ಅಮೆರಿಕಾದ ಉದಾರವಾದಿಗಳಿಗೆ ಯುರೋಪಿನ ಪ್ರಜಾಪ್ರಭುತ್ವ ಆಕರ್ಷಕವಾಗಿ ಕಂಡರೂ, ಸಾಮ್ರಾಜ್ಯಶಾಹಿಯೊಂದಿಗೆ ಯುರೋಪ್ ಸದಾ ಹೊಂದಿರುವ ತನ್ನ ಸಂಬಂಧವನ್ನು ವಸಾಹತುಶಾಹಿ ಸಾಮ್ರಾಜ್ಯಗಳ ಔಪಚಾರಿಕ ಅಂತ್ಯದ ನಂತರವೂ ಮುಂದುವರೆಸಿಕೊಂಡು ಹೋಗುತ್ತಿದೆ ಎಂಬ ಭಾವನೆ ಮೂರನೇ ಜಗತ್ತಿನವರಲ್ಲಿದೆ. ಬಂಡವಾಳಶಾಹಿಯ ಸಹಜ ಪ್ರವೃತ್ತಿಯನ್ನು ಕಾರ್ಮಿಕ ವರ್ಗದ ಅಗತ್ಯಗಳಿಗೆ ಸ್ಪಂದಿಸುವ ಒಂದು ಸರ್ಕಾರವು ತನ್ನ ಮಧ್ಯಪ್ರವೇಶದ ಮೂಲಕ ಮೀರದ ಹೊರತು, ಯುರೋಪ್ ಯಾವ ರೀತಿಯ “ಮಾದರಿ”ಯೂ ಆಗಲಾರದು. ಯುರೋಪಿನ ಇಂದಿನ ದುರ್ಗತಿ ಅಮೆರಿಕಕ್ಕಿಂತ ಭಿನ್ನವಾಗಿಲ್ಲ. ಹೀಗಿರುವಾಗ ಅಗತ್ಯವಿರುವುದು ಯುಎಸ್‌ನಲ್ಲಿ ಇರುವುದಕ್ಕಿಂತ ಭಿನ್ನವಾದ ಯಾವುದೋ ಒಂದು ಯುರೋಪಿಯನ್ “ಮಾದರಿ”ಯನ್ನು ಅನುಸರಿಸುವುದಲ್ಲ, ಬದಲು, ಅಲ್ಲಿ ಇಂತಹ ದುರ್ಗತಿ ತಂದಿರುವ ನವ-ಉದಾರವಾದಿ ಬಂಡವಾಳಶಾಹಿಯನ್ನು ಮೀರಿ ಹೋಗುವುದು.
ಅನು : ಕೆ.ಎಂ.ನಾಗರಾಜ್
ಟ್ರಂಪ್ ಆಡಳಿತವು ವಲಸಿಗರ ವಿರುದ್ಧ ಮಾತ್ರವಲ್ಲದೆ ಅಮೆರಿಕದ ನಾಗರಿಕರ ವಿರುದ್ಧವೂ ಪಾಶವೀಯ ರೀತಿಯ ದಮನಕಾರಿ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿರುವುದರಿಂದ, ಇಂದಿನ ಜಗತ್ತಿನಲ್ಲಿ ಮೇಲುಗೈ ಪಡೆಯುವ ಪೈಪೋಟಿಯಲ್ಲಿ ತೊಡಗಿರುವ ಎರಡು ಪ್ರಧಾನ ಶಕ್ತಿಗಳಾದ ಚೀನಾ ಮತ್ತು ಯುಎಸ್ ಈ ಎರಡರಿಂದಲೂ ಭಿನ್ನವಾದ “ಮೂರನೆಯ ಮಾರ್ಗ”ದ ಒಂದು ಮಾದರಿಗಾಗಿ ಯುರೋಪಿನತ್ತ ನೋಡುವ ಪ್ರವೃತ್ತಿಯು ಅಮೆರಿಕದ ಉದಾರವಾದಿ ವಲಯಗಳಲ್ಲಿ ಕಂಡುಬರುತ್ತಿದೆ. ಚೀನಾದ ಬಗ್ಗೆ ಯಾವ ಒಲವನ್ನೂ ಹೊಂದಿರದ ಅಮೇರಿಕದ ಉದಾರವಾದಿಗಳು ಚೀನಾ “ಮಾದರಿ”ಯನ್ನು ತಿರಸ್ಕರಿಸುವುದು ಆಶ್ಚರ್ಯದ ವಿಷಯವೇನಲ್ಲ. ದುರ್ಗತಿ
ಆದರೆ ಅಮೆರಿಕದೊಳಗಡೆಯೇ ಪ್ರಜಾಪ್ರಭುತ್ವವು ಕ್ಷೀಣಿಸುತ್ತಿರುವುದರಿಂದ, ಆರ್ಥಿಕ ಅಭಿವೃದ್ಧಿ, ಪರಿಣಾಮಕಾರಿ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಇವುಗಳ ಮೇಳೈಕೆಯ ಸಾಧ್ಯತೆಯನ್ನು ಯುರೋಪಿನಲ್ಲಿ ಅವರು ಕಾಣುತ್ತಾರೆ. ಈ ಸಾಧ್ಯತೆಯು ಸಾಕಾರಗೊಳ್ಳಲು ಕಡು-ಬಲಪಂಥೀಯ ಶಕ್ತಿಗಳನ್ನು ದೂರವಿಡುವುದರ ಜೊತೆಗೆ ಯುರೋಪ್ ತನ್ನ ಅರ್ಥವ್ಯವಸ್ಥೆಯನ್ನು ಒಂದು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಎಂದು ಅವರು ಬಗೆಯುತ್ತಾರೆ.
ಇದನ್ನೂ ಓದಿ: ಪಶು-ಪಕ್ಷಿ ಲೋಕದ ವಿಸ್ಮಯಗಳು: ಸಂಚಿಕೆ – 6
ಯುರೋಪಿಯನ್ ಪ್ರಜಾಪ್ರಭುತ್ವವು ಅಮೇರಿಕದ ಉದಾರವಾದಿಗಳಿಗೆ ಆಕರ್ಷಕವಾಗಿ ಕಂಡರೂ ಸಹ, ಸಾಮ್ರಾಜ್ಯಶಾಹಿಯೊಂದಿಗೆ ಯುರೋಪ್ ಸದಾ ಹೊಂದಿರುವ ತನ್ನ ಸಂಬಂಧವನ್ನು ವಸಾಹತುಶಾಹಿ ಸಾಮ್ರಾಜ್ಯಗಳ ಔಪಚಾರಿಕ ಅಂತ್ಯದ ನಂತರವೂ ಮುಂದುವರೆಸಿಕೊಂಡು ಹೋಗುತ್ತಿದೆ ಎಂಬ ಭಾವನೆ ಮೂರನೇ ಜಗತ್ತಿನವರಲ್ಲಿದೆ. ಇರಾನ್‌ನಲ್ಲಿ ಮೊಸದೆಗ್ ಅವರನ್ನು ಪದಚ್ಯತಿಗೊಳಿಸಿದುದರಿಂದ ಹಿಡಿದು, ಕಾಂಗೋದ ಪ್ಯಾಟ್ರಿಸ್ ಲುಮುಂಬಾ, ಇರಾಕ್‌ನ ಸದ್ದಾಂ ಹುಸೇನ್‌ರವರೆಗೆ, ತಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಸ್ವ-ನಿಯಂತ್ರಣ ಹೊಂದಬಯಸಿದ “ಮೊಂಡುತನ” ತೋರಿದ ಮೂರನೇ ಜಗತ್ತಿನ ಸರ್ಕಾರಗಳ ವಿರುದ್ಧ ಯುಎಸ್ ಸಾಮ್ರಾಜ್ಯಶಾಹಿ ನಡೆಸಿದ ಬಹುತೇಕ ಸಂಚುಗಳಲ್ಲಿ ಬ್ರಿಟನ್ ಒಬ್ಬ ಸಕ್ರಿಯ ಸಹಚರನಾಗಿದೆ. ದುರ್ಗತಿ
ಇನ್ನು ಫ್ರಾನ್ಸಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಫ್ರೆಂಚ್ ಭಾಷಿಕ ಆಫ್ರಿಕಾದಲ್ಲಿ ವಸಾಹತುಶಾಹಿಯ ಅಂತ್ಯ ಇನ್ನೂ ಪೂರ್ಣಗೊಂಡಿಲ್ಲ. ಔಪಚಾರಿಕವಾಗಿ ಸ್ವತಂತ್ರವಾದ ಫ್ರೆಂಚ್ ವಸಾಹತುಗಳಲ್ಲಿ ಫ್ರೆಂಚ್ ಸೇನೆಯು ಈಗಲೂ ನೆಲೆಸಿದೆ. ಬುರ್ಕಿನಾ ಫಾಸೊದ ಥಾಮಸ್ ಶಂಕರ ಫ್ರೆಂಚ್ ಪಡೆಗಳನ್ನು ಹೊರಹಾಕುವ ಪ್ರಯತ್ನಮಾಡಿದಾಗ ಅವರನ್ನು ಪದಚ್ಯುತಗೊಳಿಸಿ ಒಂದು ದಂಗೆಯ ಮೂಲಕ ಅವರನ್ನು ಹತ್ಯೆ ಮಾಡಲಾಯಿತು. ಈ ದಂಗೆಯನ್ನು ಫ್ರಾನ್ಸ್ ಬಲವಾಗಿ ಬೆಂಬಲಿಸಿತ್ತು ಎಂದು ಶಂಕಿಸಲಾಗಿದೆ. ಬುರ್ಕಿನಾ ಫಾಸೊ ಸೇರಿದಂತೆ ಕೆಲವು ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ ನೆಲೆಸಿರುವ ಫ್ರೆಂಚ್ ಪಡೆಗಳನ್ನು ಹೊರಹಾಕುವ ಹೊಸ ಪ್ರಯತ್ನಗಳು ಈಗ ಪುನರಾರಂಭಗೊಂಡಿವೆ. ದುರ್ಗತಿ
ಯುರೋಪಿಯನ್ ಪ್ರಜಾಪ್ರಭುತ್ವವು ಅಮೇರಿಕದ ಉದಾರವಾದಿಗಳಿಗೆ ಆಕರ್ಷಕವಾಗಿ ಕಂಡರೂ ಸಹ, ಸಾಮ್ರಾಜ್ಯಶಾಹಿಯೊಂದಿಗೆ ಯುರೋಪ್ ಸದಾ ಹೊಂದಿರುವ ತನ್ನ ಸಂಬಂಧವನ್ನು ವಸಾಹತುಶಾಹಿ ಸಾಮ್ರಾಜ್ಯಗಳ ಔಪಚಾರಿಕ ಅಂತ್ಯದ ನಂತರವೂ ಮುಂದುವರೆಸಿಕೊಂಡು ಹೋಗುತ್ತಿದೆ ಎಂಬ ಭಾವನೆ ಮೂರನೇ ಜಗತ್ತಿನವರಲ್ಲಿದೆ.
ಈ ‘ಮಾದರಿ’ಯ ಪೂರ್ವಚರಿತ್ರೆ
ಗಾಜಾದ ನರಮೇಧಕ್ಕೆ ಯುರೋಪ್ ನೀಡಿದ ಬೆಂಬಲವು ಈ ಮಾದರಿಯ ಭಾಗವೇ. ಅದಕ್ಕಿಂತಲೂ ಮಿಗಿಲಾಗಿ, ಯುರೋಪಿನ ಹಲವಾರು ಉದಾರವಾದಿಗಳು ತಮ್ಮ ಸರ್ಕಾರಗಳು ಈ ನರಮೇಧಕ್ಕೆ ನೀಡಿದ ಬೆಂಬಲವನ್ನು ತಮ್ಮ ಮೌನದ ಮೂಲಕ ಸಮ್ಮತಿಸಿದ್ದಾರೆ. ಈ ಅಂಶವನ್ನು ಒಂದು ಉದಾಹರಣೆಯ ಮೂಲಕ ಸ್ಪಷ್ಟಪಡಿಸುವುದಾದರೆ, ಇತ್ತೀಚೆಗೆ ನಡೆದ ಬರ್ಲಿನ್ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರ ಮಂಡಳಿಯ ಅಧ್ಯಕ್ಷರಾಗಿದ್ದ ಜರ್ಮನಿಯ ಚಲನಚಿತ್ರ ನಿರ್ಮಾಪಕ ವಿಮ್ ವೆಂಡರ್ಸ್ ಅವರನ್ನು ಈ ನರಮೇಧದ ಬಗ್ಗೆ ಪ್ರಶ್ನಿಸಿದಾಗ, ರಾಜಕೀಯವನ್ನು ಚಲನಚಿತ್ರಗಳಿಂದ ದೂರವಿಡಬೇಕು ಎಂದು ಅವರು ಉತ್ತರಿಸಿದರು.
ಇರಲಿ, ಇದೆಲ್ಲವನ್ನೂ ನಾವು ಮರೆತುಬಿಡೋಣ. ಉಕ್ರೇನ್ ಯುದ್ಧವನ್ನು ತಡೆಯಬಹುದಾಗಿದ್ದ ಮಿನ್ಸ್ಕ್ ಒಪ್ಪಂದಗಳು ಮುರಿದುಬೀಳುವಂತೆ ಯುರೋಪ್ ತನ್ನ ಕುತಂತ್ರಗಳ ಮೂಲಕ ನೋಡಿಕೊಂಡಿತು ಎಂಬುದನ್ನು ಮತ್ತು ಈ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸುವ ಯಾವುದೇ ಪ್ರಸ್ತಾಪವನ್ನು ಮುಚ್ಚುಮರೆಯಿಲ್ಲದೆ ವಿರೋಧಿಸುವ ನಿಲುವನ್ನು ಅದು ಹೊಂದಿದೆ ಎಂಬ ಅಂಶವನ್ನೂ ಸಹ ನಾವು ಮರೆತುಬಿಡೋಣ. ಉಕ್ರೇನಿನ ಅಧ್ಯಕ್ಷರಾಗಿದ್ದ ವಿಕ್ಟರ್ ಯಾನುಕೋವಿಚ್ ಅವರನ್ನು ಉದಾರವಾದಿ ಒಬಾಮಾ ಆಡಳಿತದ ಪ್ರೋತ್ಸಾಹ ಮತ್ತು ಸಹಾಯದೊಂದಿಗೆ ಪದಚ್ಯುತಗೊಳಿಸಲಾಗಿತ್ತು ಎಂಬುದನ್ನು ಯುಎಸ್ ಮೂಲದ ಕ್ಯಾಟೊ ಇನ್ಸ್ಟಿಟ್ಯೂಟ್ ಎಂಬ ಒಂದು ಸಂಸ್ಥೆಯೂ ಒಪ್ಪಿದೆ; ಈ ವಿಷಯದಲ್ಲಿ ಮತ್ತು ನ್ಯಾಟೋದ ವ್ಯಾಪ್ತಿಯನ್ನು ರಷ್ಯಾದ ಗಡಿಯವರೆಗೆ ವಿಸ್ತರಿಸುವ ಪ್ರಯತ್ನದಲ್ಲಿ; ಈ ಎರಡರಲ್ಲೂ ಯೂರೋಪ್ ಶಾಮೀಲಾಗಿತ್ತು ಎಂಬುದನ್ನೂ ನಾವು ಮರೆತುಬಿಡೋಣ. ಯುರೋಪ್, ‘ಮೂರನೇ ಹಾದಿ’ಯನ್ನು ಒದಗಿಸುವ ಸಾಧ್ಯತೆಯ ಬಗ್ಗೆ ಒಂದು ಸೀಮಿತ ವಾದವನ್ನು ಮಾತ್ರ ನಾವೀಗ ಪರಿಶೀಲಿಸೋಣ. ದುರ್ಗತಿ
ಆರ್ಥಿಕ ಕಾರಣಗಳನ್ನು ಗುರುತಿಸುವುದಿಲ್ಲ
