ಜೈಪುರ: ರಾಜಸ್ಥಾನ ವಿಧಾನಸಭೆಯ ಕಾರ್ಯದರ್ಶಿಗೆ ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಮಗೆ ಸಿಗಬೇಕಿರುವ ಮಾಜಿ ಶಾಸಕರ ಪಿಂಚಣಿಯನ್ನು ಪುನರಾರಂಭಿಸುವಂತೆ ಕೋರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೈಪುರ
ಆರೋಗ್ಯ ಸಮಸ್ಯೆಗಳ ಕಾರಣ ನೀಡಿ ಜುಲೈ 21ರಂದು ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯನ್ನು ಅಂಗೀಕರಿಸಿದ ದಿನದಿಂದ ಪಿಂಚಣಿ ಸೌಲಭ್ಯ ಅನ್ವಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ನವದೆಹಲಿ | ಮಣಿಪುರದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ ಪ್ರಧಾನಿ ಮೋದಿ
1993 ರಿಂದ 1998ರವರೆಗೆ ಕಿಶನ್ಗಢ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಧನಕರ್ ಅವರು, 2019ರ ಜುಲೈ ವರೆಗೆ ಪಿಂಚಣಿ ಪಡೆಯುತ್ತಿದ್ದರು . ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡ ಬಳಿಕ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿತ್ತು. ಜೈಪುರ
ರಾಜಸ್ಥಾನದಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದವರಿಗೆ ಪ್ರತಿ ತಿಂಗಳು ₹35 ಸಾವಿರ ಪಿಂಚಣಿ ನೀಡಲಾಗುತ್ತದೆ. ಹೆಚ್ಚಿನ ಅವಧಿ ಹಾಗೂ ವಯಸ್ಸನ್ನು ಪರಿಗಣಿಸಿ ಪಿಂಚಣಿ ಮೊತ್ತವನ್ನು ಹೆಚ್ಚಿಸಲಾಗುತ್ತದೆ.
70 ವರ್ಷ ಮೇಲ್ಪಟ್ಟವರು ಶೇ 20ರಷ್ಟು ಹೆಚ್ಚು ಪಡೆಯುತ್ತಾರೆ. ಧನಕರ್ ಅವರಿಗೆ 74 ವರ್ಷವಾಗಿದ್ದು, ಪ್ರತಿ ತಿಂಗಳು ₹42 ಸಾವಿರ ಸಿಗಲಿದೆ ಎಂದೂ ಅವರು ಹೇಳಿದ್ದಾರೆ.
ಇದನ್ನೂ ನೋಡಿ: ಧರ್ಮಸ್ಥಳದ ನಿಗೂಢಗಳು | ಚಿಕ್ಕ ಕೆಂಪಮ್ಮ ನೀಡಿದ ದೂರಿಗೂ ಸೌಜನ್ಯ ಪ್ರಕರಣಕ್ಕೂ ಲಿಂಕ್ !!Janashakthi Media
