ನಿರಂತರ ಹತ್ತು ಗಂಟೆ ವಿದ್ಯುತ್‍ಗಾಗಿ ಒತ್ತಾಯಿಸಿ ರೈತರ ಪ್ರತಿಭಟನೆ

ದೇವದುರ್ಗ(ಜಾಲಹಳ್ಳಿ) : ರೈತರು ಈ ದೇಶದ ಬೆನ್ನೆಲುಬು ಇವರ ನಿರಂತರ ಶ್ರಮದ ಫಲವೇ ಜನ ಹೊತ್ತಿನ ಅನ್ನವನ್ನು ಕಾಣುತ್ತಿದ್ದೇವೆ. ಇಂತಹ ಶ್ರಮಿಕ ರೈತನು ಬೆಳೆಯನ್ನು ಬೆಳೆಯಲು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಮಳೆ, ಚಳಿ, ಪ್ರಕೃತಿಯ ವಿಕೋಪಗಳು ಒಂದು ಕಡೆಯಾದರೆ, ವಿದ್ಯುತ್ ಸರಬರಾಜಿನ ಕೊರತೆ ಮತ್ತೊದೆಡೆ ಎದುರಾಗಿದೆ. ಈ ವಿದ್ಯುತ್ ಸರಬರಾಜು ಹೆಚ್ಚಿಸಲು ಒತ್ತಾಯಿಸಿ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ವಿದ್ಯುತ್ ಬಳಕೆದಾರರ ಸಂಘ ಪ್ರತಿಭಟನೆ ನಡೆಸಿ ಕೆ ಇ ಬಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಕಳೆದ ಒಂದು ತಿಂಗಳಿನಿಂದ ರೈತರಿಗೆ ಸರಿಯಾಗಿ ವಿದ್ಯುತ್ ಸರಬರಾಜು ಇಲ್ಲದೆ ಬೆಳೆಗಳು ಒಣಗಿ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ವೆಚ್ಚಕ್ಕಾಗಿ ಸಾಲ ಮಾಡಿ ಬೀಜ, ರಸಗೊಬ್ಬರ ಹಾಕಿ ತೊಂದರೆಗೊಳಗಾಗಿದ್ದಾರೆ. ಸರಿಯಾಗಿ ವಿದ್ಯುತ್ ಸರಬರಾಜು ಮಾಡಬೇಕೆಂದು ಜೆಸ್ಕಾಂ ಅಧಿಕಾರಿಗಳಿಗೆ ಕೇಳಿದರೆ ಬೇಜವಾಬ್ದಾರಿಯಾಗಿ ಮಾತನಾಡುತ್ತಿದ್ದಾರೆ. ಇದರಿಂದ ರೈತರಿಗೆ ಅಸರ್ಮಕ ವಿದ್ಯುತ್ ನಿಂದ ನಷ್ಟ ಅನುಭವಿಸುವಂತಾಗಿದೆ. ಇನ್ನೂ ಮುಂದೆಯಾದರು ಜೆಸ್ಕಾಂ ಅಧಿಕಾರಿಗಳು ಜಾಲಹಳ್ಳಿ ಹೋಬಳಿಯ ಪಂಪಸೇಟ್ ರೈತರಿಗೆ ನಿರಂತರ ಹತ್ತು ತಾಸು ವಿದ್ಯುತ್ ಸರಬರಾಜು ಮಾಡಬೇಕು ಈಗಾಗಲೇ ಜಾಲಹಳ್ಳಿ ಗ್ರಾಮಕ್ಕೆ ಮಂಜೂರಿಯಾಗಿರುವ 110 ಕೆ ವಿ ವಿದ್ಯುತ್ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಬೇಕು, ಹಳೆಯ ವಿದ್ಯುತ್ ಕಂಬಗಳನ್ನು ತೆಗೆದು ಹಾಕಬೇಕು ಜೊತು ಬಿದ್ದ  ವೈರಿಗಳನ್ನು ಎಳೆದು ಬಿಗಿಗೊಳಿಸಿ ಅಪಾಯವನ್ನು ತಪ್ಪಿಸಬೇಕು ಎಂದು ರೈತ ಸಂಘದ ಕಾರ್ಯದರ್ಶಿ ಹನುಮಂತ ಮಂಡಲಗುಡ್ಡ ಕೆ ಇ ಬಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯುತ್ ಬಳಕೆದಾರರ ಸಂಘದ ಕಾರ್ಯದರ್ಶಿ ಶಬ್ಬೀರ, ಜಾಲಹಳ್ಳಿ ಖಜಾಂಚಿ ಸಂಜೀವ ರಡ್ಡಿ, ಮುಖಂಡರಾದ ಸಿದ್ದಪ್ಪ ಗುಮೆದಾರ, ಈರೆಬಸವ, ಶಿವರಾಜ್ ವಠಾರ್, ದೇವಣ್ಣ ಹನುಮಂತ ಬುಂಕಲದೊಡ್ಡಿ, JS ಹನುಮಂತ, ಮಕ್ತುಂಪಾಷ, ಹನುಮಂತ ಗುಡಸಲಿ, ಬಸವರಾಜ ಲಿಂಗದಳ್ಳಿ ಮುಂತಾದವರು ಇದ್ದರು.

Donate Janashakthi Media

Leave a Reply

Your email address will not be published. Required fields are marked *