮಿಲ್ಖಾಸಿಂಗ್​ರ ಕೊನೇ ಆಸೆ ಈಡೇರಲೇ ಇಲ್ಲ. ಮಿಲ್ಖಾಸಿಂಗ್ ನಿಧನಕ್ಕೆ, ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *