ನೂತನ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಅಧಿಕಾರ ಸ್ವೀಕಾರ

 

– ಅಶೋಕ್ ಲವಾಸ ಅವರ ಸ್ಥಾನದಲ್ಲಿ ಆಧಿಕಾರ ಸ್ವೀಕಾರ

– 2025ರವರೆಗೆ ಅಧೀಕಾರಾವಧಿ – ರಿಜೀವ್ ನೇತೃತ್ವದಲ್ಲಿ ಮುಂದಿನ ಲೋಕಸಭಾ ಚುನಾವಣೆ

 

ದೆಹಲಿ: ನೂತನ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಮಂಗಳವಾರ ಅಧಿಕಾರ ವಹಿಸಿಕೊಂಡರು. 1984ನೇ ಬ್ಯಾಚ್ ನ ಜಾರ್ಖಂಡ್ ಕೇಡರ್ ಅಧಿಕಾರಿಯಾದ ಇವರ ಅಧಿಕಾರಾವಧಿ 2025ರವರೆಗೂ ಇರಲಿದೆ

ಆಯುಕ್ತರಾಗಿದ್ದ ಅಶೋಕ್ ಲಾವಾಸ ಸ್ಥಾನದಲ್ಲಿ ರಾಜೀವ್‌ ಕುಮಾರ್‌ ಅಧಿಕಾರ ವಹಿಸಿಕೊಂಡರು. ಲಾವಾಸ ಅವರು ಏಷ್ಯನ್‌ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

1984ನೇ ಬ್ಯಾಚ್ ನ ಜಾರ್ಖಂಡ್ ಕೇಡರ್ ಅಧಿಕಾರಿಯಾದ ಇವರ ಅಧಿಕಾರಾವಧಿ 2025ರವರೆಗೂ ಇರಲಿದೆ. 2024 ಸಾಲಿನ ಲೋಕಸಭೆ ಚುನಾವಣೆ ರಾಜೀವ್‌ ಕುಮಾರ್‌ ಇವರ ಅವಧಿಯಲ್ಲೇ ನಡೆಯಲಿದೆ.

ಕೇಂದ್ರ ಹಣಕಾಸು ಕಾರ್ಯದರ್ಶಿಯಾಗಿದ್ದ ಅವರು ಈ ವರ್ಷದ ಫೆಬ್ರುವರಿಯಲ್ಲಿ ನಿವೃತ್ತರಾಗಿದ್ದರು. ನಂತರ ಅವರನ್ನು ಸಾರ್ವಜನಿಕ ಉದ್ಯಮ ಆಯ್ಕೆ ಮಂಡಳಿ (ಪಿ.ಇ.ಎಸ್.ಬಿ) ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.

ನಿಯಮಗಳ ಪ್ರಕಾರ, ಚುನಾವಣಾ ಆಯುಕ್ತರ ಅಧಿಕಾರಾವಧಿ ನೇಮಕಗೊಂಡ ದಿನದಿಂದ ಆರು ವರ್ಷ ಅಥವಾ ಅವರಿಗೆ 65 ವರ್ಷ ಆಗುವವರೆಗೆ ಯಾವುದು ಮೊದಲೊ ಅಲ್ಲಿಯವರೆಗೆ ಇರಲಿದೆ. ಕುಮಾರ್ 1960ರ ಫೆಬ್ರುವರಿಯಲ್ಲಿ ಜನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *