ಪಣಜಿ | ಹೋರಾಟಗಾರ ರಾಮ ಕಂಕೋಣಕರ್ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿದ ಅರವಿಂದ ಕ್ರೇಜಿವಾಲ್‌

ಪಣಜಿ: ಎಎಪಿ ನಾಯಕ ಅರವಿಂದ ಕ್ರೇಜಿವಾಲ್‌ ಅವರು ಗೋವಾದಲ್ಲಿ ಸಾಮಾಜಿಕ ಹೋರಾಟಗಾರ ರಾಮ ಕಂಕೋಣಕರ್ ಮೇಲೆ ನಡೆದಿರುವ ಹಲ್ಲೆಯನ್ನು  ಶುಕ್ರವಾರ ಖಂಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿಯು ತಲೆಮರೆಸಿಕೊಂಡಿದ್ದಾನೆ. ಕಾರಂಜಲೆಮ್ ಬಳಿ ಕಂಕೋಣಕರ್ ಅವರ ಮೇಲೆ ಆರು ಜನರು ಗುರುವಾರ ಹಲ್ಲೆ ನಡೆಸಿದ್ದರು.

ಇದನ್ನೂ ಓದಿ : ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಗೆ ಸಿಪಿಐ(ಎಂ) ಉತ್ತರ ಕನ್ನಡ ಜಿಲ್ಲಾ ಸಮಿತಿ ವಿರೋಧ

‘ಬಿಜೆಪಿ ಸರ್ಕಾರದ ಆಡಳಿತದಲ್ಲಿ ಗೋವಾದ ಕಾನೂನು ಸುವ್ಯವಸ್ಥೆಯು ಹಳ್ಳಹಿಡಿದಿದೆ. ಹಗಲಿನಲ್ಲೇ ಸಾಮಾಜಿಕ ಹೋರಾಟಗಾರ ರಾಮ ಕಂಕೋಣಕರ್ ಅವರ ಮೇಲೆ ಹಲ್ಲೆ ನಡೆದಿದೆ. ಗಲಭೆ, ಮಾದಕ ವಸ್ತು, ಮಹಿಳೆಯರ ಮೇಲೆ ಕಿರುಕುಳ ಸಾಮಾನ್ಯವಾಗಿದ್ದವು, ಇದೀಗ ಹಲ್ಲೆಗಳು ಕೂಡ ನಡೆಯುತ್ತಿವೆ’ ಎಂದು ಅರವಿಂದ ಕ್ರೇಜಿವಾಲ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ರಾಮ ಕಂಕೋಣಕರ್ ಅವರು ಗೋವಾ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ರಾಜಕೀಯ ನಾಯಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಅವರನ್ನು ಭೇಟಿಯಾಗಿದ್ದಾರೆ.

ಆಯುಧಧಾರಿಗಳ ಗುಂಪೊಂದು ರಾಮ ಕಂಕೋಣಕರ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಅವರ ಮುಖಕ್ಕೆ ಸಗಣಿಯನ್ನು ಬಳಿದು ಹೋಗಿದ್ದರು ಎಂದು ಸಾಮಾಜಿಕ ಕಾರ್ಯಕರ್ತರು ತಿಳಿಸಿದ್ದಾರೆ.

‘ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತದೆ. ಅವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ.

ಇದನ್ನೂ ನೋಡಿ : ಧರ್ಮಸ್ಥಳ ಪ್ರಕರಣ | ಅಸಹಜ ಸಾವುಗಳಿಗೂ, ಭೂ ಕಬಳಿಕೆ, ಮೈಕ್ರೋಫೈನಾನ್ಸ್‌ಗೂ ಲಿಂಕ್‌ ಇದೆಯಾ?

Donate Janashakthi Media

Leave a Reply

Your email address will not be published. Required fields are marked *