ಆಂಧ್ರಪ್ರದೇಶ : ಆಂಧ್ರಪ್ರದೇಶ ಕೃಷ್ಣ ಜಿಲ್ಲೆಯ ಮಚಲಿಪಟ್ಟಣದ ಪಶುವೈದ್ಯರು ಬಿಡಾಡಿ ಹಸುವಿಗೆ ಮೂರು ಗಂಟೆಗಳ ಕಾಲ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿ ಅದರ ಹೊಟ್ಟೆಯಿಂದ 52 ಕೆ.ಜಿ.ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರತೆಗೆದಿದ್ದಾರೆ.
ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡುವುದರಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿರುವ ನಡುವೆಯೇ ಆಘಾತಕಾರಿ ಘಟನೆಯಲ್ಲಿ, ನಗರಗಳ ರಸ್ತೆಗಳಲ್ಲಿ ಅಲೆದಾಡುವ ಹಸುಗಳು ಸರಿಯಾದ ಮೇವಿನ ಕೊರತೆಯಿಂದಾಗಿ ಬಹಳ ಹಿಂದಿನಿಂದಲೂ ತೀವ್ರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಹೀಗಾಗಿ, ಅನೇಕ ಹಸುಗಳು ಕಸದ ತೊಟ್ಟಿಗಳ ಮೂಲಕ ಮೇವು ಹುಡುಕಾಡಲು ಮುಂದಾಗುತ್ತವೆ.
ಈ ಸಂದರ್ಭದಲ್ಲಿ ತೊಟ್ಟಿಗಳಲ್ಲಿನ ಪ್ಲಾಸ್ಟಿಕ್ ಕವರ್‌ಗಳು, ಪೋಸ್ಟರ್‌ಗಳು ಮತ್ತು ಇತರ ತ್ಯಾಜ್ಯ ವಸ್ತುಗಳನ್ನು ಸೇವಿಸುತ್ತವೆ. ಇದು ಹಲವಾರು ಜಾನುವಾರುಗಳಿಗೆ ದೀರ್ಘಕಾಲದ ಅನಾರೋಗ್ಯಕ್ಕೆ ಕಾರಣವಾಗುತ್ತಿವೆ. ಅಲ್ಲದೇ, ಹಲವು ಸಂದರ್ಭಗಳಲ್ಲಿ ಸಾವು ಕೂಡ ಸಂಭವಿಸುತ್ತಿದೆ.
ಇದನ್ನೂ ಓದಿ : ಬೆಂಗಳೂರು | ಎಲ್ಲಾ ಆಹಾರ ಉದ್ಯಮಿಗಳು FOSTAC ತರಬೇತಿ ಪಡೆಯುವುದು ಕಡ್ಡಾಯ – ರಾಘವೇಂದ್ರ ಶೆಟ್ಟಿ
ತಂಡವು ನಿಖರ ಶಸ್ತ್ರಚಿಕಿತ್ಸೆ ಕೈಗೊಂಡು ಹಸುವಿನ ಹೊಟ್ಟೆಯಿಂದ ಬೃಹತ್ ಪ್ರಮಾಣದ ಪ್ಲಾಸ್ಟಿಕ್ ಅನ್ನು ಯಶಸ್ವಿಯಾಗಿ ಹೊರತೆಗೆದಿದೆ. ಇಂತಹದ್ದೇ ಒಂದು ಹಸುವಿನ ಆರೋಗ್ಯ ಹದಗೆಡುತ್ತಿರುವುದನ್ನು ಗಮನಿಸಿದ ಡಾ.ದೀಪಕ್ ಮತ್ತು ಡಾ.ಹೇಮಂತ್ ಅವರನ್ನೊಳಗೊಂಡ ವೈದ್ಯಕೀಯ ತಂಡವು ಜಿಲ್ಲಾ ಪಶುಸಂಗೋಪನಾ ಅಧಿಕಾರಿ ಚಿನ್ನ ನರಸಿಂಹುಲು ಮೇಲ್ವಿಚಾರಣೆಯಲ್ಲಿ ಅದರ ಪ್ರಾಣ ಉಳಿಸಲು ಮುಂದಾಯಿತು. ಹಸು ಈಗ ಚೇತರಿಸಿಕೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅನಾರೋಗ್ಯಪೀಡಿತ ಜಾನುವಾರುಗಳನ್ನು ಉಳಿಸಲು ಮತ್ತು ಪ್ಲಾಸ್ಟಿಕ್ ಸೇವನೆಯಿಂದ ಉಂಟಾಗುವ ಸಾವುಗಳನ್ನು ತಗ್ಗಿಸಲು ಹಂತ, ಹಂತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಹೇಳಿದರು. ಘಟನೆಯ ಕುರಿತು ಮಾತನಾಡಿದ ಹೈನುಗಾರ ರೈತರ ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ ಜನ್ನು ವೆಂಕಟಗಣೇಶ್, ಜಿಲ್ಲಾದ್ಯಂತ ಇದೇ ರೀತಿಯ ಪ್ರಕರಣಗಳನ್ನು ಗುರುತಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದರು.
ಘಟನೆಯ ಕುರಿತು ಮಾತನಾಡಿದ ಹೈನುಗಾರ ರೈತರ ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ ಜನ್ನು ವೆಂಕಟಗಣೇಶ್, ಜಿಲ್ಲಾದ್ಯಂತ ಇದೇ ರೀತಿಯ ಪ್ರಕರಣಗಳನ್ನು ಗುರುತಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಅನಾರೋಗ್ಯಪೀಡಿತ ಜಾನುವಾರುಗಳನ್ನು ಉಳಿಸಲು ಮತ್ತು ಪ್ಲಾಸ್ಟಿಕ್ ಸೇವನೆಯಿಂದ ಉಂಟಾಗುವ ಸಾವುಗಳನ್ನು ತಗ್ಗಿಸಲು ಹಂತ, ಹಂತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಹೇಳಿದರು.
ಬೀದಿ ಬದಿಯ ಹಸುಗಳು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿರುವ ಅಳಿದುಳಿದ ಆಹಾರ ಸೇವನೆ ಮಾಡುವಾಗ ಪ್ಲಾಸ್ಟಿಕ್ ಸೇರಿಸಿ ತಿನ್ನುತ್ತವೆ. ಇದರಿಂದಾಗಿ ಅವುಗಳ ಕರುಳು ಬ್ಲಾಕ್ ಆಗುತ್ತದೆ. ಇದು ದೀರ್ಘಕಾಲ ಹಾಗೆಯೇ ಇದ್ದರೆ, ಅಸುನೀಗುತ್ತವೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದರು.
ಪ್ಲಾಸ್ಟಿಕ್ ತ್ಯಾಜ್ಯವನ್ನು ವಿವೇಚನಾರಹಿತವಾಗಿ ವಿಲೇವಾರಿ ಮಾಡುವುದರಿಂದ ಎಲ್ಲೆಡೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಪರಿಸರ ಮತ್ತು ಮುಗ್ಧ ಪ್ರಾಣಿಗಳ ಜೀವಕ್ಕೆ ಪ್ಲಾಸ್ಟಿಕ್ ಎಷ್ಟೊಂದು ಮಾರಕವಾಗುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆಯ ತುರ್ತು ಅಗತ್ಯತೆಯನ್ನು ಒತ್ತಿ ಹೇಳುತ್ತಿದೆ.
ಇದನ್ನೂ ನೋಡಿ : ಡ್ರಗ್ಸ್ ಮಾಫಿಯಾ :ಯುವಜನ ಟಾರ್ಗೆಟ್ ಯಾಕೆ? ಪೊಲೀಸರ ಬಲೆಗೆ ಬೀಳದ ಪೆಡ್ಲರ್‌ಗಳು Janashakthi Media
