ಅಸ್ಸಾಂ: ಅಸ್ಸಾಂನಲ್ಲಿ ಇಂದು ಬೆಳಗ್ಗೆ 11:03ರ ಸುಮಾರಿಗೆ 3.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಜ್ಞರು ತಿಳಿಸಿದ್ದಾರೆ.
Earthquake of Magnitude:3.7, Occurred on 05-07-2022, 11:03:48 IST, Lat: 24.61 & Long: 93.02, Depth: 35 Km Location: Assam
for more information download the BhooKamp App https://t.co/dyiXIES6NO pic.twitter.com/PuFOrSboea— National Center for Seismology (@NCS_Earthquake) July 5, 2022
ಇಂದು ಬೆಳಗ್ಗೆ 11:03ಕ್ಕೆ ಅಸ್ಸಾಂನಲ್ಲಿ 35 ಕಿ.ಮೀ. ಆಳದಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು NCS ಟ್ವೀಟ್ ಮಾಡಿದೆ. ಭೂಕಂಪನದಿಂದಾದ ಅಪಾಯಗಳ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ. ಇಂದು ಬೆಳಗ್ಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬ್ಲೇರ್‌ನಲ್ಲೂ ಕೂಡ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು.