ಇರಾನ್ ನಲ್ಲಿ ಬಸ್ ಪಲ್ಟಿ ಹೊಡೆದು 35 ಪಾಕಿಸ್ತಾನಿ ಯಾತ್ರಿಗಳ ದುರ್ಮರಣ

ಇರಾನ್ ನಲ್ಲಿ ಬಸ್ ಉರುಳಿಬಿದ್ದ ಪರಿಣಾಮ ಪಾಕಿಸ್ತಾನದ 35 ಯಾತ್ರಿಗಳು ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.

ಪಾಕಿಸ್ತಾನದಿಂದ ಇರಾಕ್ ಗೆ ಪ್ರಯಾಣಿಸುತ್ತಿದ್ದ 53 ಪಾಕಿಸ್ತಾನಿಯರು ಇದ್ದ ಬಸ್ ಇರಾನ್ ನ ಯಜ್ದ್ ಪ್ರಾವಿನೆನ್ಸ್ ನಲ್ಲಿ ಪಲ್ಟಿ ಹೊಡೆದಿದೆ.

ಮೃತಪಟ್ಟ ಬಹುತೇಕರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕಾನಾದ ನಿವಾಸಿಗಳು ಎಂದು ಹೇಳಲಾಗಿದೆ. ದುರ್ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.

 

Donate Janashakthi Media

Leave a Reply

Your email address will not be published. Required fields are marked *