ಬೆಂಗಳೂರು; ಜ. 28 : 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಶಿಕ್ಷಣ ಮಂಡಳಿ ಪ್ರಕಟ ಮಾಡಿದೆ. ಈ ಕುರಿತು ವಿಧಾನ ಮಂಡಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರೀಕ್ಷೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿ ಅವರು ಜೂನ್ 14ರಿಂದ ಜೂನ್ 25ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಎಸ್ ಎಸ್ ಎಲ್ ಸಿ ಪರೀಕ್ಷೆ ಸಂಬಂದಿಸಿದಂತೆ ಈ ಹಿಂದಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿವೆ. ಅದರ ಆಧಾರದ ಮೇಲೆ ಈ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ತಾಂತ್ರಿಕ ಸಲಹಾ ಸಮಿತಿ ಜತೆ ಸಭೆ ನಡೆಸಿದ್ದು ಸಮಿತಿಯಿಂದ ಗ್ರಿನ್ ಸಿಗ್ನಲ್ ಸಿಕ್ಕಿದೆ. ನವೆಂಬರ್ನಲ್ಲಿ ನಡೆದ ಸಭೆಯಲ್ಲಿ ತರಗತಿ ಪ್ರಾರಂಭಿಸೋದು ಬೇಡ ಎಂದು ತಿರ್ಮಾನವಾಯಿತು. ಬಳಿಕ ಡಿಸೆಂಬರ್ನಲ್ಲಿ ಸಭೆ ಸೇರಿ ಜನವರಿ 1ರಿಂದ, 10 ಹಾಗೂ 12ನೇ ತರಗತಿ ಪ್ರಾರಂಭ ಮಾಡಲು ನಿರ್ಧರಿಸಲಾಯಿತು. 6ರಿಂದ 9ನೇ ತರಗತಿವರೆಗೆ ಪರಿಷ್ಕೃತ ವಿದ್ಯಾಗಮ ಶುರು ಮಾಡಲಾಯಿತು. ಅದರ ಪ್ರಕಾರ 6 ರಿಂದ 8 ನೆ ತರಗತಿಯವರಿಗೆ ಪರಿಷ್ಕೃತ ವಿದ್ಯಾಗಮ ಮುಂದುವರೆಯಲಿದೆ.
ಇನ್ನು ಉಳಿದ 9, 10, 11, 12ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿದೆ. 8 ನೇ ತರಗತಿ ಆರಂಭಕ್ಕೆ ಪೇ. 2 ವರೆಗೆ ಕಾದು ನೋಡಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಧ್ಯಕ್ಕೆ 1 ರಿಂದ 5 ನೇ ತರಗತಿಗಳು ಆರಂಭವಿಲ್ಲ ಎಂದು ಸಚಿವ ಸುರೇಸ್ ಕುಮಾರ್ ಸ್ಷಷ್ಟ ಪಡಿಸಿದ್ದಾರೆ.
ಶಾಲೆಗಳ ಸರಾಸರಿ ವಿಚಾರವಾಗಿ ವಿವರ ನೀಡುತ್ತ ಅವರು ಶಾಲೆಗಳಲ್ಲಿ ಸರಾಸರಿ ಹಾಜರಾತಿ 12ನೇ ತರಗತಿಯಲ್ಲಿ ಶೇ. 75 ಹಾಗೂ 10ನೇ ತರಗತಿಯಲ್ಲಿ ಶೇ. 70 ಹಾಜರಾತಿ ಇದೆ. ಹಾಗೂ 6ನೇ ತರಗತಿಯಿಂದ 9ನೇ ತರಗತಿವರೆಗೆ ವಿದ್ಯಾಗಮ ಹಾಜರಾತಿಯಲ್ಲಿ ಶೇ. 45 ರಷ್ಟು ಹಾಜರಾತಿ ಇದೆ ಎಂದರು.
ಪ್ರಮುಖವಾಗಿ ಶಾಲಾ ಕಾಲೇಜುಗಳ ಶುಲ್ಕ ವಿಚಾರವಾಗಿ ಇನ್ನು ನಿರ್ಧಾರ ತೆಗೆದುಕೊಂಡಿಲ್ಲ, ಅದಕ್ಕೆ ಸಲಹ ಸಮಿತಿ ಬೇಕು. ಈ ವಿಚಾರವಾಗಿ ಮುಖ್ಯ ಮಂತ್ರಿ ಯಡಿಯೂರಪ್ಪನವರೊಂದಿಗೆ ಚರ್ಚಿಸಿ ತಿರ್ಮಾನ ಕೈಗೊಳ್ಳುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಎಸ್ ಎಸ್ ಎಸ್ ಸಿ ವೇಳ ಪಟ್ಟಿ ಹೀಗಿದೆ.
ಜೂನ್ 14 – ಪ್ರಥಮ ಭಾಷೆ
ಜೂನ್ 16 – ಗಣಿತ
ಜೂನ್ 18 – ಇಂಗ್ಲೀಷ್ ಹಾಗೂ ಕನ್ನಡ
ಜೂನ್ 21 – ವಿಜ್ಞಾನ
ಜೂನ್ 23 – ಹಿಂದಿ
ಜೂನ್ 25- ಸಮಾಜ ವಿಜ್ಞಾನ
ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು ಆಕ್ಷೇಪ ಇದ್ದಲ್ಲಿ ಮನವಿ ಸಲ್ಲಿಕೆ ಮಾಡಬಹುದು ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ.