ಒಮನ್ : ಒಮನ್ ಕರಾವಳಿಯಲ್ಲಿ 117 ಮೀಟರ್ ಉದ್ದದ ತೈಲ ಟ್ಯಾಂಕರ್ ಮಗುಚಿ ಬಿದ್ದು, 13 ಮಂದಿ ಭಾರತೀಯರು ಸೇರಿ 16 ಮಂದಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸಾಗರ ಭದ್ರತಾ ಕೇಂದ್ರ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದು, ನೌಕೆಯಲ್ಲಿದ್ದ ಇತರ ಮೂವರ ಸಿಬ್ಬಂದಿಗಳು ಶ್ರೀಲಂಕಾ ಮೂಲದವರು ಎಂದು ಹೇಳಲಾಗಿದೆ.
ಕೊಮೊರೊಸ್-ಧ್ವಜದ ತೈಲ ಟ್ಯಾಂಕರ್ ರಾಸ್ ಮದ್ರಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಡುಕ್ ಬಂದರು ಪಟ್ಟಣಕ್ಕೆ ಸಮೀಪದಲ್ಲಿ ಮುಳುಗಡೆಯಾಗಿದೆ ಎಂದು ತಿಳಿಸಿದೆ. ಇನ್ನು ದುಕ್ ಪಟ್ಟಣ ಒಮನ್ ಆಗ್ನೇ ಭಾಗದಲ್ಲಿದೆ. ಇನ್ನು ಮುಳುಗಡೆಯಾಗಿರುವ ಹಡಗನ್ನು ಪ್ರೆಸ್ಟೀಜ್ ಫಾಲ್ಕನ್ ಎಂದು ಗುರುತಿಸಲಾಗಿದ್ದು, ಅದರಲ್ಲಿ ಸಿಬ್ಬಂದಿ ಕಣರೆಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರೆದಿದೆ.
ಮತ್ತೊಂದೆಡೆ ಒಮಾನ್‌ನ ರಾಜಧಾನಿ ಮಸ್ಕತ್‌ನಲ್ಲಿರುವ ವಾದಿ ಕಬೀರ್ ಪ್ರದೇಶದ ಮಸೀದಿಯೊಂದರಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಭಾರತೀಯ ಪ್ರಜೆ ಸೇರಿದಂತೆ ಒಟ್ಟು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೊಮೊರೊಸ್ ಧ್ವಜದ ತೈಲ ಟ್ಯಾಂಕರ್ ಪ್ರೆಸ್ಟೀಜ್ ಫಾಲ್ಕನ್‌ನಲ್ಲಿ 13 ಭಾರತೀಯರು ಮತ್ತು ಮೂವರು ಶ್ರೀಲಂಕಾದವರು ಇದ್ದರು ಎಂದು ಕಡಲ ಭದ್ರತಾ ಕೇಂದ್ರವು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದೆ.ಒಮಾನಿ ಬಂದರಿನ ಡುಕ್ ಬಳಿ ರಾಸ್ ಮದ್ರಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಡಗು ಮುಳುಗಿದೆ ಎಂದು ತಿಳಿಸಿದೆ.
ಟ್ಯಾಂಕರ್ ಒಮನ್ ಬಂದರಿನ ಏಡೆನ್ಗೆ ಹೋಗುತ್ತಿತ್ತು. ತೈಲ ಟ್ಯಾಂಕರ್ ಮುಳುಗಿದೆ ಮತ್ತು ತಲೆಕೆಳಗಾದಿದೆ ಎಂದು ಒಮನ್ನ ಕಡಲ ಭದ್ರತಾ ಕೇಂದ್ರವು ಸುದ್ದಿ ಸಂಸ್ಥೆ ರಾಯಿಟರ್ಸ್ ತಿಳಿಸಿದೆ. ಆದಾಗ್ಯೂ, ತೈಲ ಅಥವಾ ತೈಲ ಉತ್ಪನ್ನಗಳು ಸಮುದ್ರಕ್ಕೆ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಲ್ಲ. ತೈಲ ಟ್ಯಾಂಕರ್ ರಾತ್ರಿಯಿಂದ ನೀರಿನಲ್ಲಿ ಪಲ್ಟಿಯಾಗಿದೆ. ಈ ಹಡಗು ಸುಮಾರು 20 ವರ್ಷ ಹಳೆಯದು. ಇದನ್ನು 2007 ರಲ್ಲಿ ನಿರ್ಮಿಸಿರಬಹುದು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ತನ್ನ ವರದಿಯಲ್ಲಿ ತಿಳಿಸಿದೆ.
2007 ರಲ್ಲಿ ನಿರ್ಮಿಸಲಾದ ಈ ಹಡಗು 117 ಮೀಟರ್ ಉದ್ದದ ತೈಲ ಉತ್ಪನ್ನಗಳ ಟ್ಯಾಂಕರ್ ಆಗಿದೆ ಎಂದು ಐಇಉ ಯ ಶಿಪ್ಪಿಂಗ್ ಡೇಟಾದಿಂದ ಮಾಹಿತಿ ಲಭ್ಯವಾಗಿದೆ. ಸಾಮಾನ್ಯವಾಗಿ ಅಂತಹ ಸಣ್ಣ ಟ್ಯಾಂಕರ್ಗಳನ್ನು ಸಣ್ಣ ಪ್ರಯಾಣಕ್ಕಾಗಿ ನಿಯೋಜಿಸಲಾಗುತ್ತದೆ.ಡುಕ್ ಬಂದರು ಒಮಾನ್ನ ನೈಋತ್ಯ ಕರಾವಳಿಯಲ್ಲಿದೆ, ಇದು ದೇಶದ ಪ್ರಮುಖ ತೈಲ ಮತ್ತು ಅನಿಲ ಗಣಿಗಾರಿಕೆ ಯೋಜನೆಗಳ ಪ್ರಮುಖ ಕೇಂದ್ರವಾಗಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.