ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿರುವ ವಿವಿಧ ದೇಶಗಳ ಸುಮಾರು 40 ಕ್ರೀಡಾಪಟುಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಕೊರೊನಾ ವೈರಸ್ ಇನ್ನೂ ಹರಿದಾಡುತ್ತಿದ್ದು, ಕ್ರೀಡಾಪುಟಗಳು ಮುಂಜಾಗೃತೆ ವಹಿಸಬೇಕು. ಇಲ್ಲದಿದ್ದರೆ ಈ ಸೋಂಕು ಮತ್ತೆ ವಿಶ್ವವ್ಯಾಪಿ ಹರಡುವ ಸಾಧ್ಯತೆ ಇದೆ ಎಂದು ವಿಶ‍್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಕೊರೊನಾ ವೈರಸ್ ತಡೆಯಲು ಕ್ರೀಡಾಪಟುಗಳು ಹಾಗೂ ಸ್ವಯಂ ಸೇವಕರು ಸೇರಿದಂತೆ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಸೇರಿದಂತೆ ಸಂಘಟಕರು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.