ಈ ವಾದವು ಸಾಮಾನ್ಯವಾಗಿ ಊಹಿಸಿಕೊಳ್ಳುವ ಅಂಶವೇನೆಂದರೆ, ಟ್ರಂಪ್ ಅವರ ಅತಿರೇಕದ ವರ್ತನೆಗಳಿಗೆ ಅವರ ವೈಯಕ್ತಿಕ ವಿಫಲತೆಗಳೇ ಕಾರಣವಾಗಿವೆ ಎಂಬುದು. ಆದರೆ, ಈ ವಾದವು, ಅಂತಹ ಒಬ್ಬ ವ್ಯಕ್ತಿಯು ಅಮೆರಿಕದಲ್ಲಿ ಅಧಿಕಾರಕ್ಕೆ ಬಂದದ್ದಾದರೂ ಹೇಗೆ ಎಂಬ ಪ್ರಶ್ನೆಯನ್ನು ಮತ್ತು ಯುಎಸ್ ನಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದ ರೀತಿಯ ಪರಿಸ್ಥಿತಿಯಲ್ಲೇ ಯುರೋಪಿನಲ್ಲಿಯೂ ಸಹ, ಉದಾರವಾದಿ ಮಧ್ಯಮ ಪಂಥದ ನೆಲೆ ಏಕೆ ಕುಸಿಯುತ್ತಿದೆ ಎಂಬ ಪ್ರಶ್ನೆಯನ್ನು ಕೇಳುವುದೇ ಇಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ವಾದವು ಟ್ರಂಪ್ ಅವರ ಆಯ್ಕೆಯ ತಳದಲ್ಲಿರುವ ಆರ್ಥಿಕ ಕಾರಣಗಳು ಅಥವಾ ಯುರೋಪಿನ ರಾಜಕೀಯ ನಿರೀಕ್ಷೆಗಳ ತಳದಲ್ಲಿರುವ ಆರ್ಥಿಕ ಕಾರಣಗಳು ಬಂಡವಾಳಶಾಹಿಯ ಪ್ರಸ್ತುತ ಪರಿಸ್ಥಿತಿಯೊಂದಿಗೆ ಹೊಂದಿರುವ ಸಂಬಂಧವನ್ನು ಗುರುತಿಸುವುದಿಲ್ಲ.
ಸಮಕಾಲೀನ ಬಂಡವಾಳಶಾಹಿಯ ಹೆಚ್ಚು ಗಮನಸೆಳೆಯುವ ಒಂದು ಲಕ್ಷಣವೆಂದರೆ ಯುಎಸ್ ಮತ್ತು ಯುರೋಪ್ ಈ ಎರಡೂ ಕಡೆಗಳಲ್ಲಿ ರಾಷ್ಟ್ರೀಯ ವರಮಾನದಲ್ಲಿ ಕಾರ್ಮಿಕ ವರ್ಗದ ಪಾಲು ಅಪಾರವಾಗಿ ಕುಸಿದಿರುವುದು. ವಾಸ್ತವವಾಗಿ ಈ ಕುಸಿತವು ಎಷ್ಟರ ಮಟ್ಟಿಗೆ ಇದೆ ಎಂದರೆ, ಅಮೇರಿಕದ ಒಬ್ಬ ಪುರುಷ ಕೆಲಸಗಾರನ 2011ರಲ್ಲಿದ್ದ ಸರಾಸರಿ ನಿಜ ಕೂಲಿಯು, ಅಂಕೆ-ಸAಖ್ಯೆಯಲ್ಲಿಯೂ ಸಹ, 1968ರಲ್ಲಿ ಇದ್ದುದಕ್ಕಿಂತಲೂ ಕೆಳಗಿದೆ ಎಂದು ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ಲಿಟ್ಜ್ ಹೇಳುತ್ತಾರೆ. ಯುರೋಪಿನಲ್ಲಿಯೂ ಸಹ, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಪ್ರಕಾರ, 2022-23ರಲ್ಲಿ ತೀವ್ರವಾಗಿ ಕುಸಿದಿದ್ದ ನಿಜ ಕೂಲಿಯು 2021ರ ನಾಲ್ಕನೇ ತ್ರೈಮಾಸಿಕದ ವೇಳೆಯಲ್ಲಿದ್ದ ಮಟ್ಟವನ್ನು 2024ರ ನಾಲ್ಕನೇ ತ್ರೈಮಾಸಿಕದಲ್ಲೂ ತಲುಪಿರಲಿಲ್ಲ. ದುರ್ಗತಿ
ಮತ್ತು, ಉಕ್ರೇನ್ ಯುದ್ಧದಿಂದ ಜರ್ಮನಿಯಲ್ಲಿ ಉದ್ಭವಿಸಿದ ಇಂಧನ ಬಿಕ್ಕಟ್ಟು ಯೂರೋಪಿನ ಕಾರ್ಮಿಕ ವರ್ಗದ ಸಂಕಷ್ಟಗಳನ್ನು ಹೆಚ್ಚಿಸಿದೆ. ಕೂಲಿಯ ನಿರ್ದಿಷ್ಟ ಏರಿಳಿತಗಳ ಹೊರತಾಗಿಯೂ, ದಶಕಗಳ ದೀರ್ಘ ಕಾಲದ ನವ-ಉದಾರವಾದಿ ಜಾಗತೀಕರಣದ ವಿದ್ಯಮಾನದಿಂದ ಯುರೋಪಿನ ಕಾರ್ಮಿಕರಿಗೆ (ಅಮೇರಿಕದ ಕಾರ್ಮಿಕರಿಗೂ ಆದಂತೆಯೇ) ಒಂದು ಸಾರ್ವತ್ರಿಕ ವೇತನ ಆಘಾತವಾಗಿದೆ. ಜಾಗತೀಕರಣದಡಿಯಲ್ಲಿ ಬಂಡವಾಳದ ಹರಿದಾಟವು ಈ ಕಾರ್ಮಿಕರನ್ನು ಮತ್ತು ಕೂಲಿಯ ಮೇಲೆ ಅವರ ಹಕ್ಕುಗಳನ್ನು ಮೂರನೇ ಜಗತ್ತಿನ ಬೃಹತ್ ಕಾರ್ಮಿಕ ಮೀಸಲುಗಳ (ಅಂದರೆ ನಿರುದ್ಯೋಗದ-ಅನು) ಹಾನಿಕಾರಕ ಪರಿಣಾಮಗಳಿಗೆ ಒಳಪಡಿಸಿದೆ. ಆದ್ದರಿಂದ ನವ-ಉದಾರವಾದಿ ಆರ್ಥಿಕ ಆಳ್ವಿಕೆಯ ಪ್ರವರ್ತಕರಾಗಿದ್ದ ಉದಾರವಾದಿ ರಾಜಕೀಯ ಆಳ್ವಿಕೆಗಳ ವಿರುದ್ಧ ಕಂಡುಬರುತ್ತಿರುವ ಮುಂದುವರಿದ ಬಂಡವಾಳಶಾಹಿ ದೇಶಗಳ ಕಾರ್ಮಿಕರ ಕೋಪವು ಗಮನಾರ್ಹವೂ ಮತ್ತು ಅರ್ಥವಾಗುವಂತಹದ್ದೂ ಆಗಿದೆ. ಈ ಎಲ್ಲಾ ದೇಶಗಳಲ್ಲೂ, ಕಡು-ಬಲಪಂಥ ಮತ್ತು ಎಡಪಂಥದ ನಡುವಿನ “ಮಧ್ಯಮ” ಪಂಥ ಎಂದು ಕರೆಯಲಾಗುವ ಉದಾರವಾದಿ ರಾಜಕೀಯ ಶಕ್ತಿಗಳ ಬಲ ಕುಂದಿರುವುದು ಈ ಕೋಪದ ನೇರ ಪರಿಣಾಮವೇ. ದುರ್ಗತಿ
ಈ ವಾದವು ಟ್ರಂಪ್ ಅವರ ಆಯ್ಕೆಯ ತಳದಲ್ಲಿರುವ ಆರ್ಥಿಕ ಕಾರಣಗಳು ಅಥವಾ ಯುರೋಪಿನ ರಾಜಕೀಯ ನಿರೀಕ್ಷೆಗಳ ತಳದಲ್ಲಿರುವ ಆರ್ಥಿಕ ಕಾರಣಗಳು ಬಂಡವಾಳಶಾಹಿಯ ಪ್ರಸ್ತುತ ಪರಿಸ್ಥಿತಿಯೊಂದಿಗೆ ಹೊಂದಿರುವ ಸಂಬಂಧವನ್ನು ಗುರುತಿಸುವುದಿಲ್ಲ.
ಕಾರ್ಮಿಕರ ಬೆಂಬಲದ ಅಗತ್ಯ
ವಾಸ್ತವವಾಗಿ, ಈ “ಮಧ್ಯಮ” ರಾಜಕೀಯ ಪಕ್ಷಗಳ ನಾಯಕಮಣಿಗಳು, ಅದು ಅಮೆರಿಕದ ಹಿಲರಿ ಕ್ಲಿಂಟನ್ ಇರಲಿ, ಬ್ರಿಟನ್ನಿನ ನ್ಯೂ ಲೇಬರ್ ಇರಲಿ, ಫ್ರಾನ್ಸ್ನ ಮ್ಯಾಕ್ರನ್ ಇರಲಿ, ಅಥವಾ ಜರ್ಮನಿಯ ಫ್ರೆಡ್ರಿಕ್ ಮೆರ್ಜ್ ಇರಲಿ, ಇವರೆಲ್ಲರಿಗೂ ತಮ್ಮ ತಮ್ಮ ದೇಶಗಳ ಕಾರ್ಮಿಕರ ದುಃಸ್ಥಿತಿಯ ಬಗ್ಗೆ ಸ್ವಲ್ಪವೂ ಅರಿವಿರಲಿಲ್ಲ. ಆದ್ದರಿಂದ ಅವರ ಬಗ್ಗೆ ಸಹಾನುಭೂತಿ ಇರಲಿಲ್ಲ; ದೈತ್ಯ ಹಣಕಾಸು ಕಂಪನಿ ಬ್ಲ್ಯಾಕ್‌ರಾಕ್‌ನ ನೌಕರನಾಗಿದ್ದಂತಹ ಮೆರ್ಜ್ರಂತೆ ಅವರಲ್ಲಿ ಹಲವರು ದೊಡ್ಡ ಕಂಪನಿಗಳ ನೌಕರರರಾಗಿದ್ದವರು. ಆದ್ದರಿಂದ, ಕಾರ್ಮಿಕರು ಕಡು-ಬಲದತ್ತ ಅಥವಾ ಎಡದತ್ತ ತಿರುಗಿದ್ದಾರೆ. ಬ್ರಿಟನ್‌ನಲ್ಲಿ ಜೆರೆಮಿ ಕಾರ್ಬಿನ್ ಅಥವಾ ಅಮೆರಿಕದಲ್ಲಿ ಬರ್ನಿ ಸ್ಯಾಂಡರ್ಸ್ ಅವರಂಥಹ ಎಡಪಂಥೀಯರು ಈ “ಮಧ್ಯಮ” ಪಂಥೀಯ ರಾಜಕೀಯ ಪಕ್ಷಗಳ ಕುತಂತ್ರಗಳಿಂದಸೋಲುಂಡಾಗ, ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಕಡು-ಬಲಪಂಥೀಯ ಪಕ್ಷಗಳತ್ತ ಸಾಗುತ್ತಾರೆ. ಫ್ರಾನ್ಸಿನಲ್ಲಿ ಮಾತ್ರವೇ ಒಟ್ಟಾಗಿ ಸೇರಿಕೊಂಡ ಎಡಪಂಥೀಯರು ಅಂತಹ ಕುತಂತ್ರಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಮರೀನ್ ಲೆ ಪೆನ್ ನೇತೃತ್ವದ ಕಡು ಬಲಪಂಥವನ್ನು ಎರಡನೇ ಸ್ಥಾನಕ್ಕೆ ತಳ್ಳುವ ಮೂಲಕ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.ದುರ್ಗತಿ
ಬಲಪಂಥೀಯ ದಾಳಿಗೆ ಒಳಗಾಗಿರುವ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವುದಕ್ಕಾಗಿ ಕಾರ್ಮಿಕರ ಬೆಂಬಲವನ್ನು ಪಡೆಯುವುದು ಅಗತ್ಯವಾಗುತ್ತದೆ ಮತ್ತು ಅದಕ್ಕಾಗಿ ದೇಶದ ವರಮಾನದಲ್ಲಿ ಕಾರ್ಮಿಕರ ಪಾಲಿನ ತೀವ್ರ ಕುಸಿತವನ್ನು ತಿರುಗು-ಮುರುಗು ಮಾಡುವುದು ಮತ್ತು ಪ್ರಭುತ್ವದ ಸಕ್ರಿಯ ವಿತ್ತೀಯ ಹಸ್ತಕ್ಷೇಪ ಅಗತ್ಯವಾಗುತ್ತದೆ. ಆದರೆ, ಬಂಡವಾಳದ ಹರಿದಾಟದ ಮೇಲೆ ನಿಯಂತ್ರಣಗಳಿಲ್ಲದ ಜಗತ್ತಿನಲ್ಲಿ ಪ್ರಭುತ್ವದ ವಿತ್ತೀಯ ಹಸ್ತಕ್ಷೇಪವು ಅಸಾಧ್ಯವಾಗುತ್ತದೆ. ಏಕೆಂದರೆ ಅಂತಹ ಯಾವುದೇ ಹಸ್ತಕ್ಷೇಪವನ್ನು ಪ್ರಯತ್ನಿಸುವ ದೇಶದಿಂದ ಬಂಡವಾಳವು ಬೇರೆಡೆಗೆ ಹಾರಿ ಹೋಗುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ರಾಷ್ಟ್ರೀಯ ವರಮಾನದಲ್ಲಿ ಕಾರ್ಮಿಕರ ಪಾಲಿನ ತೀವ್ರ ಕುಸಿತವನ್ನು ತಿರುಗು-ಮುರುಗು ಮಾಡುವುದಕ್ಕಾಗಿ ನವ-ಉದಾರವಾದಿ ಆಳ್ವಿಕೆಯಿಂದ ಹಿಂದೆ ಸರಿಯುವುದು ಅಗತ್ಯವಾಗುತ್ತದೆ. ಈ ಕಾರ್ಯವನ್ನು ಎಡಪಂಥೀಯರು ಮಾತ್ರವೇ ಸಾಧಿಸಬಹುದು. ಕಾರ್ಮಿಕರು ಪಡೆಯುವ ಪಾಲಿನಲ್ಲಿ ಸುಧಾರಣೆ ಮಾಡುವ ಭರವಸೆಯನ್ನು ಕಡು-ಬಲಪಂಥೀಯರು ನೀಡುತ್ತಾರಾದರೂ, ಅವರು ಅನಿವಾರ್ಯವಾಗಿಯೇ ಈ ಭರವಸೆಗೆ ದ್ರೋಹವನ್ನು ಬಗೆಯುತ್ತಾರೆ. ಏಕೆಂದರೆ, ಕಡು-ಬಲಪಂಥೀಯರಿಗೆ ಚುನಾವಣೆಗಳನ್ನು ಗೆಲ್ಲುವುದಕ್ಕಾಗಿ ತನ್ನ ಪಾಲಿನ ವರಮಾನದಲ್ಲಿ ಕುಸಿತವನ್ನು ಸಹಿಸದ ಏಕಸ್ವಾಮ್ಯ ಬಂಡವಾಳದ ಬೆಂಬಲ ಅನಿವಾರ್ಯವಾಗಿರುತ್ತದೆ. ದುರ್ಗತಿ
ರಾಷ್ಟ್ರೀಯ ವರಮಾನದಲ್ಲಿ ಕಾರ್ಮಿಕರ ಪಾಲಿನ ತೀವ್ರ ಕುಸಿತವನ್ನು ತಿರುಗು-ಮುರುಗು ಮಾಡುವುದಕ್ಕಾಗಿ ನವ-ಉದಾರವಾದಿ ಆಳ್ವಿಕೆಯಿಂದ ಹಿಂದೆ ಸರಿಯುವುದು ಅಗತ್ಯವಾಗುತ್ತದೆ. ಈ ಕಾರ್ಯವನ್ನು ಎಡಪಂಥೀಯರು ಮಾತ್ರವೇ ಸಾಧಿಸಬಹುದು.
