ಧಾರವಾಡ : ಮೊಮೊಸ್​ ಡೆಲಿವರಿ ಮಾಡದ ಜೊಮ್ಯಾಟೋಗೆ 60 ಸಾವಿರ ದಂಡ!

ಧಾರವಾಡ: ಮಹಿಳೆಯೊಬ್ಬರಿಗೆ ಕಳೆದ ವರ್ಷ ರೂ.133.25 ಮೌಲ್ಯದ ಮೊಮೊಸ್‌ ಆಹಾರ ವಿತರಿಸಲು ವಿಫಲವಾದ ಆಹಾರ ವಿತರಣಾ ಕಂಪನಿ ಜೊಮಾಟೊ ರೂ.60,000 ಪರಿಹಾರ ನೀಡಬೇಕು ಎಂದು ಧಾರವಾಡದ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಆದೇಶಿಸಿದೆ.

ಜೊಮ್ಯಾಟೋ ಸೇವೆ ನ್ಯೂನತೆಯಿಂದ ಕೂಡಿದ್ದು, ಗ್ರಾಹಕರಿಗೆ ತೊಂದರೆ ಮತ್ತು ಮಾನಸಿಕ ಸಂಕಟ ಉಂಟುಮಾಡಿದೆ ಎಂದು ಆಯೋಗ ತಿಳಿಸಿದೆ.

ಜೊಮ್ಯಾಟೋ ಮೂಲಕ ಆಗಸ್ಟ್ 31, 2023 ರಂದು ಮೊಮೊಸ್ ಆರ್ಡರ್ ಮಾಡಿದ್ದ ದೂರುದಾರೆ ಜಿ ಪೇ ಮೂಲಕ ಅದಕ್ಕಾಗಿ ರೂ.133.25 ಪಾವತಿಸಿದ್ದರು. ನಂತರ ಆರ್ಡರ್‌ ತಲುಪಿದೆ ಎಂಬ ಸಂದೇಶ ಅವರಿಗೆ ತಲುಪಿತ್ತಾದರೂ ಆಹಾರ ತಲುಪಿರಲಿಲ್ಲ. ಮೆಸೇಜ್ ಬರುತ್ತಿದ್ದಂತೆ ನಮ್ಮ ಮನೆಗೆ ಯಾವುದೇ ಆರ್ಡರ್ ಬಂದಿಲ್ಲ. ಯಾವ ಡೆಲಿವರಿ ಬಾಯ್ ನಮ್ಮ ಮನೆಗೆ ಆಹಾರ ತಲುಪಿಸಿಲ್ಲ ಎಂದು ಶೀತಲ್ ಹೇಳಿದ್ದಾರೆ. ಇನ್ನು ರೆಸ್ಟೊರೆಂಟ್‌ನಲ್ಲಿ ವಿಚಾರಿಸಿದಾಗ ಡೆಲಿವರಿ ಬಾಯ್ ಬಂದು ನಿಮ್ಮ ಆರ್ಡರ್ ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ. ಆನಂತರ ಜೊಮ್ಯಾಟೋ ಮೂಲಕ ಏಜೆಂಟ್ ಸಂಪರ್ಕಿಸಲು ಶೀತಲ್ ಪ್ರಯತ್ನಿಸಿದ್ದಾರೆ, ಆದರೆ ಅದು ಸಾಧ್ಯವಾಗಿಲ್ಲ. ಕೊನೆಗೆ ಇ-ಮೇಲ್ ಮೂಲಕ ಜೊಮ್ಯಾಟೋಗೆ ದೂರು ನೀಡಿದಾಗ, 72 ಗಂಟೆ ಕಾಯುವಂತೆ ಎಂಬ ಪ್ರತಿಕ್ರಿಯೆ ಬಂದಿದೆ.

72 ಗಂಟೆ ಬಳಿಕ ಜೊಮ್ಯಾಟೋನಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆ ಸೆಪ್ಟೆಂಬರ್ 13, 2023 ರಂದು  ಶೀತಲ್, ಕಾನೂನಿನ ಪ್ರಕಾರ ನೋಟಿಸ್ ಕಳುಹಿಸಿದ್ದಾರೆ. ನ್ಯಾಯಾಲಯದ ಮುಂದೆ ಹಾಜರಾದ ಜೊಮ್ಯಾಟೋ ಪರ ವಕೀಲರು, ಶೀತಲ್ ಮಾಡಿರುವ ಆರೋಪಗಳೆಲ್ಲಾ ಸುಳ್ಳು ಎಂದು ವಾದಿಸಿದ್ದರು. ಗ್ರಾಹಕರ ಸಮಸ್ಯೆ ಆಲಿಸಲು ಜೊಮ್ಯಾಟೋ 72 ಗಂಟೆ ಸಮಯ ಕೇಳಿದೆ. ಆದರೆ ನ್ಯಾಯಲದಯಲ್ಲಿ ಅರ್ಜಿ ಸಲ್ಲಿಕೆಯಾಗುವರೆಗೂ ಜೊಮ್ಯಾಟೋ ಸ್ಪಂದಿಸಿಲ್ಲ. ಹಾಗಾಗಿ ಜೊಮ್ಯಾಟೋ ಸ್ಪಷ್ಟನೆ ವಿಶ್ವಾಸರ್ಹ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ಶೀತಲ್ ಅವರಿಂದ 133.25 ರೂಪಾಯಿ ಹಣ ಪಡೆದಿರೋದನ್ನು ಜೊಮ್ಯಾಟೋ ಸಹ ಒಪ್ಪಿಕೊಂಡಿತ್ತು. ಜೊಮ್ಯಾಟೋ ಸಮರ್ಪಕ ಸೇವೆಯನ್ನ ನೀಡುವಲ್ಲಿ ವಿಫಲವಾಗಿದ್ದು, ದೂರುದಾರರಿಗೆ ಮಾನಸಿಕವಾವು ನೋವುಂಟು ಮಾಡಿದೆ ಎಂದು ಆಯೋಗ ಹೇಳಿದೆ. ಗ್ರಾಹಕರು ಮಾಡಿದ ಆನ್‌ಲೈನ್ ಆರ್ಡರ್‌ಗಳಿಗೆ ಪ್ರತಿಕ್ರಿಯೆಯಾಗಿ ಜೊಮ್ಯಾಟೋ ಆಹಾರ ಪೂರೈಕೆಯ ವ್ಯವಹಾರ ನಡೆಸುತ್ತದೆ. ಹಣ ಪಡೆದು ರಶೀದಿ ನೀಡಿ ಅಗತ್ಯ ಆಹಾರವನ್ನು ತಲುಪಿಸಿಲ್ಲ. ದೂರುದಾರರಿಗೆ ಪರಿಹಾರ ನೀಡಲು ಜೊಮ್ಯಾಟೋ ಜವಾಬ್ದಾರನಾಗುತ್ತದೆ ಎಂದು ಆಯೋಗ ಹೇಳಿದೆ.  ಇದೇ ಆದೇಶದಲ್ಲಿ ಶೀತಲ್ ಅವರಿಗೆ ಉಂಟಾದ ಅನಾನುಕೂಲತೆ ಹಾಗೂ ಮಾನಸಿಕ ನೋವಿಗೆ ಪರಿಹಾರವಾಗಿ 50,000 ರೂ. ಮತ್ತು ವ್ಯಾಜ್ಯದ ವೆಚ್ಚಕ್ಕೆ 10,000 ರೂ. ಪಾವತಿಸಬೇಕೆಂದು ಹೇಳಿದೆ.

 

 

Donate Janashakthi Media

Leave a Reply

Your email address will not be published. Required fields are marked *