ಕರ್ನಾಟಕದಲ್ಲಿ 65 ಲಕ್ಷ ಕಾರ್ಮಿಕರ ಮಹಾಮುಷ್ಕರ

ಕರ್ನಾಟಕ : ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ  ಜೆ.ಸಿ.ಟಿ.ಯು ನವೆಂಬರ್ 26ರಂದು ಕರೆ ನೀಡಿದ್ದ ಸಾರ್ವತ್ರಿಕ ಮಹಾಮುಷ್ಕರಕ್ಕೆ ಯಶಸ್ವಿಯಾಗಿದ್ದು, ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕರ್ನಾಟಕದಲ್ಲಿ ವಿವಿಧ ವಿಭಾಗಗಳ ಸುಮಾರು 65 ಲಕ್ಷ ಕಾರ್ಮಿಕರು ಈ ಮಹಾಮುಷ್ಕರದಲ್ಲಿ ಭಾಗವಹಿಸಿದ್ದಾರೆ. ಇದು ಬಹುಶಃ ರಾಜ್ಯದಲ್ಲಿ ಅತ್ಯಧಿಕ ಹೆಚ್ಚು ಸಂಖ್ಯೆಯ ಕಾರ್ಮಿಕರು ಭಾಗವಹಿಸಿದ ಮುಷ್ಕರ.

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ

ಕರ್ನಾಟಕದಲ್ಲಿ ಹೆಚ್ಚು ಕಡಿಮೆ ಎಲ್ಲಾ ಜಿಲ್ಲೆಗಳ ಮತ್ತು ಎಲ್ಲಾ ಕ್ಷೇತ್ರಗಳ ಕಾರ್ಮಿಕರು ಈ ಮಹಾಮುಷ್ಕರದಲ್ಲಿ ಭಾಗವಹಿಸಿದರು. ಸಂಘಟಿತ ವಲಯದ ಸಾರ್ವಜನಿಕ ಮತ್ತು ಖಾಸಗಿ ಕೈಗಾರಿಕೆಗಳು, ಅಂಗನವಾಡಿ, ಬಿಸಿಯೂಟ, ಆಶಾ, ಪಂಚಾಯತ್, ಮುನಿಸಿಪಲ್, ಹಮಾಲಿ, ಬೀಡಿ, ಕಟ್ಟಡ ನಿರ್ಮಾಣ – ಮುಂತಾದ ಕ್ಷೇತ್ರದ ಕಾರ್ಮಿಕರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿದರು. ಈ ಕ್ಷೇತ್ರಗಳಲ್ಲದೆ ಸರಕಾರ, ವಿದ್ಯುತ್, ಸಾರಿಗೆ, ಟೆಲಿಕಾಂ ಮುಂತಾದ ಸೇವಾಕ್ಷೇತ್ರಗಳು ಮತ್ತು ಇತರ ಉದ್ಯಮಗಳ ಹಲವು ವಿಭಾಗಗಳ ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರು ಸಹ ಮಹಾಮುಷ್ಕರದಲ್ಲಿ  ಭಾಗವಹಿಸಿದರು. ಕರ್ನಾಟಕದಲ್ಲಿರುವ ಸಾರ್ವಜನಿಕ ಉದ್ಯಮಗಳಲ್ಲಿ ಬಿ.ಇ.ಎಂ.ಎಲ್ ನ ಎಲ್ಲಾ ಘಟಕಗಳಲ್ಲಿ ಬಿ.ಎಚ್.ಇ.ಎಲ್ ನ ಒಂದು ಘಟಕದಲ್ಲಿ ಮತ್ತು ಎಚ್.ಎ.ಎಲ್ ನಲ್ಲಿ ಪೂರ್ಣ ಪ್ರಮಾಣದ ಮುಷ್ಕರ ಆಗಿದೆ. ಬಿ.ಇ.ಎಲ್ ನಲ್ಲಿ ಭಾಗಶಃ ಮುಷ್ಕರ ನಡೆದಿದೆ.

ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆ

ರಾಜ್ಯದ ಹಲವೆಡೆ ಮುಷ್ಕರ ನಿರತ ಕಾರ್ಮಿಕರು ಬೀದಿಗೆ ಬಂದು ಮೆರವಣಿಗೆ, ಪ್ರತಿಭಟನೆ, ಪ್ರದರ್ಶನಗಳಲ್ಲಿ ಭಾಗವಹಿಸಿ ಮಹಾಮುಷ್ಕರದ ಪ್ರಮುಖ ಹಕ್ಕೊತ್ತಾಯಗಳನ್ನು ಒತ್ತಾಯಿಸುವ ಘೋಷಣೆಗಳನ್ನು ಕೂಗಿದರು. ಹಲವು ಕಡೆ ಸರಕಾರದ ಕಚೇರಿಗಳಿಗೆ ತೆರಳಿ ಸಂಬಂಧಿತ ಅಧಿಕಾರಗಳಿಗೆ ಮಹಾಮುಷ್ಕರದ ಹಕ್ಕೊತ್ತಾಯಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಿದರು. ಇಂತಹ ಸುಮಾರು 150 ಪ್ರತಿಭಟನೆ, ಪ್ರದರ್ಶನಗಳು ನಡೆದಿದ್ದು ಇವುಗಳಲ್ಲಿ ಸುಮಾರು ಒಂದು ಲಕ್ಷ ಕಾರ್ಮಿಕರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆ
ಹೊಸಪೇಟೆಯಲ್ಲಿ ನಡೆದ ಪ್ರತಿಭಟನೆ

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಕೊಡಗು, ಗದಗ್, ಉಡುಪಿ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ವಿಜಯಪುರ, ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ ಜಿಲ್ಲೆಯಲ್ಲಿ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಮತ್ತು ಪ್ರತಿಭಟನೆ, ಪ್ರದರ್ಶನಗಳು ನಡೆದಿವೆ.

ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಪ್ಪುಭಾವುಟ ಪ್ರದರ್ಶನ ನಡೆಸುವ ಮೂಲಕ ಕಾರ್ಮಿಕರು ಆಕ್ರೊಶವನ್ನು ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಮುಂದಾದಾಗ ಸಾಕಷ್ಟು ಜಟಾಪಟಿ ನಡೆಯಿತು.

ಕೊಪ್ಪಳದಲ್ಲಿ ನಡೆದ ಪ್ರತಿಭಟನೆ

ಗಜೇಂದ್ರಗಡದಲ್ಲಿ ನಡೆದ ಮುಷ್ಕರದಲ್ಲಿ ಮಾನವ ಸರಪಳಿಯನ್ನು ರಚಿಸುವ ವೇಳೆ ಪ್ರತಿಭಟನೆಕಾರರಿಗೂ ಮತ್ತು ಪೊಲೀಸರಿಗೂ ಮಾತಿನ ಚಕಮಕಿ ನಡೆಯಿತು.

ಮಂಡ್ಯದಲ್ಲಿ ನಡೆದ ಪ್ರತಿಭಟನೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಗೋವಾ ರಸ್ತೆಯನ್ನು ತಡೆಯುವ ಮೂಲಕ ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು, ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು.

 

Donate Janashakthi Media

Leave a Reply

Your email address will not be published. Required fields are marked *