ವಿವಿಧ ಮತಗಳ ಯುವಜನರು ಒಂದಾಗಿ ನಿರುದ್ಯೋಗ ವಿರುದ್ಧ ಹೋರಾಡಬೇಕು; ಸುರೇಶ್ ಕಲ್ಲಾಗರ

ಕುಂದಾಪುರ : ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ ಎಂಬ ಘೋಷಣೆ ಅಡಿಯಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕುಂದಾಪುರ 15ನೇ ತಾಲೂಕು ಸಮ್ಮೇಳನ ಭಾನುವಾರ ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ನಡೆಯಿತು. ನಿರುದ್ಯೋಗ

ಸಮ್ಮೇಳನವನ್ನು ಡಿವೈಎಫ್ಐ ತಾಲೂಕು ಉಪಾಧ್ಯಕ್ಷ ಸುರೇಶ್ ಕಲ್ಲಾಗರ ಉದ್ಘಾಟಿಸಿ ಮಾತನಾಡುತ್ತಾ, ದೇಶದಲ್ಲಿ ಶೇ 35 ರಷ್ಟು ಮಂದಿ ಯುವಜನರು ದೇಶದಲ್ಲಿದ್ದು ದೇಶವನ್ನು ಸಂಪದ್ಭರಿತವಾಗಿ ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ ಆದರೆ ಆಳುವವರ ನೀತಿಗಳಿಂದಾಗಿ ಯುವಜನರಿಗೆ ಉದ್ಯೋಗದ ಅಭದ್ರತೆ ಕಾಡುತ್ತಿದೆ ನಿರುದ್ಯೋಗದ ವಿರುದ್ಧ ಒಂದಾಗಬೇಕಾದ ಯುವಜನತೆ ಇಂದು ನಂಬಿಕೆಗಳು,ಆಚರಣೆಗಳ ವಿಚಾರವಾಗಿ ಅಪನಂಬಿಕೆಗಳು ಬೆಳೆದು ಬರುತ್ತಿರುವುದು ಐಕ್ಯತೆಗೆ ಅಪಾಯಕಾರಿಯಾಗಿದೆ ಆದುದರಿಂದ ವಿವಿಧ ಮತಗಳ ಯುವಜನರು ಒಂದಾಗಿ ನಿರುದ್ಯೋಗದ ವಿರುದ್ಧ ಹೋರಾಡಬೇಕು ಅಂತಹ ಹೋರಾಟ ಮುನ್ನೆಡೆಸಲು ಡಿವೈಎಫ್ಐ ಎಂಬ ಪ್ರಗತಿಪರ ಸಂಘಟನೆಗೆ ಮಾತ್ರ ಸಾಧ್ಯ ಎಂದು ಅವರು ಹೇಳಿದರು.

 

ಇದನ್ನು ಓದಿ : ಫೆ 12ರಿಂದ ಬಜೆಟ್ ಅಧಿವೇಶನ| ಬೆಳಗ್ಗೆ 9ರಿಂದಲೇ ಕಲಾಪಕ್ಕೆ ಚಿಂತನೆ – ಸ್ಪೀಕರ್ ಯು.ಟಿ. ಖಾದರ್

ಮುಖ್ಯ ಅತಿಥಿಗಳಾಗಿ ಡಿವೈಎಫ್ಐ ಮಾಜಿ ಅಧ್ಯಕ್ಷರಾದ ಎಚ್ ನರಸಿಂಹ, ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ಜನವಾದಿ ಮಹಿಳಾ ಸಂಘಟನೆಯ ನಾಯಕಿ ಶೀಲಾವತಿ ಪಡುಕೋಣೆ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮುಖಂಡರಾದ ಶ್ರೀಧರ ನಾಡ ಮಾತನಾಡಿದರು. ಡಿವೈಎಫ್ಐ ತಾಲೂಕು ಕಾರ್ಯದರ್ಶಿ ಗಣೇಶ್ ದಾಸ್ ವರದಿ ಮಂಡಿಸಿದರು.ವರದಿ ಮೇಲೆ ಚರ್ಚೆ ನಡೆಸಿ ಅಂಗೀಕರಿಸಲಾಯಿತು.

ಸಮ್ಮೇಳನದ ಅಧ್ಯಕ್ಷತೆಯನ್ನು ಡಿವೈಎಫ್ಐ ಅಧ್ಯಕ್ಷ ರಾಜೇಶ್ ವಡೇರಹೋಬಳಿ ವಹಿಸಿ ಧ್ವಜಾರೋಹಣ ನೆರವೇರಿಸಿದರು. ರವಿ ವಿಎಂ ಅತಿಥಿಗಳನ್ನು ಗೌರವಿಸಿದರು. ಸಮ್ಮೇಳನ ನೂತನ ಸಮಿತಿ ಆಯ್ಕೆ ಮಾಡಿತು. ಅಧ್ಯಕ್ಷರಾಗಿ ಗಣೇಶ್ ದಾಸ್ ಕಾರ್ಯದರ್ಶಿಯಾಗಿ ನಿಸರ್ಗ ಅವರನ್ನು ಆಯ್ಕೆ ಮಾಡಿತು.

17 ಮಂದಿ ಪದಾಧಿಕಾರಿಗಳನ್ನೋಳಗೊಂಡ 26 ಮಂದಿಯ ತಾಲೂಕು ಸಮಿತಿ ಆಯ್ಕೆಯಾಯಿತು. ಫೆಬ್ರವರಿ 11 ರಂದು ಉಡುಪಿಯಲ್ಲಿ ಯುವಜನರ ಜಿಲ್ಲಾ ಸಮಾವೇಶ ಹಾಗೂ ಪೆಬ್ರವರಿ 25 ರಿಂದ 27 ರ ವರೆಗೆ ಮಂಗಳೂರಿನಲ್ಲಿ ರಾಜ್ಯ ಸಮ್ಮೇಳನ ನಡೆಯಲಿದೆ ಎಂದು ನೂತನ ಸಮಿತಿಯು ತಿಳಿಸಿದೆ.

ಇದನ್ನು ನೋಡಿ : ಪತ್ರಕರ್ತರ ಸಮ್ಮೇಳನ : ‘ಕೃತಕ ಬುದ್ಧಿಮತ್ತೆ ಮತ್ತು ಮಾಧ್ಯಮಗಳ ಭವಿಷ್ಯ’

Donate Janashakthi Media

Leave a Reply

Your email address will not be published. Required fields are marked *