ಬೆಂಗಳೂರು : ಖಾಲಿ ಇರುವ ಹುದ್ದೆಗಳಿಗೆ ನೇಮಕಕ್ಕೆ ಒತ್ತಾಯಿಸಿ ಕೆಪಿಎಸ್ಸಿಯಿಂದ ಆಯ್ಕೆ ಆದ ಅಭ್ಯಾರ್ಥಿಗಳ ಕಳೆದ ಎರಡು ದಿನಗಳಿಂದ ಸಚಿವರಾದ ಶ್ರೀಮಂತ ಪಾಟೀಲ ಅವರ ಮನೆ ಮುಂದೆ ಧರಣಿ ನಡೆಸುತ್ತಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದ್ದ 222 ಹುದ್ದೆಗಳಿಗೆ ಕೆಪಿಎಸ್‌ಸಿ ಮೂಲಕ ನೇಮಿಸಿಕೊಂಡು ಒಂದು ವರ್ಷ ಪೂರೈಸಿದೆ. ಆದರೆ ಇನ್ನೂ ನೇಮಕಾತಿ ಆದೇಶ ನೀಡಲು ಸರ್ಕಾರದ ವಿಳಂಬ ಮಾಡುತ್ತಿದೆ. ಬೇರೆ ಬೇರೆ ಇಲಾಖೆಯಲ್ಲಿರುವ ಸುಮಾರು 2500 ವಿವಿಧ ಹುದ್ದೆಗಳಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು, ನೇಮಕಾತಿ ಅವಧಿ ಮುಗಿಯುತ್ತಾ ಬಂದರು, ಆರ್ಥಿಕ ಇಲಾಖೆಯವರು ನೇಮಕವಾದವರಿಗೆ ಆದೇಶ ನೀಡಲು ಸಮ್ಮತಿಸದಿರುವು ಅಭ್ಯಾರ್ಥಿಗಳ ಮಾಡುತ್ತಿರುವುದು ತಾರತಮ್ಯ ಎಂದು ಆರೋಪಿಸಿದರು.
ಈ ಕೂಡಲೇ ಕೆಪಿಎಸ್ಸಿಯಿಂದ ಆಯ್ಕೆ ಆದ ಅಭ್ಯಾರ್ಥಿಗಳಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಬೇಕು ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ವಿವಿಧ ಭಾಗಗಳಿಂದ ಬಂದಿರುವ ಅಭ್ಯರ್ಥಿಗಳು ಸಚಿವರಿಗೆ ಆಗ್ರಹಿಸಿದ್ದಾರೆ.