ನವದೆಹಲಿ: ಮಣಿಪುರದ ಜನರು ಪ್ರಧಾನಿ ಭೇಟಿಗಾಗಿ ಕಾಯುತ್ತಿದ್ದಾರೆ. ಆದರೆ, ಅವರು ಜಪಾನ್ ಮತ್ತು ಚೀನಾಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ಕಾಂಗ್ರೆಸ್ ಬಲವಾಗಿ ಟೀಕಿಸಿದೆ. ಆ ರಾಜ್ಯದ ವಿಚಾರದಲ್ಲಿ ಕೈ ತೊಳೆದುಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಚೀನಾದೊಂದಿಗಿನ ಸಂಬಂಧವನ್ನು ಸಾಮಾನ್ಯಗೊಳಿಸಲು ನಾವು ಒತ್ತಾಯಿಸುತ್ತೇವೆ. ಚೀನಾ ಕೂಡ ಭಾರತ ಅಮೆರಿಕ ಸಂಬಂಧದಲ್ಲಿ ಬಿರುಕು ಮೂಡಿರುವ ಹೊತ್ತಿನಲ್ಲಿ ಅದರ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕ ಜೈ ರಾಮ್ ರಮೇಶ್ ಪ್ರತಿಕ್ರಿಯಿಸಿ, ಆಗಾಗ್ಗೆ ಹಾರಾಟ ನಡೆಸುವ ಪ್ರಧಾನಿ ಮೋದಿ ಜಪಾನ್ ಮತ್ತು ಚೀನಾಗೆ ತೆರಳಿದ್ದಾರೆ. ಅವರ ಚೀನಾ ಭೇಟಿ ಭಾರತಕ್ಕೆ ಸ್ವಲ್ಪ ಮಟ್ಟಿಗೆ ಪ್ರತಿಫಲ ನೀಡುವ ಕ್ಷಣವಾಗಿದೆ.
ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆ: ನ್ಯಾಯಮೂರ್ತಿ ಸುದರ್ಶನ ರೆಡ್ಡಿಯವರ ಪರವಾಗಿ ಮತನೀಡಲು ಎಡಪಕ್ಷಗಳ ಮನವಿ
ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದೊಂದಿಗೆ ಚೀನಾ ಜುಗಲ್ಬಂದಿ ನಡೆಸಿದ್ದು, ಇದು ನಮ್ಮ ಸೇನೆಯಿಂದಲೇ ಬಹಿರಂಗವಾಗಿದೆ. ಇದನ್ನು ಮರೆತು ಪ್ರಧಾನಿ ಅಲ್ಲಿಗೆ ಹೋಗುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ.
2020ರ ಜೂನ್ 19ರಂದು ಪ್ರಧಾನಿ ಮೋದಿ, ನಮ್ಮ ಗಡಿಯಲ್ಲಿ ಯಾರೂ ಒಳನುಗ್ಗಿಲ್ಲ ಎಂಬ ವಿಚಿತ್ರ ಹೇಳಿಕೆ ನೀಡಿದರು. ಇದು ನಮ್ಮ ಮಾತುಕತೆ ಶಕ್ತಿಯನ್ನು ಬಹಳವಾಗಿ ಘಾಸಿ ಮಾಡಿತು. 2020ರ ಏಪ್ರಿಲ್‌ಗಿಂತ ಹಿಂದಿನ ಯಥಾಸ್ಥಿತಿಯನ್ನು ಪುನಃ ಸ್ಥಾಪಿಸಲು ಸರ್ಕಾರ ವಿಫಲವಾಗಿದೆ. 2023ರ ಮೇಯಿಂದ ಆದ ಗಾಯ ಶಮನಕ್ಕೆ ಇಂದಿಗೂ ಮಣಿಪುರದ ಜನರು ಪ್ರಧಾನಿಯ ಭೇಟಿಯನ್ನು ಎದುರು ನೋಡುತ್ತಿದ್ದಾರೆ ಎಂದು ತಿಳಿಸಿದೆ.
ಆದರೆ, ಪ್ರಧಾನಿ ಮಾತ್ರ ತಮ್ಮ ಮೊಂಡುತನದಿಂದ ರಾಜ್ಯದ ಭೇಟಿಯನ್ನು ನಿರಾಕರಿಸುತ್ತಿದ್ದಾರೆ. ಅವರು ಮಣಿಪುರ ವಿಚಾರದಲ್ಲಿ ಕೈ ತೊಳೆದುಕೊಂಡಿದ್ದಾರೆ. ಇದು ಕೇಂದ್ರ ಗೃಹ ಸಚಿವರ ಪ್ರಮಾದಕ್ಕೆ ದುರಂತ ಸಾಕ್ಷಿ ಎಂದು ಟೀಕಿಸಿದೆ.
ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆದ್ಯತೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಜಪಾನ್ ಮತ್ತು ಚೀನಾ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಯನ್ನು ಮುನ್ನಡೆಸುವಲ್ಲಿ, ಸಹಕಾರವನ್ನು ನಿರ್ಮಿಸಲು ಕೊಡುಗೆ ನೀಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ನೋಡಿ: ಧರ್ಮಸ್ಥಳ | ದೂರುದಾರರಿಗೆ ರಕ್ಷಣೆ – ಸಾಕ್ಷಿ ರಕ್ಷಣಾ ಸ್ಕೀಮ್ ಏನು ಹೇಳುತ್ತದೆ?Janashakthi Media
