ದೆಹಲಿ ಫೆ.15 : ಬೆಂಗಳೂರಿನ ಒಬ್ಬ ಹವಾಮಾನ ಕಾರ್ಯಕರ್ತೆ ದಿಶಾ ರವಿಯನ್ನು ದಿಲ್ಲಿ ಪೋಲೀಸ್ ಬಂಧಿಸಿರುವುದು ಒಂದು ಹೇಯ ಕೃತ್ಯ, ಇದು ಅತ್ಯಂತ ಖಂಡನೆಗೆ ಅರ್ಹವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಈ 22 ವರ್ಷ ವಯಸ್ಸಿನ ಕ್ರಿಯಾಶೀಲ ಕಾರ್ಯಕರ್ತೆ ರೈತ ಹೋರಾಟಕ್ಕೆ ಬೆಂಬಲವಾಗಿ ಒಂದು ‘ಟೂಲ್ ಕಿಟ್’ನ್ನು ಫಾರ್ವರ್ಡ್ ಮಾಡಿದ್ದಾಳೆ ಎಂಬ ಅಸಂಬದ್ದ ಆಧಾರದಲ್ಲಿ ಆಕೆಯ ಮೇಲೆ ದೇಶದ್ರೋಹದ ಮತ್ತು ಕ್ರಿಮಿನಲ್ ಪಿತೂರಿಯ ಆರೋಪವನ್ನು ಹಾಕಲಾಗಿದೆ.
ಸಂಶಯ ಪಿಶಾಚಿಯಾಗಿರುವ ಮೊದಿ ಸರಕಾರ ಯುವ ಕ್ರಿಯಾಶೀಲರುಗಳಿಗೆ ಕಿರುಕುಳ ಕೊಡುವುದನ್ನು ಕೊನೆಗೊಳಿಸಬೇಕು. ದಿಶಾ ರವಿಯ ವಿರುದ್ಧ ಹಾಕಿರುವ ಆರೋಪಗಳನ್ನು ಹಿಂದಕ್ಕೆ ಪಡೆಯಬೇಕು, ಆಕೆಯನ್ನು ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ.