ಕಿಚ್ಚ ದಚ್ಚು ಮತ್ತೆ ಒಂದಾಗಲಿ, ಅಭಿಮಾನಿಗಳ ಅಭಿಯಾನ

ಬೆಂಗಳೂರು : ಕಿಚ್ಚ ದಚ್ಚು ಮತ್ತೆ ಒಂದಾಗಬೇಕು ಅಂತ ಅಭಿಮಾನಿಗಳು ಟ್ವೀಟ್‌ ಅಭಿಯಾನ ಶುರುವಾಗಿದ್ದು, ಸಾವಿರ ಸಾವಿರ ಟ್ವೀಟ್‌ ಗಳು ಮರು ಹಂಚಿಕೊಂಡಿದ್ದಾರೆ.

ಈ ಇಬ್ಬರು ಮೇಘಾ ಸ್ಟಾರ್‌ ನಟರು ಮತ್ತೆ ಒಂದಾಗಲಿ, ಈ ಇಬ್ಬರು ನಟರು ಒಟ್ಟಾಗಿರು ಸಿನಿಮಾಗಳು ಬರಲಿ ಎಂದು ಅಭಿಮಾನಿಗಳು ತಮ್ಮ ಅಭಿಲಾಷೆಯನ್ನು ಟ್ವೀಟ್‌ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ.

ನಿರ್ಮಾಪಕ ಸೂರಪ್ಪಬಾಬು ಎನ್ನಲಾದ ಟ್ವೀಟ್‌ ಅಕೌಂಟ್‌ ಮೂಲಕ #DbossKicchaComeTogether   ಎಂಬ ಹ್ಯಾಸ್‌ ಟ್ಯಾಗ್‌ ಬಳಸಿ ತಮ್ಮ ಮನದಾಳಗಳ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಕಳೆದ 4 ವರ್ಷದಿಂದ ಈ ಇಬ್ಬರು ಸ್ಟಾರ್‌ ನಟರ ನಡುವೆ ಸ್ನೇಹ ಬಿರುಕು ಬಿಟ್ಟಿದ್ದು, ಅದನ್ನು ಸ್ವತಃ ದರ್ಶನ ಅವರು ಟ್ವೀಟ್‌ ಮೂಲಕ ಹಂಚಿಕೊಂಡಿದ್ದರು. ಈ ಇಬ್ಬರು ನಟರನ್ನು ಪ್ರೀತಿಸುವ ಕನ್ನಡ ಅಭಿಮಾನಿಗಳಿಗೆ ಬೇಸರ ಉಂಟಾಗಿತ್ತು.

ಈ ಇಬ್ಬರು ಸ್ಟಾರ್‌ ನಟರು ಒಂದಾಗುವಿಕೆಯನ್ನು ಅಭಿಮಾನಿಗಳು, ಚಿತ್ರರಂಗ ಎದುರು ನೋಡುತ್ತಿದೆ. ಈ ಮೇಘಾ ಸ್ಟಾರಗಳು ಮೊದಲಿನಂತೆ ಸ್ಯಾಂಡಲ್‌ ಹುಡ್‌ ನಲ್ಲ ಒಟ್ಟಾಗಿ ಕಾಣಲಿ ಎಂದು ಅಭಿಮಾನಿಗಳು ಆಸೆಯಾಗಿದೆ.  ಅವರ ಆಸೆಯಂತೆ ಒಂದಾಗುತ್ತಾರ ದಚ್ಚು ಕಿಚ್ಚ ಕಾದು ನೋಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *