ಗದಗ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಗದಗ ಇದರ ಅಡಿಯಲ್ಲಿ ನಡೆಯುತ್ತಿರುವ ಕೇಂದ್ರ ಸರ್ಕಾರ ಯೋಜನೆ “ಸಖಿ” ಒನ್ ಸ್ಟಾಪ್ ಸೆಂಟರ್ ಜಿಲ್ಲಾ ಆಸ್ಪತ್ರೆ (ಜಿಮ್ಸ್) ಮಲ್ಲಸಮುದ್ರ ಗದಗದಲ್ಲಿ ನವ್ಹಂಬರ್ 2019 ರಿಂದ ಕಾರ್ಯನಿರ್ವಹಿಸುತ್ತಿದೆ. “ಸಖಿ” ಇದು ಒಂದೇ ಸೂರಿನಡಿ ನೆರವು ಒದಗಿಸುತ್ತಿದ್ದು ಮಹಿಳೆ ಎದುರಿಸುತ್ತಿರುವ ದೌರ್ಜನ್ಯಗಳಾದ ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ (ಬಲತ್ಕಾರ) ಎಲ್ಲಾ ವಿಧದ, ಚಿತ್ರಹಿಂಸೆ ಇನ್ನೂ ಅನೇಕ ರೀತಿಯ ದೌರ್ಜನ್ಯಗಳಿಗೆ ಆಪ್ತಸಮಾಲೋಚನೆ, ವೈದ್ಯಕೀಯ ಚಿಕಿತ್ಸೆ, ಪೋಲೀಸ್ ನೆರವು, ಮತ್ತು ತಾತ್ಕಾಲಿಕ ಆಶ್ರಯವನ್ನು ಒದಗಿಸಲಾಗುತ್ತಿದೆ ಇದುವರೆಗೆ 64 ಪ್ರಕರಣಗಳು ದಾಖಲಾಗಿರುತ್ತವೆ.
ಕೌಟುಂಬಿಕ ದೌರ್ಜನ್ಯ, ಬಲತ್ಕಾರ , ಲೈಂಗಿಕ ಅಪರಾಧ ಆಸಿಡ್ ದಾಳಿ, ಮಹಿಳಾ ಸಾಗಾಣಿಕೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ, ಕಾಣೆಯಾಗಿರುವ ಪ್ರಕರಣ, ಅಪಹರಣ ಮತ್ತು ವರದಕ್ಷಿಣೆ ಕಿರುಕುಳ. ಇವುಗಳು ಪ್ರಮುಖವಾದವುಗಳು.
8 ಜನ ಸಿಬ್ಬಂದಿ “ಸಖಿ” ಒನ್ ಸ್ಟಾಪ್ ಸೆಂಟರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ ಆಡಳಿತಾಧಿಕಾರಿ, ಆಪ್ತಸಮಾಲೋಚಕರು, ಇಬ್ಬರು ವಕೀಲರು, ಇಬ್ಬರು ಸಮಾಜಕಾರ್ಯಕರ್ತೆಯರು, ಎರಡು ಜನ ರಕ್ಷಣಾ ಸಿಬ್ಬಂದಿ ಹೊಂದಿದ್ದು ಇದು 24*7 ಕಾರ್ಯನಿರ್ವಹಿಸುತ್ತಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರು ಇದರ ಸದುಪಯೋಗನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ. ದೂರವಾಣಿ ಸಂಖ್ಯೆ 08372-295555 ಯಲ್ಲಿ ಇದನ್ನು ಸಂಪರ್ಕಿಸಬಹುದಾಗಿದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.