ವಾರಣಾಸಿ: 19 ವರ್ಷದ ಯುವತಿಯೊಬ್ಬರು ಸ್ನೇಹಿತರನ್ನು ಭೇಟಿಯಾಗಲು ಹೋಗಿದ್ದೂ, ಆಕೆಯನ್ನು ಅಪಹರಿಸಿ ಏಳು ದಿನಗಳಲ್ಲಿ ಸುಮಾರು 23 ಜನ ಪುರುಷರು ಸಾಮೂಹಿಕ ಅತ್ಯಾಚಾರ ಮಾಡಿರುವ ದಾರುಣ ಘಟನೆ ವಾರಣಾಸಿಯಲ್ಲಿ ನಡೆದಿದೆ.
ಸ್ನೇಹಿತನನ್ನು ಭೇಟಿಯಾಗಲು ಅವಳು ಮಾರ್ಚ್ 29 ರಂದು ಹೋಗಿದ್ದಳು, ಈ ವೇಳೆ ವಾಪಸ್ ಆಗುವ ವೇಳೆ ಆರೋಪಿ ರಾಜ್ ವಿಶ್ವಕರ್ಮ ಎಂಬಾತ ಸಿಕ್ಕಿ ಆಕೆಯನ್ನು ಕೆಫೆಯೊಂದಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಮತ್ತು ಬರುವ ದ್ರವ್ಯ ಹಾಕಿ ಆಕೆಯ ಮೇಲೆ ರಾತ್ರಿ ಇಡೀ ಅತ್ಯಾಚಾರ ನಡೆಸಿದ್ದಾನೆ.
ಮರುದಿನ ಯುವತಿ ಸಮೀರ್ ಹಾಗೂ ಆತನ ಸ್ನೇಹಿತನನ್ನು ಭೇಟಿಯಾಗಲು ಹೋಗಿದ್ದಳು. ಈ ವೇಳೆ ಹೆದ್ದಾರಿಯ ಬಳಿ ಅವಳ ಮೇಲೆ ಅತ್ಯಾಚಾರ ಮಾಡಿ ನಾಡೇಸರ್‌ನಲ್ಲಿ ಬಿಟ್ಟು ಪರಾರಿಯಾಗಿದ್ದರು. ಈ ಎಲ್ಲಾ ನೋವನ್ನು ಹೇಳಿಕೊಳ್ಳಲು ಮಾರ್ಚ್ 31 ರಂದು ಸೋಹೆಲ್, ಅನ್ಮೋಲ್, ಡ್ಯಾನಿಶ್, ಸಾಜಿದ್ ಮತ್ತು ಜಹೀರ್ ಅವರನ್ನು ಭೇಟಿಯಾದ್ದಳು.
ಇದನ್ನೂ ಓದಿ: ಕೇಂದ್ರದಿಂದ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಪ್ರತಿ ಲೀ. 2 ರೂ.ಗೆ ಏರಿಕೆ
ಈ ವೇಳೆ ಆಕೆಗೆ ಸಮಾಧಾನ ಮಾಡುವ ನೆಪದಲ್ಲಿ ಮಾದಕ ದ್ರವ್ಯ ನೀಡಿ ಕೆಫೆಯಲ್ಲೇ ಮತ್ತೆ ಅತ್ಯಾಚಾರ ನಡೆಸಿದ್ದಾರೆ. ಮಾರನೇ ದಿನ ಏಪ್ರಿಲ್ 1 ರಂದು ಸಾಜಿದ್ ಹಾಗೂ ಆತನ ಸ್ನೇಹಿತರು ಸಂತ್ರಸ್ತೆಯನ್ನು ಹೋಟೆಲ್ ಕರೆದೊಯ್ಡಿದ್ದರು. ಈ ವೇಳೆ ಅಲ್ಲಿ ಕೂಡ ಕೂಡ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದರು.
ಇದಾಗಿ ಎರಡು ದಿನ ಸಂತಸ್ತೆಯನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಕೊನೆಗೆ ಏಪ್ರಿಲ್ 4 ರಂದು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದು ಮನೆಯಲ್ಲಿ ಪೋಷಕರ ಬಳಿ ನೋವನ್ನು ಹೇಳಿಕೊಂಡಿದ್ದಾಳೆ. ಕೂಡಲೇ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಮೇರೆಗೆ ರಾಜ್ ವಿಶ್ವಕರ್ಮ, ಸಮೀರ್, ಆಯುಷ್, ಸೋಹೆಲ್, ಡ್ಯಾನಿಶ್, ಅನ್ಮೋಲ್, ಸಾಜಿದ್, ಜಹೀರ್, ಇಮ್ರಾನ್, ಜೈಬ್, ಅಮನ್, ರಾಜ್ ಖಾನ್ ಮತ್ತು 11 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ನೋಡಿ: ಆರೋಗ್ಯ ಹಕ್ಕು | ಆರೋಗ್ಯ ಎಂದರೆ ರೋಗವಿಲ್ಲದಿರುವುದೇ?! | ಸರಣಿ ಕಾರ್ಯಕ್ರಮ – ಸಂಚಿಕೆ 01 Janashakthi Media