ಮಂಗಳೂರು: ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದ ನೇತೃತ್ವದಲ್ಲಿ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾದ ಡಿವೈಎಫ್ಐ ಮುಖಂಡ ಕಾಂ ಶ್ರೀನಿವಾಸ್ ಬಜಾಲ್ ಅವರ 21 ನೇ ವರುಷದ ಹುತಾತ್ಮ ದಿನ ಅಂಗವಾಗಿ ಮಂಗಳೂರು ಬಜಾಲ್‌ನ ಭಗತ್ ಸಿಂಗ್ ಭವನದಲ್ಲಿ (25-06-2023) ರಂದು ರಕ್ತದಾನ ಶಿಬಿರ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ನೇರೆವೆರಿಸಲಾಯಿತು.
ಕಾರ್ಯಕ್ರಮವನ್ನು ಶಾಫೀ ನರ್ಸಿಂಗ್ ಹೋಮ್‌ನ ವೈದ್ಯರಾದ ಡಾ ಚರಣ್ ಎ ಉದ್ಘಾಟಿಸಿ ಮಾತನಾಡುತ್ತಾ, ನಮ್ಮದು ಜಾತ್ಯಾತೀತ ರಾಷ್ಟ್ರ. ಜಾತ್ಯಾತೀತತೆಯ ಮೌಲ್ಯಗಳನ್ನೇ ಬುಡಮೇಲು ಮಾಡಿ ಅದರ ಆಶಯಗಳಿಗೆ ವಿರುದ್ಧವಾಗಿ ಯುವಜನರನ್ನು ಧಿಕ್ಕುತಪ್ಪಿಸುವ ಮತಾಂದ ಶಕ್ತಿಗಳಿಂದ ಮತ್ತು ಅಂತಹ ಒಡೆದಾಳುವ ನೀತಿಗಳಿಂದ ಈ ದೇಶಕ್ಕೆ ಅಪಾಯ ಕಾದಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಯುವತಲೆಮಾರು ಜಾತ್ಯಾತೀತ ಮೌಲ್ಯಗಳನ್ನು ಎತ್ತಿಹಿಡಿಯಲು ಮುಂದಾಗಬೇಕೆಂದು ಯುವಜನರಿಗೆ ಕರೆ ನೀಡಿದರು.
ಕರಾವಳಿಯಲ್ಲಿ ಧರ್ಮದ ಆಧಾರದ ರಾಜಕಾರಣಕ್ಕೆ ಇಂದಿನ ಯುವಜನತೆ ಬಲಿಯಾಗುತ್ತಿದ್ದಾರೆ. ಬಹುತೇಕ ಹಿಂದುಳಿದ ವರ್ಗದ, ಬಡವರ ಮನೆಯ ಯುವಕರು ವಿಭಜನೆಯ ರಾಜಕಾರಣಕ್ಕೆ ಕಾಲಾಳುಗಳಾಗಿ ದಾರಿ ತಪ್ಪುತಿದ್ದಾರೆ ಎಂದು ಕಳವಳವನ್ನ ವ್ಯಕ್ತಪಡಿಸಿದ್ದಾರೆ. ಇಂತಹ ದಾರಿ ತಪ್ಪಿಸುವ ಮತೀಯ ಸಂಘಟನೆಗಳ ನಡುವೆ ಜಾತ್ಯಾತೀತ ಮೌಲ್ಯಗಳನ್ನು ಎತ್ತಿ ಹಿಡಿದು ಈ ನಾಡಿನ ಅಸಮಾನತೆಯ ವಿರುದ್ಧ, ಅನ್ಯಾಯಗಳ ವಿರುದ್ಧ ರಾಜೀರಹಿತ ಹೋರಾಟಗಳನ್ನು ನಡೆಸುತ್ತಿರುವ ಡಿವೈಎಫ್ಐ ಸಂಘಟನೆ ಈ ಸಮಾಜಕ್ಕೆ ಮಾದರಿ ಸಂಘಟನೆಯಾಗಿದೆ ಎಂದು ಮೆಚ್ಚುಗೆಯನ್ನ ವ್ಯಕ್ತಪಡಿಸಿದರು. ಸಮಾಜವನ್ನು ಓಡೆಯುವಂತಹ ಸಂಘಟನೆಗಳಲ್ಲಿ ತೊಡಗಿಸಿ ದಾರಿ ತಪ್ಪುವ ಬದಲಾಗಿ, ದೇಶದ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದು ಸದಾ ಹೋರಾಟದ ಪಥದಲ್ಲಿರುವ ಡಿವೈಎಫ್ಐ ಸಂಘಟನೆಯಲ್ಲಿ ಸೇರಿ ಸಮಾಜವನ್ನು ಕಟ್ಟುವಂತಾಗ ಬೇಕು ಎಂದು ಸಾರ್ವಜನಿಕರಲ್ಲಿ ಕರೆ ನೀಡಿದರು.
ಇದನ್ನೂ ಓದಿ:ಸುಳ್ಳು ಮೊಕದ್ದಮೆ ವಾಪಸ್ ಪಡೆಯಲು ಒತ್ತಾಯ: ಬೀದಿಬದಿ ವ್ಯಾಪಾರಿಗಳಿಂದ ಮಂಗಳೂರು ಮಹಾನಗರ ಪಾಲಿಕೆ ಚಲೋ
ಕಳೆದ 21 ವರುಷಗಳಿಂದ ಶ್ರೀನಿವಾಸ್ ಬಜಾಲ್ ಅವರ ನೆನಪಿನಲ್ಲಿ ರಕ್ತದಾನ ಶಿಬಿರಗಳನ್ನು ನಡೆಸುವ ಮೂಲಕ ಇನ್ನೊಂದು ಜೀವಗಳನ್ನು ಉಳಿಸುವಂತಹ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಡಿವೈಎಫ್ಐ ಸಂಘಟಿಸುವ ಸಮಾಜಮುಖಿ ಕೆಲಸಗಳು ಯಶಸ್ವಿಯಾಗಿ ನಡೆಯಲಿ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಗರಿಷ್ಟ ಅಂಕ ಪಡೆದ ವಿದ್ಯಾರ್ಥಿಗಳನ್ನು ಶ್ರೀನಿವಾಸ್ ಬಜಾಲ್ ಸ್ಮರಣಾರ್ಥ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ 55 ಕ್ಕೂ ಮಿಕ್ಕಿ ಕಾರ್ಯಕರ್ತರು ರಕ್ತದಾನ ಮಾಡಿದ್ದಾರೆ.
ವೇದಿಕೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕೌನ್ಸಿಲರ್ ಗಣೇಶ್, ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷರಾದ ದೀಪಕ್ ಬಜಾಲ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ನಗರ ಕಾರ್ಯದರ್ಶಿ ನವೀನ್ ಕೊಂಚಾಡಿ ಉಪಸ್ಥಿತರಿದ್ದರು ಎಂದು ಕಾರ್ಯದರ್ಶಿ ಆನಂದ ಎನೆಲ್ಮಾರ್ ವಂದಿಸಿದರು.