ಬೆಂಗಳೂರು: ಕೆಲಸ ಒತ್ತಡದಿಂದ ಯುವಕರ ಜೀವನ ಹಾಳಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಪೋಸ್ಟ್‌ಗಳು ಹರಿದಾಡುತ್ತಿರುತ್ತವೆ. ಇದರ ನಡುವೆ, ನಗರದ 22 ವರ್ಷದ ಅನ್ಶುಲ್ ಉತ್ತಯ್ಯ ಎಂಬ ಉದ್ಯೋಗಿವೊಬ್ಬರು ಡಿಸೆಂಬರ್ 1ರಂದು ತಮ್ಮ ಒಂದು ವಿಡಿಯೋದಲ್ಲಿ ತಾನು ಮಾಡುತ್ತಿರುವ ಕೆಲಸಕ್ಕೆ ರಾಜೀನಾಮೆ ನೀಡುವುದಾಗಿ ಸಾಮಾಜಿಕ ತಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡು ನೆಟ್ಟಿಗರ ಮನಸ್ಸು ಗೆದ್ದಿದ್ದಾರೆ. ನಾಳೆ
ಇನ್‌ಸ್ಟಾಗ್ರಾಮ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ‘ನಾನು ನಾಳೆ ನನ್ನ ಕೆಲಸವನ್ನು ಬಿಡುತ್ತಿದ್ದೇನೆ. ಕೆಲಸ ಬಿಟ್ಟ ನಂತರ ಮುಂದೆ ಏನು ಮಾಡಬೇಕು ಎಂದು ತಿಳಿದಿಲ್ಲ. ನಾನು ಮಾಡುವ ಕೆಲಸವನ್ನು ನಾನು ದ್ವೇಷಿಸುತ್ತೇನೆ. ನನ್ನ ಜೀವನದಲ್ಲಿ ಎದುರಿಸುತ್ತಿರುವ ಈ ಕೆಟ್ಟ ಕ್ಷಣವನ್ನು ದೂರು ಮಾಡುವೆ. ಆಸ್ಟ್ರೇಲಿಯಾದ ಎರಡು ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದೇನೆ. ಆದರೆ ಅದನ್ನು ಬಿಟ್ಟು ಈ ಕೆಲಸಕ್ಕೆ ಬಂದೆ. ಎರಡನ್ನು ಜತೆಗೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಒಂದನ್ನು ಆಯ್ಕೆ ಮಾಡಿಕೊಂಡೆ. ನಾಳೆ
ಇದನ್ನೂ ಓದಿ: ವಿಜಯಪುರ | ಇಂದಿನ ರಾಜಕಾರಣಿಗಳಿಗೆ ಸಾಂಸ್ಕೃತಿಕ ಶಿಕ್ಷಣದ ಕೊರತೆ ಇದೆ – ಚಿಂತಕ ಡಾ.ರಹಮತ್ ತರೀಕೆರೆ
ಇಂದು ನಾನು ಪೂರ್ಣಾವಧಿ ಕೆಲಸ ಮಾಡುತ್ತೇನೆ, ಆದರೆ ಅದು ನನಗೆ ಇಷ್ಟವಿಲ್ಲ. ಕೆಲಸ ನನಗೆ ತುಂಬಾ ಬೇಸರ ತಂದಿದೆ. ಈ ಕೆಲಸ ದೊಡ್ಡ ತಲೆನೋವು ನನಗೆ. ಇನ್ಮುಂದೆ ಇದನ್ನು ಮುಂದುವರಿಸಲು ಸಾಧ್ಯವಿಲ್ಲ. ಇದರಿಂದ ನನ್ನ ಸಮಯ ಕೂಡ ವ್ಯರ್ಥವಾಗಿದೆ. ಬೆಳಿಗ್ಗೆ 7:45ಕ್ಕೆ ಎದ್ದು, 10.00 ಗಂಟೆಯೊಳಗೆ ಆಫೀಸ್ಗೆ ಹೋಗಬೇಕು. ಇದು ನನಗೆ ದೊಡ್ಡ ಹಿಂಸೆ ನೀಡುತ್ತಿದೆ. ಹೀಗಾಗಿ ನನಗೆ ಹೆಚ್ಚು ಸಮಯ ಕೂಡ ಸಿಗುತ್ತಿಲ್ಲ. ಆದರೆ ಒಂದು ಕಡೆ ಭಯ ಕೂಡ ಆಗುತ್ತಿದೆ. ಸ್ಥಿರವಾದ ಕೆಲಸವಿಲ್ಲ ಹಾಗೂ ಆದಾಯವಿಲ್ಲ. ಮುಂದೆ ಹೇಗೆ ಎಂಬ ಯೋಚನೆ ಉಂಟಾಗಿದೆ. ಆದರೆ ಕೆಲಸ ಬಿಡುವುದು ನನಗೆ ಅನಿವಾರ್ಯ ಎಂದು ಅನ್ಶುಲ್ ಉತ್ತಯ್ಯ ಹೇಳಿದ್ದಾರೆ.
ಇನ್ನು ಮಗನ ಈ ನಿರ್ಧಾರದ ಬಗ್ಗೆ ಅನ್ಶುಲ್ ಉತ್ತಯ್ಯ ಅವರ ತಂದೆ -ತಾಯಿಗೆ ಖುಷಿ ತಂದಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಅನ್ಶುಲ್ ಉತ್ತಯ್ಯ ಅವರು ಈ ವಿಡಿಯೋ ಹಂಚಿಕೊಳ್ಳುವ ಮೊದಲು 10,000 ಫಾಲೋರ್ಸ್ಗಳನ್ನು ಹೊಂದಿದ್ದರು. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ20 ಸಾವಿರ ಫಾಲೋರ್ಸ್ಗಳನ್ನು ಗಳಿಸಿದ್ದಾರೆ. ಈ ವಿಡಿಯೋ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅವರು ಮೂರು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವೊಂದು ವಿಷಯಗಳ ಬಗ್ಗೆ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದರು.
ಹಾಗಾಗಿ ಕೆಲಸವನ್ನು ಬಿಟ್ಟು ತಮ್ಮ ಪೂರ್ತಿ ಸಮಯನ್ನು ಇನ್ಸ್ಟಾಗ್ರಾಮ್ಗೆ ನೀಡಲು ಬಯಸಿದ್ದಾರೆ. ಇದೀಗ ಅನ್ಶುಲ್ ಉತ್ತಯ್ಯ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಕಮೆಂಟ್ ಬಂದಿದೆ. ಒಬ್ಬರು ಬೆಂಗಳೂರಿನಲ್ಲಿ ಶೀತ ಹಾಗೂ ಹವಾಮಾನ ವಾತಾವರಣ ಇದೆ.ಇದರ ಮಧ್ಯೆ ಇದೊಂದು ದುಃಖಕರ ವಿಚಾರ ಎಂದು ತಮಾಷೆಯಾಗಿ ಹೇಳಿದ್ದಾರೆ. ಅರ್ಪಿತಾ ಶರ್ಮಾ ಎಂಬುವವರು, ನನ್ನ ಕಡೆಯಿಂದ ಸಂಪೂರ್ಣ ಬೆಂಬಲ ಮತ್ತು ನಿಮಗೆ ದೊಡ್ಡ ಅಭಿನಂದನೆಗಳು ಎಂದು ಹೇಳಿದ್ದಾರೆ.
ಇದನ್ನೂ ನೋಡಿ: ಕಾರ್ಖಾನೆ ಕಾರ್ಮಿಕರ ಸಂಕಟಗಳು |CITU | ಕಾರ್ಮಿಕರು Janashakthi Media