ಉದಾರವಾದಿಗಳಲ್ಲಿರುವ ಸಮಸ್ಯೆ
‘ಮೂರನೇ ಹಾದಿ’ಯ ಒಂದು ಮಾದರಿಯನ್ನು ಒದಗಿಸಬಹುದಾದ ಯುರೋಪಿನ ಮೇಲೆ ತಮ್ಮ ಭರವಸೆಯನ್ನು ಇಡುತ್ತಿರುವ ಮತ್ತು ಅದರ ಅರ್ಥವ್ಯವಸ್ಥೆಯು ಒಂದು ರೂಪಾಂತರಕ್ಕೆ ಒಳಗಾಗಬೇಕೆಂದು ಬಯಸುವ ಅಮೇರಿಕದ ಉದಾರವಾದಿ ವಲಯಗಳು ಒಂದು ಮೂಲಭೂತ ಅಂಶವನ್ನು ಮುಟ್ಟುವುದಿಲ್ಲ್ಲ. ಅಂದರೆ, ಯುದ್ಧಾನಂತರದಲ್ಲಿ ಕೀನ್ಸ್ ಪ್ರತಿಪಾದಿಸಿದ ಪ್ರಭುತ್ವದ ಮಧ್ಯಪ್ರವೇಶದ ನಂತರ ನವ-ಉದಾರವಾದವು ಮತ್ತೆ ಚಾಲ್ತಿಗೆ ತಂದ ಬಂಡವಾಳಶಾಹಿಯ ಸಹಜ ಸ್ವಭಾವದಲ್ಲಿ ವರಮಾನವನ್ನು ಅಸಮಗೊಳಿಸುವ ಪ್ರವೃತ್ತಿ ಅಡಕಗೊಂಡಿದೆ. ಇದು ಕಾರ್ಮಿಕ ವರ್ಗಕ್ಕೆ ಸಂಕಷ್ಟವನ್ನು ತಂದಿದೆ ಮತ್ತು ಅದರ ಒಂದು ಪರಿಣಾಮವಾಗಿ ಕಡು-ಬಲಪಂಥ ಉದಯವಾಗಿದೆ. ಬಂಡವಾಳಶಾಹಿಯ ಈ ಸಹಜ ಪ್ರವೃತ್ತಿಯನ್ನು ಕಾರ್ಮಿಕ ವರ್ಗದ ಅಗತ್ಯಗಳಿಗೆ ಸ್ಪಂದಿಸುವ ಒಂದು ಸರ್ಕಾರವು ತನ್ನ ಮಧ್ಯಪ್ರವೇಶದ ಮೂಲಕ ಮೀರದ ಹೊರತು, ಯುರೋಪ್ ಯಾವ ರೀತಿಯ “ಮಾದರಿ”ಯೂ ಆಗಲಾರದು. ಅಂದರೆ, ಬಂಡವಾಳದ ಮೇಲೆ ನಿಯಂತ್ರಣಗಳನ್ನು ಹೇರುವ ಒಂದು ಎಡಪಂಥೀಯ ಸರ್ಕಾರ ಮಾತ್ರವೇ ಅರ್ಥವ್ಯವಸ್ಥೆಯನ್ನು ನವ-ಉದಾರವಾದದ ಹಿಡಿತದಿಂದ ಹೊರತರಬಲ್ಲದು. ಅಮೆರಿಕದ ಈ ಉದಾರವಾದಿ ವಲಯಗಳು ಜಾಗತೀಕರಣದ ಪ್ರಸ್ತುತ ಮಟ್ಟದಿಂದ ಸ್ವಲ್ಪ ಹಿಮ್ಮೆಟ್ಟುವ ಅಗತ್ಯವನ್ನು ಕಾಣಬಹುದು. ಆದರೆ ಬಂಡವಾಳದ ಮೇಲಿನ ನಿಯಂತ್ರಣಗಳು ನವ-ಉದಾರವಾದದ ಮೂಲಸತ್ವವನ್ನೇ ಅಲುಗಾಡಿಸುತ್ತವೆ.
ನವ-ಉದಾರವಾದದ ಒಂದು ಪರಿಣಾಮವಾಗಿ ಕಡು-ಬಲಪಂಥ ಉದಯವಾಗಿದೆ. ಬಂಡವಾಳಶಾಹಿಯ ಈ ಸಹಜ ಪ್ರವೃತ್ತಿಯನ್ನು ಕಾರ್ಮಿಕ ವರ್ಗದ ಅಗತ್ಯಗಳಿಗೆ ಸ್ಪಂದಿಸುವ ಒಂದು ಸರ್ಕಾರವು ತನ್ನ ಮಧ್ಯಪ್ರವೇಶದ ಮೂಲಕ ಮೀರದ ಹೊರತು, ಯುರೋಪ್ ಯಾವ ರೀತಿಯ “ಮಾದರಿ”ಯೂ ಆಗಲಾರದು.
ಯುರೋಪಿಯನ್ ಅರ್ಥವ್ಯವಸ್ಥೆಗಳು ಮಾತ್ರವಲ್ಲ, ಇಡೀ ವಿಶ್ವ ಅರ್ಥವ್ಯವಸ್ಥೆಯೇ ಇಂದು ತಲುಪಿರುವ ಒಂದು ನಿರ್ಣಾಯಕ ಕ್ಷಣದಲ್ಲಿ, ಪ್ರಜಾಪ್ರಭುತ್ವವನ್ನು ಸಂರಕ್ಷಿಸುವುದಕ್ಕಾಗಿ ಸರ್ಕಾರಗಳು ಕಾರ್ಮಿಕ ವರ್ಗದ ಬೆಂಬಲದಿಂದ (ಅಥವಾ, ಮೂರನೇ ಜಗತ್ತಿನ ದೇಶಗಳ ಸಂದರ್ಭದಲ್ಲಿ, ಕಾರ್ಮಿಕರು, ರೈತರು, ಗ್ರಾಮೀಣ ಕಾರ್ಮಿಕರು ಮತ್ತು ಸಣ್ಣ ಉತ್ಪಾದಕರನ್ನು ಒಳಗೊಂಡ ಇಡೀ ದುಡಿಯುವ ಜನರ ಬೆಂಬಲದಿಂದ) ಅಧಿಕಾರಕ್ಕೆ ಬರಬೇಕಾಗುತ್ತದೆ. ಯುರೋಪಿನ ಸರ್ಕಾರಗಳ ಕ್ರಮಗಳಿಗೆ ಎದುರಾಗುತ್ತಿರುವ ಮಿತಿಗಳು ಉಂಟಾಗುತ್ತಿರುವುದು ಯುರೋಪಿನ ಸಮಗ್ರೀಕರಣದ ಸ್ವರೂಪ ಮತ್ತು ಮಟ್ಟದಿಂದಲ್ಲ, ಬದಲಿಗೆ, ವಿಶ್ವದ ಪ್ರತಿಯೊಂದು ಪ್ರದೇಶದಲ್ಲೂ ಉಂಟಾಗುತ್ತಿರುವಂತೆ, ನವ-ಉದಾರವಾದದ ಬಿಗಿ ಕವಚದಿಂದ. ಉದಾರವಾದಿಗಳ ಸಮಸ್ಯೆಯೆಂದರೆ, ಈ ಸಂಗತಿಯ ಬಗ್ಗೆ ಸಾಕಷ್ಟು ಅರಿವಿಲ್ಲ. ನಾವು ಚರ್ಚಿಸುತ್ತಿರುವ ಅಮೇರಿಕದ ಉದಾರವಾದಿ ಪ್ರವೃತ್ತಿಯ ವಿಷಯದಲ್ಲೂ ಇದು ನಿಜ. ದುರ್ಗತಿ
ಹೀಗೆ, ಯುರೋಪಿನ ಇಂದಿನ ದುರ್ಗತಿ ಅಮೆರಿಕಕ್ಕಿಂತ ಭಿನ್ನವಾಗಿಲ್ಲ. ಯೂರೋಪ್ ಒಂದು ವಿಭಿನ್ನ ಇತಿಹಾಸವನ್ನು ಹೊಂದಿದೆ ಎಂಬುದು ಮತ್ತು ಎರಡನೇ ಮಹಾಯುದ್ಧದ ಕೊನೆಯಲ್ಲಿ ಉದ್ಭವಿಸಿದ ವರ್ಗ ಶಕ್ತಿಗಳ ವಿಭಿನ್ನವಾದ ಸಹ-ಸಂಬಂಧಗಳ ಕಾರಣದಿಂದ ಯೂರೋಪ್, ಅಮೆರಿಕದಿಂದ ಭಿನ್ನವಾದ ಒಂದು ಆರ್ಥಿಕ ಪರಂಪರೆಯನ್ನು ಹೊಂದಿದೆ ಎಂಬುದು ನಿಜವೇ. ಆದರೆ ಎರಡೂ ನವ-ಉದಾರವಾದಿ ಬಂಡವಾಳಶಾಹಿಯ ಅಂತರ್ಗತ ಪ್ರವೃತ್ತಿಗಳಿಗೆ ಸಮಾನ ರೀತಿಯಲ್ಲಿ ಒಡ್ಡಿಕೊಂಡಿರುವುದರಿAದ ಆ ಎಲ್ಲ ಭಿನ್ನತೆಗಳೂ ಪ್ರಸ್ತುತದಲ್ಲಿ ಮುಳುಗಿಹೋಗಿವೆ. ದುರ್ಗತಿ
ಈ ರೀತಿ ಒಡ್ಡಿಕೊಂಡಿರುವಾಗ, ಅಗತ್ಯವಿರುವುದು ಯುಎಸ್‌ನಲ್ಲಿ ಇರುವುದಕ್ಕಿಂತ ಭಿನ್ನವಾದ ಯಾವುದೋ ಒಂದು ಯುರೋಪಿಯನ್ “ಮಾದರಿ”ಯನ್ನು ಅನುಸರಿಸುವುದಲ್ಲ, ಬದಲು, ನವ-ಉದಾರವಾದಿ ಬಂಡವಾಳಶಾಹಿಯನ್ನು ಮೀರಿ ಹೋಗುವುದು ಅಗತ್ಯವಾಗಿದೆ. ಡೊನಾಲ್ಡ್ ಟ್ರಂಪ್ ಈ ಅಂಶವನ್ನು, ತನ್ನ ಸುಂಕಗಳ ಆಕ್ರಮಣದ ಹೊರತಾಗಿಯೂ, ಕಾರ್ಯಗತಗೊಳಿಸಿಲ್ಲ ಎಂಬುದನ್ನು ಒತ್ತಿ ಹೇಳಬೇಕಾಗಿದೆ: ಆತ ಗಡಿಯಾಚೆ-ಈಚೆ ಬಂಡವಾಳದ ಮುಕ್ತ ಹರಿವುಗಳಿಗೆ, ವಿಶೇಷವಾಗಿ ಹಣಕಾಸು ಬಂಡವಾಳದ ಮುಕ್ತ ಹರಿವುಗಳಿಗೆ ಈಗಲೂ ಬದ್ಧನಾಗಿದ್ದು, ಆತ ನವ-ಉದಾರವಾದದ ಸಾರ-ಸತ್ವಕ್ಕೆ ನಿಷ್ಠರಾಗಿಯೇ ಉಳಿದಿದ್ದಾರೆ.
ಇದನ್ನೂ ನೋಡಿ: ಸೈದ್ದಾಂತಿಕ ಭಿನ್ನಾಭಿಪ್ರಾಯಕ್ಕೆ ಉತ್ತರ ಗಲಭೆಯೇ? Azim Premji Universityನಲ್ಲಿ ನಿಜವಾಗಿ ಏನಾಯಿತು?
