ಕೋಲಾರ :ಫೆ.05 : ಪ್ರಗತಿಪರ ಚಿಂತಕ ಪ್ರೊ.ಭಗವಾನ್ ಮುಖಕ್ಕೆ ಬೆಂಗಳೂರಿನ ನ್ಯಾಯಲಯದಲ್ಲಿಯೇ ವಕೀಲೆ ಮಸಿ ಬಳಿದ ಘಟನೆಯನ್ನು ಖಂಡಿಸಿ ಶುಕ್ರವಾರ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ನಗರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನಕಲಿ ಹಿಂದುತ್ವದ ಹೆಸರಿನಲ್ಲಿ ದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಾ ಇದ್ದು ಅದರ ಭಾಗವಾಗಿಯೇ ಇಂತಹ ಘಟನೆಗಳು ಸಾಕ್ಷಿಯಾಗಿವೆ ಚಿಂತಕ ಪ್ರೊ.ಭಗವಾನ್ ಅವರ ಮುಖಕ್ಕೆ ವಿಕೃತ ಮನಸ್ಸಿನ ನ್ಯಾಯವಾದಿ ಮೀರರಾಘವೇಂದ್ರ ಎನ್ನುವ ಮಹಿಳೆ ನ್ಯಾಯಾಲಯದ ಆವರಣದಲ್ಲಿಯೇ ಅವರ ಮುಖಕ್ಕೆ ಮಸಿ ಬಳಿದಿದ್ದು ಕೂಡಲೇ ಆ ಮಹಿಳೆಯನ್ನು ಬಂಧಿಸಬೇಕು ಹಾಗೂ ಅವರ ವಕೀಲ ವೃತ್ತಿಯ ನೊಂದಣಿಯನ್ನು ರದ್ದು ಪಡಿಸಬೇಕು ಅಲ್ಲದೆ ಕಾನೂನಿನ ಪ್ರಕಾರ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಕೋರ್ಟ್ ಆವರಣದಲ್ಲಿ ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ
ಮೀರಾ ರಾಘವೇಂದ್ರ ತಮ್ಮ ವ್ಯಕ್ತಿತ್ವಕ್ಕೆ ಬಳೆದುಕೊಂಡ ಮಸಿ ಎಂದಿಗೂ ಹೋಗುವುದಿಲ್ಲ. ಅವರು ವಕೀಲೆಯಾಗಿ ನ್ಯಾಯಂಗ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ, ಭಗವಾನ್‌ರವರು ನಾಡಿನ ದಲಿತಪರ, ರೈತಪರ, ಕಾರ್ಮಿಕ ಪರ ಮುಂಚೂಣಿಯ ಹೋರಾಟಗಾರರು ಮುಂದಿನ ದಿನಗಳಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಅವರಿಗೆ ಸರಕಾರ ಸಂಪೂರ್ಣ ರಕ್ಷಣೆಯ ಹೊಣೆಯನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ. ವಕೀಲೆಯ ಈ ಘಟನೆಯಿಂದ ನ್ಯಾಯಾಂಗ ವ್ಯವಸ್ಥೆಗೆ ಮಸಿ ಬಳಿದಿದ್ದಾರೆ. ಅವರು ನ್ಯಾಯದೇವತೆಯ ಮುಖಕ್ಕೆ ಮಸಿ ಬಳೆದಿದ್ದಾರೆ. ಇದೊಂದು ಅಮಾನವೀಯ ಕೃತ್ಯ. ಪ್ರಚಾರದ ಹುಚ್ಚಿನಿಂದ ಭಗವಾನ್‌ರವರ ಮುಖಕ್ಕೆ ಮಸಿ ಬಳೆದಿದ್ದಾರೆ. ಯಾವುದೇ ವಿಚಾರವಾದರೂ ನ್ಯಾಯಯುತವಾದ ದಾರಿಯಲ್ಲಿ ನಡೆಯಬೇಕು. ಆದರೆ ಮೀರಾ ರಾಘವೇಂದ್ರ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಪ್ರಗತಿಪರ ಸಂಘಟನೆಗಳು ಒತ್ತಾಯಿಸಿವೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಈ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಐಪಲ್ಲಿ ನಾರಾಯಣಸ್ವಾಮಿ, ಟಿ.ಎಂ ವೆಂಕಟೇಶ್, ಹೂಹಳ್ಳಿ ನಾಗೇಶ್, ಎಂ ವಿಜಯಕೃಷ್ಣ, ಹೂಹಳ್ಳಿ ನಾಗರಾಜ್, ವಿ.ಅಂಬರೀಷ್, ಮುನಿವೆಂಕಟಪ್ಪ, ನಂಬಿಗಾನಹಳ್ಳಿ ನಾರಾಯಣಸ್ವಾಮಿ, ಪಿ.ವಿ ರಮಣ್, ಮುನಿಆನಂಜಿನಪ್ಪ, ರವಿ ಮುಂತಾದವರು ಭಾಗವಹಿಸಿದ್ದರು.