ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸೋಮವಾರ ಭಾರೀ ಮಳೆಯಾಗಿದ್ದು, ಇದೇ ರೀತಿ ಮಳೆಯ ಆರ್ಭಟ ಇನ್ನು ಒಂದು ವಾರ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಶ್ರಾವಣ ಮಾಸದ ಮೊದಲ ದಿನವಾದ ಸೋಮವಾರ ಭಾರೀ ಮಳೆಯಾಗಿದ್ದು, ರಾತ್ರಿಯೀಡಿ ಸುರಿದ ಮಳೆಯಿಂದ ಬಹುತೇಕ ತಗ್ಗುಪ್ರದೇಶಗಳಲ್ಲಿ ಮಳೆ ನಿಂತು ಜನರು ಪರದಾಟ ನಡೆಸಿದ್ದಾರೆ. ಒಂದೇ ರಾತ್ರಿಯಲ್ಲಿ ಬೆಂಗಳೂರಿನಲ್ಲಿ 96 ಮಿ.ಮೀ. ಮಳೆಯಾಗಿದೆ.
ಸೋಮವಾರದಿಂದ ಆರಂಭಗೊಂಡ ಮಳೆಯ ಅಬ್ಬರ ಆಗಸ್ಟ್ 12ರವರೆಗೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ,ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.
ಕುಂದಾಪುರ, ಹೊನ್ನಾವರ, ಗೇರುಸೊಪ್ಪ, ಶಿರಾಲಿ, ಕದ್ರಾ, ಉಡುಪಿ, ಕ್ಯಾಸಲ್ರಾಕ್, ಆಗುಂಬೆ, ಸಿದ್ದಾಪುರ, ಕುಮಟಾ, ಕೋಟ, ಗೋಕರ್ಣ, ಲಿಂಗನಮಕ್ಕಿ, ಕಾರವಾರ, ಕಾರ್ಕಳ, ಶೃಂಗೇರಿ, ಯಲ್ಲಾಪುರ, ಬೆಳ್ತಂಗಡಿ, ಉಪ್ಪಿನಂಗಡಿ, ಸಿದ್ದಾಪುರ, ಜಯಪುರದಲ್ಲಿ ಮಳೆಯಾಗಿದೆ. ಆನವಟ್ಟಿ, ಪುತ್ತೂರು, ಮುಂಡಗೋಡು, ಮಾಣಿ, ಹಾವೇರಿ, ಔರಾದ್, ಹುಂಚದಕಟ್ಟೆ, ಕೊಪ್ಪ, ಬಾಳೆಹೊನ್ನೂರಿನಲ್ಲಿ ಮಳೆಯಾಗಿದೆ.