ಬೆಂಗಳೂರು: ನಗರದಲ್ಲಿ ಮೇ 21 ಬುಧವಾರದಂದು ನಡೆದಿದ್ದ ಜೆಪ್ಟೊ ಡೆಲಿವರಿ ಬಾಯ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿಷ್ಣುವರ್ಧನನನ್ನು ಬಸವೇಶ್ವರನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ. ಈ ಘಟನೆ ಬಸವೇಶ್ವರನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಬೆಂಗಳೂರು
ಆರ್ಡರ್ ಡೆಲಿವರಿ ವೇಳೆ ಪಕ್ಕದ ಮನೆಯ ವಿಳಾಸ ಇತ್ತು. ಯಾಕೆ ತಪ್ಪಾಗಿ ವಿಳಾಸ ನೀಡಿದ್ದೀರಿ ಎಂದು ಕೇಳಿದೆ. ಈ ವೇಳೆ ಶಶಾಂಕ್ ಎಂಬಾತ ಬಂದು ನನ್ನ ಜೊತೆ ಗಲಾಟೆ ಮಾಡಿದ್ದ. ಕೋಪದಿಂದ ಹಲ್ಲೆ ಮಾಡಿದೆ ಎಂದು ವಿಷ್ಣುವರ್ಧನ ಹೇಳಿದ್ದಾನೆ.
ಇದನ್ನೂ ಓದಿ: ಮಂಡ್ಯ| ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯದಿಂದ 3 ವರ್ಷದ ಮಗು ಸಾವು
ಶಶಾಂಕ್ ಅವರ ಪತ್ನಿ ಜೆಪ್ಟೊ ಆಯಪ್ ನಲ್ಲಿ ಆರ್ಡರ್ ಮಾಡಿದ್ದು, ಅಡ್ರೆಸ್ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಹಲ್ಲೆ ಹಂತಕ್ಕೆ ಹೋಗಿದ್ದು, ಮನೆ ಬಾಗಿಲಿಗೆ ಆರ್ಡರ್ ತಂದ ಡೆಲಿವರಿ ಬಾಯ್ ವಿಷ್ಣುವರ್ಧನ ಗ್ರಾಹಕ ಶಶಾಂಕ್ ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆಯಿಂದ ಶಶಾಂಕ್ ಕಣ್ಣಿಗೆ ಗಂಭೀರ ಗಾಯವಾಗಿ ಕಣ್ಣು ಕೆಳಗಿನ ಮೂಳೆ ಮುರಿದಿದೆ. ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಇದನ್ನೂ ನೋಡಿ: ಜಯಂತಿಗಳಿಗೆ ಜಾತಿಮಿತಿ ಬಂದಿರುವ ಕಾಲ ಇದು – ಬರಗೂರು ರಾಮಚಂದ್ರಪ್ಪ Janashakthi Media