ನಮ್ಮದು ದೇಶ
ನಮ್ಮ ದೇಶವಿದು ಭಾರತ ದೇಶ
ರೈತ ಕಾರ್ಮಿಕರು ಕಟ್ಟಿದ ಕೋಶ
ದಾಳಿ ಮಾಡದಿರಿ ಸಹಿಸುವವರೆಂದು
ಶಾಶ್ವತ ಕುರ್ಚಿ ಸಿಕ್ಕಿದೆಯೆಂದು
ನಾವು ಸಹಿಸೆವು ನಾವು ಸಹಿಸೆವು
ಕರಾಳ ಶಾಸನ ಬಂಡೆ ಹೇರುವದ
ನಾವು ಸಹಿಸೆವು ನಾವು ಸಹಿಸೆವು
ಕುಡಿವ ನೀರಲ್ಲಿ ಮೂತ್ರ ಬೆರೆಸುವುದ
ಗಾಂಧಿಯ ಕೊಂದ ಮಂದಿಯು ನೀವು
ಕೋಮು ವಿಷಬೀಜ ಬಿತ್ತಿಗೆಯವರು
ಸಾವಿರ ಸುಳ್ಳಿನ ಸರದಾರರು ನೀವು
ಗೊಬೆಲನ ತಂತ್ರ ಹೆಣೆವವರು
ಹಸಿವ ಹಿಂಗಿಸುವ ಅನ್ನದಾತ
ರೈತರಿಂದಲೇ ಉಳಿದಿದೆ ದೇಶ
ಖಬರು ಇಲ್ಲದ ಅಬರುಗೇಡಿ ನೀವು
ಮಾಡತಿರುವಿ ರೈತರ ನಾಶ
ಡೆಲ್ಲಿಯಲ್ಲಿಯೇ ನಿಮ್ಮ ಸುಖವಾಸ
ಡೆಲ್ಲಿಯಲ್ಲಿಯೇ ನಮ್ಮದು ಆಕ್ರೋಶ
ರೈತರು ಬಂದರೆ ನಿಮ್ಮೆಡೆಗೆ
ಎಚ್ಚರವಿರಲಿ ಅಡಿಗಡಿಗೆ
ಮೇಟಿ ಕೋಟ್ರಪ್ಪ
ಬಸರಕೋಡು.
ತಾ.ಹಗರಿಬೊಮ್ಮನಹಳ್ಳಿ,
ಜಿ. ಬಳ್ಳಾರಿ – 9686978399